ಬಾಗಲಕೋಟೆ:
ಮಹಿಳೆಯರು ಸ್ವಾವಲಂಭಿ ಜೀನವ ನಡೆಸಲು ಸಂಜೀವಿನಿ ಕ್ಯಾಂಟೀನ್ ನೆರವಾಗಲಿದೆ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.
ಜಿಲ್ಲಾಡಳಿತ ಭವನದ ಆವರಣದಲ್ಲಿ ಗದ್ದನಿಕೇರಿಯ ಲಕ್ಷ್ಮೀ ಸ್ತ್ರೀಶಕ್ತಿ ಸ್ವ-ಸಹಾಯ ಸಂಘದವರು ಪ್ರಾರಂಭಿಸಿದ ಸಂಗಮೇಶ್ವರ ಸಂಜೀವಿನಿ ಕ್ಯಾಂಟೀನ್‍ಗೆ ಚಾಲನೆ ನೀಡಿ ಮಾತನಾಡಿದ ಅವರು ಜಿಲ್ಲಾ ಪಂಚಾಯತ ಎನ್.ಆರ್.ಎಲ್.ಎಂ ಯೋಜನೆಯಡಿ 2 ಲಕ್ಷ ರೂ.ಗಳ ನೀಡಲಾಗಿದೆ. ಕ್ಯಾಂಟೀನ್‍ನಲ್ಲಿ ಗುಣಮಟ್ಟದ ಕಾಯ್ದುಕೊಳ್ಳಬೇಕು. ಗುಣಮಟ್ಟ ಚೆನ್ನಾಗಿದ್ದರೆ ಮಾತ್ರ ಗ್ರಾಹಕರು ಬರುತ್ತಾರೆ ಎಂದರು.
ಕ್ಯಾಂಟೀನ್ ಜಿಲ್ಲಾಡಳಿತ ಭವನದ ಆವರಣದಲ್ಲಿರುವದರಿಂದ ಸ್ವಚ್ಛತೆಗೆ ಹೆಚ್ಚು ಮಹತ್ವ ಕೊಡಬೇಕು. ಎಲ್ಲಂದರಲ್ಲಿ ಟೀ ಕಪ್, ಪ್ಲಸ್ಟಿಕ್‍ಗಳನ್ನು ಎಲ್ಲಂದರಲ್ಲಿ ಎಸೆಯಬಾರದು. ಇತರರಿಗೆ ಮಾದರಿಯಾಗುವ ನಿಟ್ಟಿನಲ್ಲಿ ಕ್ಯಾಂಟೀನ್ ನಡೆಸಿಕೊಂಡು ಹೋಗಲು ತಿಳಿಸಿದರು. ಈ ಸಂದರ್ಭದಲ್ಲಿ ಆಹಾರ ಗುಣಮಟ್ಟದ ಪ್ರಮಾಣ ಪತ್ರವನ್ನು ಮಹಿಳಾ ಸಂಘದವರಿಗೆ ವಿತರಿಸಲಾಯಿತು. ಕ್ಯಾಂಟೀನ್‍ನಲ್ಲಿ ಶಶಿಧರ ಕುರೇರ ಚಹಾ ಸೇವಿಸಿದರು. ಕ್ಯಾಂಟೀನನ್ನು ಸುಸ್ಮೀತಾ ಸೇರಿ 4 ಜನ ಮಹಿಳೆಯರು ನಡೆಸಲಿದ್ದಾರೆ.
ಕಾರ್ಯಕ್ರಮದಲ್ಲಿ ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಮುಖ್ಯ ಯೋಜನಾಧಿಕಾರಿ ಪುನಿತ್, ಯೋಜನಾಧಿಕಾರಿ ಎನ್.ವಾಯ್.ಬಸರಿಗಿಡದ, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮ ಉಕ್ಕಲಿ, ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.