This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Education NewsLocal NewsState News

ಸಾಹಿತ್ಯ, ಸಂಸ್ಕೃತಿ ಮುಂದಿನ ಪೀಳಿಗೆಗೆ ಬಳುವಳಿಯಾಗಬೇಕು

ಸಾಹಿತ್ಯ, ಸಂಸ್ಕೃತಿ ಮುಂದಿನ ಪೀಳಿಗೆಗೆ ಬಳುವಳಿಯಾಗಬೇಕು

ರಾಮ ಮನಗೂಳಿ ವೇದಿಕೆ(ಬಾಗಲಕೋಟೆ):

ಕನ್ನಡ ಸಾಹಿತ್ಯ ಸಮ್ಮೇಳನಗಳು ಸಾಹಿತ್ಯ, ಸಂAಸ್ಕೃತಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಡುವಲ್ಲಿ ಕಾರ್ಯಪ್ರವೃತ್ತವಾಗಿ ಕೆಲಸ ಮಾಡಬೇಕು ಎಂದು ಬೀಳಗಿ ಶಾಸಕ ಜೆ.ಟಿ.ಪಾಟೀಲ ಕರೆ ನೀಡಿದರು.

ನವನಗರ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಹಮ್ಮಿಕೊಂಡಿರುವ ಬಾಗಲಕೋಟೆ ಜಿಲ್ಲಾ ೧೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇಯ ದಿನದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಂಪರೆ ಮತ್ತು ಜನಪರ ನಿಲುವುಗಳು ಎಂಬ ವಿಷಯ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು

ಸಾಹಿತಿಗಳು ಮೌಲ್ಯಯುತವಾದ ಸಾಹಿತ್ಯ ರಚನೆ ಮಾಡಬೇಕು. ಜನಸಾಮಾನ್ಯರು ಓದುವ ಹವ್ಯಾಸ ಬೆಳೆಸುವಂತಿರಬೇಕು. ಜೊತೆಗೆ ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿರುತ್ತವೆ ಅವುಗಳನ್ನು ತಮ್ಮ ಬರಹದ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸವಾಗಬೇಕಿದೆ. ಮುಖ್ಯವಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ಇದು ಸಂಪೂರ್ಣವಾಗಿ ಅನುಷ್ಠಾನವಾಗಿಲ್ಲ. ಈ ಯೋಜನೆಯ ಆರಂಭದಲ್ಲಿ ೨೩೦ ಕೋಟಿ ಯೋಜನಾವೆಚ್ಚ ಇತ್ತು ಆದರೆ ಇಂದು ಲಕ್ಷಾಂತರ ಕೋಟಿ ಅನುದಾನ ನೀಡಿದರೂ ಇದು ವರೆಗೂ ಪೂರ್ಣಗೊಂಡಿಲ್ಲ ಇಂತಹ ಸಮಸ್ಯೆಗಳ ಗಮನ ಸೆಳೆಯುವುದು ಇಂದು ತುರ್ತಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಚಾರ್ಯ ಡಾ.ಎಸ್.ಬಿ. ಮಾಟೊಳ್ಳಿ ಮಾತನಾಡಿ, ಇಂದಿನ ಗೋಷ್ಠಿಯಲ್ಲಿ ಮೌಲ್ಯಯುತವಾದ ವಿಷಯ ಮಂಡನೆ ಮಾಡಿದ್ದಾರೆ. ಸಾಹಿತಿಗಳಿಗೆ ಭಾಷಾ ಜ್ಞಾನವಿರಬೇಕು. ಒಳಗೂ, ಹೊರಗೂ ಸ್ವಚ್ಚ ಇರಬೇಕು. ಸಂಖ್ಯೆಗಿAತ ಸತ್ವ ಇರಬೇಕು. ಆಸ್ವಾದ ಮಾಡುವಂತಹ ಮನೋಗುಣ ಹೊಂದಿರಬೇಕು ಎಂದು ಅವರು ಕರೆ ನೀಡಿದರು.

ಸಾಹಿತಿ ಎಂ.ಜಿ. ದಾಸರ ಅವರು ತತ್ವಪದ ಹಾಗೂ ಕೀರ್ತನೆಗಳು, ಸಾಹಿತಿ ಶಿವಾನಂದ ಪೂಜಾರಿ ವಚನ ಸಾಹಿತ್ಯ, ಕಸಾಪ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ ಜನಪದ ಸಾಹಿತ್ಯ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.

ವಿ.ಜಿ.ಗೋವಿಂದರಪ್ಪನವರ, ಸಿ,ಎನ್.ಬಾಳಕ್ಕನವರ, ಅರ್ಜುನರಡ್ಡಿ ಹಂಚಿನಾಳ ವೇದಿಕೆಯಲ್ಲಿದ್ದರು. ಡಾ.ಚಂದ್ರಶೇಖರ ಕಾಳನ್ನವರ ನಿರೂಪಿಸಿದರು. ಯೋಗೇಶ ಲಮಾಣಿ ಸ್ವಾಗತಿಸಿದರು. ಎ.ಎಂ.ಮೋಮಿನ ವಂದಿಸಿದರು.

";