ಬಾಗಲಕೋಟೆ
ನಮ್ಮ ಮಾತೃ ಭಾಷೆಯಷ್ಟೇ ಮಹತ್ವ ಪಡೆಯುತ್ತಿರುವ ಮತ್ತೊಂದು ಭಾಷೆ ಎಂದರೆ ಅದು ತಂತ್ರಜ್ಞಾನದ ಭಾಷೆ. ಅದು ಎಲ್ಲಾ ಮೇರೆಗಳನ್ನು ಮೀರಿ ಸಂಬAಧಗಳನ್ನು ಸಂವಹನ ಶಕ್ತಿಯನ್ನು ಪಡೆಯುತ್ತಿದೆ ಎಂದು ಬಸವೇಶ್ವರ ಎಂಜನಿಯರ್ ಕಾಲೇಜಿನ ಪ್ರಾಧ್ಯಾಪಕ ಡಾ.ಕೆ.ಚಂದ್ರಶೇಖರ ಹೇಳಿದರು.
ನಗರದ ಬವಿವ ಸಂಘದ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ಸರ್ಟಿಫೀಕೇಟ್ ಕೋರ್ಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ಪ್ರತಿಭಾವಂತ ಯುವ ಸಮೂಹ ತಂತ್ರಜ್ಞಾನದ ಭಾಷೆ ಕಲಿಯಲೇಬೇಕಾದ ಅಗತ್ಯತೆ ಹೆಚ್ಚಿದೆ ಎಂದು ಹೇಳಿದರು.
ಇಂದಿನ ಸ್ಪರ್ಧಾತ್ಮಕ ಯುಗವು ತೀವ್ರವಾಗಿ ತಾಂತ್ರಿಕ ಜಗತ್ತಿಗೆ ಒಗ್ಗಿಕೊಂಡಿದೆ. ಪ್ರತಿ ಕ್ಷೇತ್ರಕ್ಕೂ ಲಗ್ಗೆ ಇಟ್ಟಿರುವ ತಾಂತ್ರಿಕ ಜಗತ್ತು ತನ್ನದೇ ಆದ ಸಾಂಕೇತಿಕ ಭಾಷಾ ಪ್ರಭುತ್ವ ಒಳಗೊಳ್ಳುತ್ತಿದೆ. ಯುವ ಸಮುಹ ಆ ತಂತ್ರಜ್ಞಾನದ ಭಾಷೆ ಅರಿತು ಮುನ್ನುಗ್ಗಿದಾಗ ಮಾತ್ರ ಔದ್ಯಮಿಕ ಕ್ಷೇತ್ರದಲ್ಲಿ ಯಶಸ್ಸು ಸಿಗಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಸ್.ಎಂ.ಗಾಂವಕರ್, ಈಗ ಹಮ್ಮಿಕೊಳ್ಳಲಾಗಿರುವ ೧೦ ಸರ್ಟಿಫಿಕೇಟ್ ಕೋರ್ಸ್ಗಳ ಮಹತ್ವವನ್ನು ವಿದ್ಯಾರ್ಥಿಗಳು ಅರಿತುಕೊಂಡು ಪ್ರಾಜೆಕ್ಟ್ ಸಿದ್ಧಪಡಿಸುವ ಕೌಶಲ್ಯ ಅರಿಯಬೇಕಿದೆ. ಈ ಕಾರಣಕ್ಕಾಗಿ ಇಂಥ ಕೋರ್ಸುಗಳನ್ನು ನಮ್ಮ ಕಾಲೇಜಿನಲ್ಲಿ ಪ್ರತಿ ಸೆಮಿಸ್ಟರ್ ವೇಳೆ ಹಮ್ಮಿಕೊಳ್ಳುತ್ತ ಬರುತ್ತಿದ್ದೇವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಕಲ್ಯಾಣ ಅಕಾರಿ ಎಸ್.ಜಿ.ಹುನಸಿಕಾಯಿ, ಐಕ್ಯುಎಸಿ ಸಂಯೋಜಕ ಡಾ.ಡಿ.ಎಸ್.ಲಮಾಣಿ, ವಿ.ಎನ್.ಒನಕುದುರಿ, ಸವಿತಾ ದಾದನಟ್ಟಿ, ವಿದ್ಯಾರ್ಥಿನಿ ಸುಷ್ಮಾ ಕೋಟಿ ಇತರರಿದ್ದರು.