ಬೆಂಗಳೂರು : “ಮೊದಲು ಅವರ ಪಕ್ಷದ ಬಗ್ಗೆ ಮಾತನಾಡಲಿ. ಜೆಡಿಎಸ್ ಇದೆಯಾ ಅಂತ ಕುಮಾರಸ್ವಾಮಿ ಸ್ವಾಮಿ , ಗೌಡರು ಹೇಳಲಿ. ಆಮೇಲೆ ಪ್ರಬಲ ಅಭ್ಯರ್ಥಿ ಎಲ್ಲ.”ಇದು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರಾಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ರಣಕಂತ್ರಗಳ ಬಗ್ಗೆ ನಗರದಲ್ಲಿ ಶುಕ್ರವಾರ ಮುಖಂಡರೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಶಾಸಕರನ್ನು ತಯಾರಿ ಮಾಡ್ಕೋಬೇಕೆದ್ದು, ಎರಡು ಪಕ್ಷದಿಂದ ನಮ್ಮ ಪಾರ್ಟಿ ಸೇರೋಕೆ ಕೆಲವರು ಪ್ರಯತ್ನ ಮಾಡ್ತಿದಾರೆ. ಅದನ್ನೇ ಚರ್ಚೆ ಮಾಡಿದ್ದೇವೆ ಎಂದರು.ಇಷ್ಟು ವರ್ಷ 5-6 ಕ್ಷೇತ್ರದಲ್ಲಿ ಕಾಂಗ್ರೆಸ್ ಜೆಡಿಎಸ್ ನೇರ ಸ್ಪರ್ದೆ ಇತ್ತು ಎಂದರು.
ಈಗ ದೇವೆಗೌಡರು, ಕುಮಾರಸ್ವಾಮಿ ಕುಟುಂಬದವರೇ ಬಿಜೆಪಿ ಸೇರಿದ್ದರಿಂದ ಜೆಡಿಎಸ್ ಕಾರ್ಯಕರ್ತರು ಆತಂಕದಿಂದ ನಮ್ಮನ್ನ ಸಂಪರ್ಕಿಸುತ್ತಿದ್ದಾರೆ. ಹಳೆಯದನ್ನೆಲ್ಲಾ ಮರೆತು ಪಕ್ಷ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ನಾಯಕರಿಗೆ ಸೂಚನೆ ಎಲ್ಲಾ ನೀಡಿದ್ದೇವೆ ಎಂದು ಹೇಳಿದರು.ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಎಲ್ಲಾ ನಾಯಕರ ಅಭಿಪ್ರಾಯ ಸಂಗ್ರಹಿಸಲಾಗಿದೆಯೇ ಎಂಬ ಪ್ರಶ್ನೆಗೆ, ಲೋಕಸಭೆ ಅಭ್ಯರ್ಥಿ ಆಯ್ಕೆ ಸಂಬಂಧ ಸ್ಥಳೀಯ ಮಟ್ಟದಲ್ಲಿ ವಿಚಾರ, ಅಭಿಪ್ರಾಯಗಳನ್ನು ಸಂಗ್ರಹಿಸಿ ಹೈಕಮಾಂಡ್ ನಾಯಕರಿಗೆ ಕಳುಹಿಸುವುದು ನಮ್ಮ ಕರ್ತವ್ಯ. ನಾವು ಅದನ್ನು ಮಾಡಿದ್ದೇವೆ” ಎಂದು ವಿವರಿಸಿದರು.