ಬಾಗಲಕೋಟೆ
ಪ್ರಯತ್ನವಿದ್ದರೆ ಒಬ್ಬ ವ್ಯಕ್ತಿ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಉದ್ಯಮಿ ಪೀರಪ್ಪ ಮ್ಯಾಗೇರಿ ಮಾದರಿಯಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ನಗರದ ವಿದ್ಯಾಗಿರಿಯಲ್ಲಿನ ಡ್ರೀಮ್ಸ್ ಹೋಟೆಲ್ ಹತ್ತಿರ ನೂತನ ಬಾಲಾಜಿ ಪೆಟ್ರೋಲಿಯಮ್ಸ್ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಸಾಧನೆಗೆ ಹಲವು ಮಾರ್ಗಗಳಿವೆ. ಅವುಗಳನ್ನು ಹುಡುಕಿಕೊಳ್ಳುವತ್ತ ನಮ್ಮ ಚಿಂತನೆ ಇರಬೇಕು. ನಮ್ಮ ಹಾಗೂ ಸಮಾಜದ ಅಭಿವೃದ್ಧಿಗಾಗಿ ಉನ್ನತ ಗುರಿಯಿಟ್ಟುಕೊಂಡು ಮುಂದೆ ಸಾಗಬೇಕು ಎಂದು ಹೇಳಿದರು.
ಮಾಜಿ ಸಚಿವ ಎಸ್.ಆರ್.ಪಾಟೀಲ, ಮನುಷ್ಯ ಮನಸ್ಸು ಮಾಡಿದರೆ ಏನೆಲ್ಲಾ ಸಾಸಬಹುದು ಎಂಬುದಕ್ಕೆ ಶೋಷಿತ ವರ್ಗದ ಉದಯೋನ್ಮುಖ ತಾರೆ ಪೀರಪ್ಪ ಅಂತವರು ನಮ್ಮ ಮುಂದೆ ಇದ್ದಾರೆ. ಪರಿಶ್ರಮಕ್ಕೆ ಜಾತಿ, ಧರ್ಮ, ವರ್ಗ, ಸಮಾಜ ಎಂಬುದಿಲ್ಲ. ಪ್ರಯತ್ನಪಟ್ಟರೆ ಫಲ ದೊರಕುತ್ತದೆ ಎಂದರು.
ಬಾಲಾಜಿ ಪೆಟ್ರೋಲಿಯಮ್ಸ್ನ ಪೀರಪ್ಪ ಮ್ಯಾಗೇರಿ, ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾಗ ಸಾಧಕರನ್ನು ಕಂಡು ತಾವೂ ಆ ನಿಟ್ಟಿನಲ್ಲಿ ಬೆಳೆಯಬೇಕೆಂಬ ನಿರ್ಧಾರದೊಂದಿಗೆ ದಿಟ್ಟ ಹೆಜ್ಜೆ ಇಡಲಾಗಿದೆ. ತಮ್ಮ ಜೀವನದಲ್ಲಿ ಎಸ್.ಆರ್.ಪಾಟೀಲ, ಸಚಿವ ಆರ್.ಬಿ.ತಿಮ್ಮಾಪೂರ ಅವರಂತಹ ಅನೇಕರು ಬೆಂಬಲವಾಗಿ ನಿಂತಿದ್ದಾರೆ. ತನು, ಮನ, ಧನದಿಂದ ಸಹಾಯ ಮಾಡಿದ್ದಾರೆ. ಶೋಷಿತ ಸಮುದಾಯವನ್ನು ಎಂದಿಗೂ ಕೈ ಬಿಟ್ಟಿಲ್ಲ ಎಂದು ಹೇಳಿದರು.
ಅಸಾನಂದ ಸ್ವಾಮೀಜಿ, ಗುರುನಾಥ ಸ್ವಾಮೀಜಿ, ಜಿಲ್ಲಾಕಾರಿ ಕೆ.ಎಂ.ಜಾನಕಿ, ಎಸ್ಪಿ ಅಮರನಾಥ ರೆಡ್ಡಿ, ಕಾಂಗ್ರೆಸ್ ಮಹಿಳಾ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ, ಆರ್.ಆರ್.ತುಂಬರಮಟ್ಟಿ, ಅಶೋಕ ಕಿವಡಿ, ವೈ.ವೈ.ತಿಮ್ಮಾಪೂರ, ಲಕ್ಷö್ಮಣ ಯಂಕAಚಿ, ರಮೇಶ ಗಂಜಿಹಾಳ, ಚಂದ್ರಶೇಖರ ಮ್ಯಾಗೇರಿ, ಲಿಂಗರಾಜ ಮ್ಯಾಗೇರಿ, ಅಭಿಷೇಕ್ ಮ್ಯಾಗೇರಿ, ಎಚ್.ಬಿ.ಲಿಂಗನ್ನವರ, ಬಿಪಿಸಿಎಲ್‌ನ ಪ್ರಾದೇಶಿಕ ವ್ಯವಸ್ಥಾಪಕ ಸುರೇಶ ಅಲಾಟೆ, ಕಾರ್ಯನಿರ್ವಾಹಕ ಅಭಿಯಂತರ ಅನುಕೃತಿದಾಸ್, ಮಾರಾಟ ಅಕಾರಿ ನಿಖಿಲ್ ಸಾಳುಂಕೆ ಇತರರಿದ್ದರು.