This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local NewsPolitics NewsState News

Kodi Mutt Swamiji: ರಾಜ್ಯ, ರಾಷ್ಟ್ರ ರಾಜಕೀಯದಲ್ಲಿ ಅಸ್ಥಿರತೆ ಕಾಡಲಿದೆ: ಕೋಡಿಮಠ ಶ್ರೀ ಸ್ಫೋಟಕ ಭವಿಷ್ಯ

Kodi Mutt Swamiji: ರಾಜ್ಯ, ರಾಷ್ಟ್ರ ರಾಜಕೀಯದಲ್ಲಿ ಅಸ್ಥಿರತೆ ಕಾಡಲಿದೆ: ಕೋಡಿಮಠ ಶ್ರೀ ಸ್ಫೋಟಕ ಭವಿಷ್ಯ

ಹುಬ್ಬಳ್ಳಿ:

ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ಕ್ಷೇತ್ರದ ಬಗ್ಗೆ ಕೋಡಿ ಮಠದ ಸ್ವಾಮೀಜಿ ಮತ್ತೊಂದು ಭವಿಷ್ಯ ನುಡಿದಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಅಸ್ಥಿರತೆ ಕಾಡಲಿದೆ, ಯುಗಾದಿ ನಂತರ ಏನಾಗುತ್ತೋ‌ ಕಾದು‌ ನೋಡಿ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Kodi Mutt Swamiji) ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸೋಮವಾರ ಸ್ವಾಮೀಜಿ ಮಾತನಾಡಿದ್ದಾರೆ. ರಾಜ್ಯದಲ್ಲಿ ಬರಗಾಲದ ಛಾಯೆ ವಿಚಾರ ಪ್ರತಿಕ್ರಿಯಿಸಿ, ಮನುಷ್ಯ ಮಾಡಿದ ತಪ್ಪುಗಳಿಗೆ ದೇವರು ಕ್ಷಮಿಸುತ್ತಾನೆ. ಆದರೆ ಮನುಷ್ಯ ಮಾಡಿದ ಪಾಪ‌ಕರ್ಮಗಳು ಮನುಷ್ಯನನ್ನು ಕ್ಷಮಿಸುವುದಿಲ್ಲ. ಶ್ರಾವಣ ಮಾಸದ ಮಧ್ಯಭಾಗದಲ್ಲಿ ಮಳೆಯಾಗಿದೆ. ಅಮಾವಾಸ್ಯೆ ಕಳೆದ ನಂತರ ಇನ್ನೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಅವರವರ ವಿಚಾರ, ಅದರ ಬಗ್ಗೆ ಹೇಳಲು ಆಗುವುದಿಲ್ಲ. ದೇಶದ ಬಗ್ಗೆ ಈ ಹಿಂದೆಯೂ ಹೇಳಿದ್ದೆ, ದೊಡ್ಡ ದೊಡ್ಡ ನಗರಗಳಿಗೆ ಆಪತ್ತು ಕಾದಿದೆ ಎಂದು ತಿಳಿಸಿದ್ದಾರೆ.

ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಧರ್ಮದ ವಿಚಾರದಲ್ಲಿ ರಾಜಕೀಯ ಬೆರೆಸುವುದು ಸೂಕ್ತವಲ್ಲ. ಉದಯನಿಧಿ ಸ್ಟಾಲಿನ್ ಯಾವ ನೋವಿನಿಂದ ಹೇಳಿದ್ದಾರೋ ಗೊತ್ತಿಲ್ಲ. ಆಯಾ ಧರ್ಮದಲ್ಲಿರುವವರು ತಮಗಾಗಿರುವ ನೋವಿನಿಂದ ಈ ರೀತಿ‌ ಹೇಳಿಕೆ ನೀಡುತ್ತಾರೆ. ಪೂರ್ಣ ಅರಿವಿನ ಕೊರತೆಯಿಂದಾಗಿ ಈ ರೀತಿ ಧರ್ಮ, ರಾಜಕೀಯ ವಿಚಾರ ಮುನ್ನೆಲೆಗೆ ತರುತ್ತಾರೆ ಎಂದು ಹೇಳಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಸ್ವಪಕ್ಷದವರಿಂದಲೇ ಪರಸ್ಪರ ಕಚ್ಚಾಟ ವಿಚಾರಕ್ಕೆ ಸ್ಪಂದಿಸಿ, ಅತೃಪ್ತಿಯಿಂದ ರಾಜಕೀಯದಲ್ಲಿ ಈ ರೀತಿ ಅಸಮಾಧಾನ ಸಹಜ ಎಂದರು. ರಾಜ್ಯ ಆರ್ಥಿಕ ದಿವಾಳಿತನಕ್ಕೆ ಹೋಗುತ್ತದೆ ಎನ್ನವ ಆರೋಪ‌ಗಳ ಬಗ್ಗೆ ಮಾತನಾಡಿ, ಆ ರೀತಿ ಏನೂ ಆಗಲ್ಲ, ರಾಜ್ಯ ಸಂಪದ್ಭರಿತವಾಗಿರುತ್ತದೆ. ಜನಸಾಮಾನ್ಯರಿಗೆ ಸಾಕಷ್ಟು ಅನುಕೂಲಕರವಾಗಿವೆ ಎಂದು ತಿಳಿಸಿದ್ದಾರೆ.

Nimma Suddi
";