This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Politics NewsState News

ಕಾಯಕ ಸಮಾಜಗಳ ಸಂಘಟನೆಯಲ್ಲಿ ಸಿಎಂ ನಂತರ ಬರುವ ಹೆಸರೆಂದರೆ ಕೆಪಿ ನಂಜುಂಡಿ: ಡಿಕೆಶಿ

ಕಾಯಕ ಸಮಾಜಗಳ ಸಂಘಟನೆಯಲ್ಲಿ ಸಿಎಂ ನಂತರ ಬರುವ ಹೆಸರೆಂದರೆ ಕೆಪಿ ನಂಜುಂಡಿ: ಡಿಕೆಶಿ

ಬೆಂಗಳೂರು: ಎಐಸಿಸಿ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೆವಾಲಾ ಮತ್ತು ಇತರ ನಾಯಕರ ಸಮ್ಮುಖದಲ್ಲಿ ವಿಶ್ವಕರ್ಮ ಸಮುದಾಯದ ಅಗ್ರಗಣ್ಯ ನಾಯಕ ಕೆಪಿ ನಂಜುಂಡಿಕಾಂಗ್ರೆಸ್ ಪಕ್ಷ ಸೇರಿದರು ಎಂದು ಮಾಹಿತಿ ತಿಳಿದು ಬಂದಿದೆ.

ನಗರದ ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಕಾರ್ಯಕ್ರಮವೊಂದರಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ , ನಂಜುಂಡಿ ಸಂಘಟನಾ ಚಾತುರ್ಯವನ್ನು ಹೊಗಳಿದ ಅವರು ಕಾಯಕ ಸಮಾಜದ ಜನರನ್ನು ಸಂಘಟಿಸುವ ಕಾರ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬಿಟ್ಟರೆ ಅದನ್ನು ಸಮಪರ್ಕವಾಗಿ ಮತ್ತು ಮುತುವರ್ಜಿಯಿಂದ ಮಾಡಿದವರು ನಂಜುಂಡಿ ಅಂತ ಹೇಳಿದರೆ ಅತಿಶಯೋಕ್ತಿ ಅನಿಸದು ಎಂದು ಹೇಳಿದರು.

ಅವರನ್ನು ಮತ್ತು ಇನ್ನೂ ಹಲವಾರು ವಿಶ್ವಕರ್ಮ ಸಮುದಾಯದ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತಾಡಿದ ಶಿವಕುಮಾರ್, ನಂಜುಂಡಿಯವರನ್ನು ಮುಕ್ತವಾಗಿ ಕೊಂಡಾಡಿದರು.

ನಂಜುಂಡಿ ಅವರು ಪಕ್ಷಕ್ಕೆ ವಾಪಸ್ಸಾದರೆ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಂತಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದರು, ಅವರ ಸೂಚನೆಯಂತೆ ತಾನು ನಂಜುಂಡಿಯವರೊಂದಿಗೆ ಕಳೆದ ವಾರ ಮಾತುಕತೆ ನಡೆಸಿದ್ದೆ ಎಂದು ಶಿವಕುಮಾರ್ ಹೇಳಿದರು.

ಮುಂದುವರಿದು ಮಾತಾಡಿದ ಅವರು, ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾಗಿದ್ದ ಅವರು ನಿನ್ನೆಯಷ್ಟೇ ಧಾರವಾಡಲ್ಲಿರುವ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಯವರ ಮನೆಗೆ ಹೋಗಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಿದರು.

Nimma Suddi
";