This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ಅನುದಾನಿತ ಶಿಕ್ಷಣ ಸಂಸ್ಥೆಗಳ ಖಾಲಿ ಹುದ್ದೆ ನೇಮಕಕ್ಕೆ ಅಸ್ತು, ನಿಮ್ಮಲ್ಲಿನ ಶಾಲೆಯಲ್ಲೂ ಹುದ್ದೆ ಖಾಲಿ ಇರಬಹುದು ತಿಳಿದುಕೊಳ್ಳಿ

ಅನುದಾನಿತ ಶಿಕ್ಷಣ ಸಂಸ್ಥೆಗಳ ಖಾಲಿ ಹುದ್ದೆ ನೇಮಕಕ್ಕೆ ಅಸ್ತು, ನಿಮ್ಮಲ್ಲಿನ ಶಾಲೆಯಲ್ಲೂ ಹುದ್ದೆ ಖಾಲಿ ಇರಬಹುದು ತಿಳಿದುಕೊಳ್ಳಿ

ಕರ್ನಾಟಕ ಸರ್ಕಾರದ ವೇತನಾನುದಾನಕ್ಕೆ ಒಳಪಟ್ಟಿರುವ ರಾಜ್ಯದ ಖಾಸಗಿ ಅನುದಾನಿತ ಪ್ರೌಢಶಾಲೆ, ಪಿಯು ಕಾಲೇಜು ಮತ್ತು ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಷರತ್ತುಬದ್ಧ ಒಪ್ಪಿಗೆ ನೀಡಿದೆ.

ಶಾಲಾ ಶಿಕ್ಷಣ ಇಲಾಖೆ ಮತ್ತು ಉನ್ನತ ಶಿಕ್ಷಣ ಇಲಾಖೆಯ ಪ್ರಪೋಸಲ್ ಆಧರಿಸಿ 1987 ರಿಂದ 1994 ರ ಅವಧಿಯಲ್ಲಿ ಆರಂಭಗೊಂಡು ವೇತನಾನುದಾನಕ್ಕೆ ಒಳಪಟ್ಟಿರುವ ಪ್ರೌಢಶಾಲೆ, ಪಿಯು, ಪದವಿ ಕಾಲೇಜುಗಳಲ್ಲಿ 2016 ರ ಜನವರಿ 1 ರಿಂದ 2020 ರ ಡಿಸೆಂಬರ್ 31 ರವರೆಗೆ ನಿವೃತ್ತಿ, ನಿಧನ, ರಾಜೀನಾಮೆ ಸೇರಿದಂತೆ ಮತ್ತಿತರ ಕಾರಣಗಳಿಂದ ಖಾಲಿ ಆಗಿರುವ ಬೋಧಕ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಸಮ್ಮತಿಸಿದೆ.

ಕರ್ನಾಟಕದಲ್ಲಿ ಪದವಿ, ಬಿ.ಇಡಿ, ಎಂಎ, ಎಂಇಡಿ, ಕೆಸೆಟ್, ಎನ್‌ಇಟಿ ಪಾಸಾದವರು ಬೋಧಕ ಹುದ್ದೆಗಳಲ್ಲಿ ಆಸಕ್ತಿ ಇದ್ದಲ್ಲಿ, ಅದರಲ್ಲೂ ಸರ್ಕಾರಿ ಹುದ್ದೆಯನ್ನೇ ಪಡೆಯಬೇಕು ಎಂದುಕೊಂಡವರು ಮುಂದಿನ ದಿನಗಳಲ್ಲಿ ಅಧಿಸೂಚಿಸಲಾಗುವ ಅನುದಾನಿತ ಪ್ರೌಢಶಾಲೆ, ಪಿಯು ಕಾಲೇಜು ಮತ್ತು ಪದವಿ ಕಾಲೇಜುಗಳ ಬೋಧಕ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಇಂದಿನಿಂದಲೇ ಉತ್ತಮ ಸಿದ್ಧತೆ ನಡೆಸಿಕೊಳ್ಳಿ. ಯಾವಾಗ ಬೇಕಾದರೂ ಈ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆಗಳಿವೆ.

ಕೆಲವು ನೇಮಕಾತಿ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟ
ಆಗಸ್ಟ್‌ ಹಾಗೂ ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ನಡೆಸಲು ಉದ್ದೇಶಿಸಿರುವ ನೇಮಕಾತಿ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿದೆ. ಈ ವರ್ಷ ಬಿಡುಗಡೆ ಮಾಡಿರುವ ಹಲವು ಹುದ್ದೆಗಳಿಗೆ ಕೆಇಎ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದೆ. ನೀವು ಸಹ ಕೆಇಎ ಅಧಿಸೂಚನೆಗಳಿಗೆ ಅರ್ಜಿ ಹಾಕಿದ್ದರೆ ಈ ಪರೀಕ್ಷೆ ದಿನಾಂಕಗಳನ್ನು ತಪ್ಪದೇ ಓದಿರಿ.

ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಇಂಜಿನಿಯರ್ ಹುದ್ದೆಗಳ ನೇಮಕಕ್ಕೆ ಆಗಸ್ಟ್‌ 11 ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಜುಲೈ 20 ರಂದು ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆಗೆ ಗೈರಾದವರಿಗೆ ಈ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ. ಬಿಎಂಟಿಸಿ (ನಾನ್‌ ಹೆಚ್‌ಕೆ) ಪರೀಕ್ಷೆ ಸೆಪ್ಟೆಂಬರ್ 1 ರಂದು ಪಿಎಸ್‌ಐ ಪರೀಕ್ಷೆ ಸೆಪ್ಟೆಂಬರ್ 22 ರಂದು ಗ್ರಾಮ ಆಡಳಿತಾಧಿಕಾರಿ ಮತ್ತು ಜಿಟಿಟಿಸಿಗೆ ಕಡ್ಡಾಯ ಕನ್ನಡ ಪರೀಕ್ಷೆ ಸೆಪ್ಟೆಂಬರ್ 29 ರಂದು ನಡೆಯಲಿದೆ. ಗ್ರಾಮ ಆಡಳಿತಾಧಿಕಾರಿ ಹುದ್ದೆ ಪರೀಕ್ಷೆ ಅಕ್ಟೋಬರ್ 27 ರಂದು ನಡೆಸಲಾಗುತ್ತದೆ ಎಂದು ತಿಳಿಸಿದೆ.

