ಮಂಡ್ಯ: ಸ್ಥಳೀಯ ಸಂಸದೆ ಸುಮಲತಾ ಅಂಬರೀಶ್ ತಮ್ಮ ರಾಜ್ಯಕೀಯ ಭವಿಷ್ಯದ ಬಗ್ಗೆ ಸ್ಪಷ್ಟ ನಿಲುವು ಹೊಂದಿದ್ದಾರೆ ಅನ್ನೋದು ನಿರ್ವಿವಾದಿತವಿದ್ದು, ಯಾವ ಕಾರಣಕ್ಕೂ ಮಂಡ್ಯ ರಾಜಕಾರಣದಿಂದ ಅವರು ದೂರ ಸರಿಯುವುದು ಸಾಧ್ಯವಿಲ್ಲ, ಅಂದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಎನ್ ಡಿಎ ಅಭ್ಯರ್ಥಿಯಾಗಿ ಟಿಕೆಟ್ ಸಿಗದೆ ಹೋದಾಗ್ಯೂ ಅಲ್ಲಿಂದಲೇ ಸ್ಪರ್ಧಿಸಲು ತಮಗೆ ಬೇರೆ ಆಯ್ಕೆಗಳಿವೆ ಎಂದು ಅವರು ತಿಳಿಸಿದರು.
ನಗರದಲ್ಲಿಂದು ಮಾಧ್ಯಮ ಗೋಷ್ಟಿ ನಡೆಸಿ ಮಾತಾಡಿದ ಅವರು ಮಂಡ್ಯದೊಂದಿಗೆ ತಮಗಿರುವ ಭಾವನಾತ್ಮಕ ನಂಟಿನ ಬಗ್ಗೆ ಹೇಳಿಕೊಂಡಿದ್ದು, ಮಂಡ್ಯದೊಂದಿಗೆ ತನಗೆ ಅವಿನಾಭಾವ ಸಂಬಂಧ ಬೆಳೆದುಬಿಟ್ಟಿದೆ, ಇಲ್ಲಿನ ಜನರ ಋಣ ತನ್ನ ಮೇಲಿದೆ, ಮಂಡ್ಯದಲ್ಲಿರುವಾಗ ಅಂಬರೀಶ್ ತನ್ನ ಜೊತೆ ಇದ್ದಾರೆ, ತನ್ನೊಂದಿಗೆ ಓಡಾಡುತ್ತಿದ್ದಾರೆ ಎಂದು ಭಾಸವಾಗುತ್ತದೆ, ಅಂಬರೀಶ್ ಅವರಂತೆಯೇ ನಾನು ಕೂಡ ಮಂಡ್ಯ ರಾಜಕಾರಣದಿಂದ ಅಚೆ ಹೋಗಲಾರೆ ಎಂದು ಸುಮಲತಾ ಹೇಳುತ್ತಾರೆ. ಮೊನ್ನೆ ಅವರ ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿಯಾಗಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ, ಈ ಹಿಂದೆಯೂ ಅವರನ್ನು ಭೇಟಿಯಾಗಿದ್ದಾಗಿ ಸುಮಲತಾ ಅಂಬರೀಶ್ ಹೇಳುತ್ತಾರೆ.