This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local NewsNational NewsPolitics NewsState News

ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಂಕಲ್ಪ

ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಂಕಲ್ಪ

ಕಾಂಗ್ರೇಸ್ಸ ಸರಕಾರದ ವಿರುದ್ದ ರೈತ ವಿರೋಧಿ, ದಲಿತ ವಿರೋಧಿ ನೀತಿ ಖಂಡನಾ ನಿರ್ಣಯ
ರಾಮ ಮಂದಿರ ಲೋಕಾರ್ಪಣೆ. ಎಲ್.ಕೆ.ಅಡ್ವಾನಿಜಿ ಗೆ ಭಾರತ ರತ್ನ ಘೊಷಿಸಿದ್ದಕ್ಕೆ ಅಭಿನಂಧನಾ ನಿರ್ಣಯ

ಲೋಕಸಭೆಯ ಚುನಾವಣೆಯಲ್ಲಿ ೨ ಲಕ್ಷ ಅಂತರ ಮತಗಳಿಂದ ಬಿಜೆಪಿ ಅಭ್ಯರ್ಥಿ ಗೆಲುವ ನಿಶ್ಚಿತ. ಚರಂತಿಮಠ

ಬಾಗಲಕೋಟೆ:

ದೇಶಕ್ಕಾಗಿ ದೇಶದ ಸಮಗ್ರ ಅಭಿವೃದ್ಧಿಯ ದೂರದೃಷ್ಟಿಯ ನಾಯಕತ್ವಕ್ಕಾಗಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಲೋಕಸಭಾ ಬಿಜೆಪಿ ಅಭ್ಯರ್ಥಿ ೨ ಲಕ್ಷ ಮತಗಳ ಅಂತರಿAದ ಗೆಲುವು ನಿಶ್ಚಿತ ಎಂದು ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಹೇಳಿದರು.

ಅವರು ಮಂಗಳವಾರ ಭಾರತೀಯ ಜನತಾ ಪಕ್ಷ ಬಾಗಲಕೋಟೆ ವತಿಯಿಂದ ನವನಗರದಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಜರುಗಿದ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ಬಾಗವಹಿಸಿ ಮಾತನಾಡಿದರು.

೨೦೪೭ಕ್ಕೆ ಭಾರತ ವಿಶ್ವಗುರುವಾಗುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷ ಹಾಗೂ ಪ್ರದಾಣಿ ನರೇಂದ್ರಮೋದಿಯವರು ದೇಶದ ಸಮಗ್ರ ಅಬಿವೃದ್ಧಿ ದೃಷ್ಟಿಯಿಂದ ಧಾರ್ಮಿಕ,ಸಾಮಾಜಿಕ,ಹಾಗೂ ಆರ್ಥಿಕವಾಗಿ ಪ್ರಗತಿಗೆ ಸಾಕಷ್ಟು ಯೋಜನೆಗಳನ್ನು ತರುವ ಮೂಲಕ ಹೋಸ ಭಾರತದ ದಿಕ್ಸೂಚಿಯನ್ನು ತೋರಿಸಿದ್ದಾರೆ,