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆಗಳೇನು?
– ಪದವಿಯಲ್ಲಿ ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಪಾಸ್ ಮತ್ತು ಪ್ರಾಥಮಿಕ ಶಿಕ್ಷಣ ತರಬೇತಿಯ 2 ವರ್ಷಗಳ ಡಿಪ್ಲೊಮ ಪಾಸಾಗಿರಬೇಕು. ಅಥವಾ
– ಪದವಿಯಲ್ಲಿ ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಉತ್ತೀರ್ಣ ಮತ್ತು ಬಿ.ಇಡಿ ಪದವಿ ಪಡೆದಿರಬೇಕು. ಅಥವಾ
– ವಿಶೇಷ ಶಿಕ್ಷಣ (ಸ್ಪೆಷಲ್ ಎಜುಕೇಶನ್) ಪದವಿ ಪಡೆದಿರಬೇಕು. ಅಥವಾ ಪಿಯುಸಿಯಲ್ಲಿ ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಉತ್ತೀರ್ಣ ಮತ್ತು 4 ವರ್ಷದ ಬ್ಯಾಚುಲರ್ ಆಫ್‌ ಎಲಿಮೆಂಟರಿ ಎಜುಕೇಷನ್‌ನಲ್ಲಿ ಪದವಿ ಅಥವಾ 4 ವರ್ಷಗಳ ಬ್ಯಾಚುಲರ್ ಆಫ್‌ ಎಜುಕೇಷನ್‌ನಲ್ಲಿ ಪಾಸಾಗಿರಬೇಕು.
– ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಪ್ರವರ್ಗ-1, ವಿಕಲಚೇತನ ಅಭ್ಯರ್ಥಿಗಳು ನಿಗದಿತ ವಿದ್ಯಾರ್ಹತೆಯಲ್ಲಿ ಕನಿಷ್ಠ 45 ಅಂಕಗಳನ್ನು ಗಳಿಸಿರಬೇಕು. ಹಾಗೂ
– ಕಾಲ ಕಾಲಕ್ಕೆ ಎನ್‌ಸಿಟಿಇಯು ನಿಗದಿಪಡಿಸಿದ ಯಾವುದಾದರು ಉನ್ನತ ಅಥವಾ ಹೆಚ್ಚುವರಿ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.
– ಸಮಾಜ ಪಾಠಗಳು ಹುದ್ದೆಗಳಿಗಾಗಿ – ಸಮಾಜ ಪಾಠ ಸಮೂಹ ವಿಷಯಗಳಾದ ಇತಿಹಾಸ / ಅರ್ಥಶಾಸ್ತ್ರ / ಭೂಗೋಳಶಾಸ್ತ್ರ / ರಾಜ್ಯಶಾಸ್ತ್ರ ಇವುಗಳ ಪೈಕಿ ಯಾವುದಾದರೂ ಎರಡು ವಿಷಯಗಳನ್ನು ಐಚ್ಛಿಕ ವಿಷಯಗಳಾಗಿ ಅಭ್ಯಾಸ ಮಾಡಿರಬೇಕು.
– ಬಿಇ ವ್ಯಾಸಂಗದಲ್ಲಿ ಆರ್ಕಿಟೆಕ್ಚರ್ ವಿಭಾಗದಲ್ಲಿ ಮೊದಲ 3 ಅಥವಾ 4 ಸೆಮಿಸ್ಟರ್‌ನಲ್ಲಿ ಗಣಿತ ಹಾಗೂ ಉಳಿದ ಸೆಮಿಸ್ಟರ್‌ನಲ್ಲಿ ಅಪ್ಲೈಡ್ ಮ್ಯಾಥಮೆಟಿಕ್ಸ್‌ ಓದಿರುವವರಿಗೆ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಎಷ್ಟು?
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಶ್ರೇಣಿ ರೂ.27,650 ದಿಂದ ರೂ.52,650 ವರೆಗೆ.

ಪಿಯು ಕಾಲೇಜು ಮತ್ತು ಪದವಿ ಕಾಲೇಜು ಬೋಧಕ ಹುದ್ದೆಗೆ ಶೈಕ್ಷಣಿಕ ಅರ್ಹತೆಗಳು?
ಪಿಯು ಕಾಲೇಜು ಬೋಧಕ ಹುದ್ದೆಗೆ ಸ್ನಾತಕೋತ್ತರ ಪದವಿ ಜತೆಗೆ ಬಿ.ಇಡಿ, ಎಂ.ಇಡಿ ಶಿಕ್ಷಣ ಪಡೆದಿರಬೇಕು.
ಪದವಿ ಕಾಲೇಜು ಬೋಧಕ ಹುದ್ದೆಗೆ ಸ್ನಾತಕೋತ್ತರ ಪದವಿ ಜತೆಗೆ ಕೆಸೆಟ್ / ಎನ್‌ಇಟಿ / ಪಿಹೆಚ್‌ಡಿ ಪದವಿ ಪಾಸಾಗಿರಬೇಕು.

Nimma Suddi
";