ಅನ್ನದಾತ ರೈತರು,ಮಹಿಳೆಯರು,ಯುವಕರು,ಕೂಲಿಕಾರ್ಮಿಕರು ಸೇರಿದಂತೆ ಈ ನಾಲ್ಕೂ ವಿಭಾಗಗಳನ್ನು ಮಾಡಿ ಇವರ ಶ್ರೇಯೋವೃದ್ಧಿಗೆ ಅನೇಕ ಯೋಜನೆಗಳನ್ನು ಇದೆ ಬಜೆಟ್‌ನಲ್ಲಿ ನೀಡಲಾಗಿದೆ, ಮುಂಬರುವ ಯುವಜನಾಂಗಕ್ಕೆ ನವ ಭಾರತ ಹೇಗೆ ಇರಬೇಕು ಎಂಬ ಆಲೋಚನೆ ಮೋದಿಜಿಯವರದಾಗಿದೆ, ಭಾರತ ವಿಶ್ವಗುರುವಾಗಲು ಭಾರತೀಯ ಜನತಾ ಪಕ್ಷ ಪ್ರದಾನಿ ನರೇಂದ್ರಮೋದಿಯ ಅವಶ್ಯಕತೆ ಇದೆ, ಮಾನ್ಯ ನರೇಂದ್ರ ಮೋದಿಯವರು ಹೇಳಿದಂತೆ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ೩೭೦, ಎನ್.ಡಿ.ಎ ಸೇರಿದಂತೆ ೪೦೦ ಸಂಸತ್ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವನ್ನು ವ್ಯೆಕ್ತಪಡಿಸಿದ್ದಾರೆ ಆ ಗೆಲ್ಲುವ ಕ್ಷೇತ್ರಗಳಲ್ಲಿ ಕರ್ನಾಟಕದ ೨೮ ಕ್ಷೇತ್ರಗಳು ಸೇರಿದಂತೆ ಭಾಗಲಕೋಟೆ ಕ್ಷೇತ್ರವೂ ಒಂದಾಗಿರುತ್ತದೆ.

ನಮ್ಮ ಬಾಗಲಕೋಟೆಯಲ್ಲಿ ೭ ವಿಧಾನಸಭಾ ಕ್ಷೇತ್ರಗಳು ಮತ್ತು ನರಗುಂದ ಸೇರಿದಂತೆ ಆಯಾ ವಿಧಾಸಭಾ ಕ್ಷೇತ್ರ್ ಗ್ರಾಮೀಣ,ನಗರ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಮೊತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾನ್ನಾಗಿ ಮಾಡುವುದಾಗಿದೆ, ಆ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಸಂಸದಕ್ಷೃತ್ರದ ಬಿಜೆಪಿ ಅಭ್ಯರ್ಥಿ ಕನಿಷ್ಠ ೨ ಲಕ್ಷ ಮತಗಳ ಅಂತರಿAಧ ಗೆಲ್ಲುವ ವಿಶ್ವಾಸವನ್ನು ವ್ಯೆಕ್ತಪಡಿಸಿದರು.

ಬೆಳಗಾವಿ ವಿಭಾಗದ ಪ್ರಭಾರಿಯಾದ ಚಂದ್ರಶೇಖರ ಕವಟಗಿ ಮಾತನಾಡಿ ಲೋಕಸಭಾ ಚುನಾವಣೆಯ ರೂಪುರೇಷಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ ಜಿಲ್ಲೆಯಲ್ಲಿ ಏರಡನೇ ಬಾರಿಗೆ ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಸೇವೆ ಸಲ್ಲಿಸುವ ಅವಕಾಶ ನಿಡಿದ ಎಲ್ಲ ಹಾಲಿ ಹಾಗೂ ಮಾಜಿ ಶಾಸಕರುಗಳಿಗೆ,ಮುಖಂಡರುಗಳಿಗೆ ಧನ್ಯವಾದಗಳನ್ನು ಸಲ್ಲಿಸಿದ ಅವರು ಬಾಗಲಕೋಟೆ ಭಾರತೀಯ ಜನತಾ ಪಕ್ಷದ ಭದ್ರಕೋಟೆಯಾಗಿದೆ, ಎಲ್ಲ ಮತಕ್ಷೇತ್ರದದ ಹಾಲಿ ಹಾಗೂ ಮಾಜಿ ಶಾಸಕರು ಹಾಗೂ ಅಸಂಖ್ಯಾತ ಕಾರ್ಯರ್ತರು ಒಂದೆ ಆಸೆ ಅದು ಮೊತ್ತಮ್ಮೆ ನರೇಂದ್ರಮೋದಿಯವರು ಪ್ರಧಾನಿಯಾಗಬೇಕು, ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷದ ಆಡಳಿತದ ಮೂಲಕ ದೇಶದ ಅಭಿವೃದ್ಧಿ ಸಾಧ್ಯ ಎಂಬ ಬಲವಾದ ನಂಬಿಕೆಯನ್ನಿಟ್ಟುಕೊAಡಿದ್ದಾರೆ, ಆ ನಿಟ್ಟಿನಲ್ಲಿ ಈ ಸಲ ಲೋಕಸಭೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವು ಶತಸಿದ್ದ, ನರೇಂದ್ರಮೋದಿ ಹಾಗೂ ಭಾರತೀಯ ಜನತಾ ಪಕ್ಷದ ಗೆಲುವಿಗೆ ಎಲ್ಲರೂ ಶ್ರಮಿಸೋಣ ಎಂದರು.

ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಪಿ.ಎಚ. ಪೂಜಾರ, ಮಾಜಿ ಸದಸ್ಯ ನಾರಾಯಣ ಸಾ ಭಾಂಡಗೆ,ರಾಜಶೇಖರ ಶಿಲವಂತ, ಬೆಳಗಾವಿ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ,ಸಹಪ್ರಬರಿ ಬಸವರಾಜ ಯಂಕಂಚಿ ವೇದಿಕೆ ಮೇಲೆ ಇದ್ದರು.  ಸಭೆಯಲ್ಲಿ ಬಿಜೆಪಿಯ ಜಿಲ್ಲಾ ಪದಾಧೀಕಾರಿಗಳು,ನಗರ ಹಾಗೂ ಗ್ರಾಮೀಣ ಮಂಡಲದ ಪದಾಧಿಕಾರಿಗಳು ಕಾರ್ಯಕರ್ತರ ಬಾಗವಹಿಸಿದ್ದರು. ಇದೆ ಸಂಧರ್ಭದಲಿ ಲೋಕಸಭಾ ಚುನಾವಣಾ ಕಾರ್ಯಾಲವನ್ನು ಪ್ರಾರಂಭಿಸಲಾಯಿತು.

ಸಭೆಯಲ್ಲಿ ನಿರ್ಣಯ ಮಂಡಣೆ
೧ ಅಭಿನಂಧನ ನಿರ್ಣಯ.
ಶ್ರೀರಾಮ ಮಂದಿರ ನಿರ್ಮಾಣ ಪೂರ್ಣಗೋಳಿದ್ದಕ್ಕೆ ಹಾಗೂ ಬಿಜೆಪಿ ಬಿಷ ಲಾಲ್ ಕೃಷ್ಣ ಅಡ್ವಾಣಿಜಿಯವರಿಗೆ ಭಾರತ ರತ್ನ ಗೋಷಿಸಿದ್ದಕ್ಕೆ ಅಭಿನಂಧನಾ ನಿರ್ಣಯವನ್ನು ಜಿಲ್ಲಾ ಪ್ರಧಾನ ಕಾರ್ಯದಶಿ ಚಂದ್ರಕಾAತ ಉಪಾಧ್ಯಾಯ ಮಂಡಿಸಿದರು. ಆ ನಿರ್ಣಯವನ್ನು ಅನುಮೋಧನೆಯನ್ನು ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭುವನೇಶ ಪೂಜಾರ ಅನುಮೋದಿಸಿದರು.
೨ ಖಂಡನಾ ನಿರ್ಣಯ
ಕರ್ನಾಟಕದಲ್ಲಿ ಕಾಂಗ್ರೇಸ್ಸ ನೇತೃತ್ವದ ಸರಕಾರದ ವಿರುದ್ದ ಖಂಡನಾ ನಿರ್ಣಯ ಮಂಡಿಸಲಾಯಿತು.
ರೈತ ವಿರೋಧಿ, ದಲಿತ ವಿರೋಧ ನೀತಿ ಕುರಿತು ಖಂಡನಾ ನಿರ್ಣಯವನ್ನು ಬೆಳಗಾವಿ ಪ್ರಬಾರಿ ಬಸವರಾಜ ಯಂಕಂಚಿ ಮಂಡಿಸಿದರು, ಇದನ್ನು ಜಿಲ್ಲಾ ಉಪಾಧ್ಯಕ್ಷ ಅಶೋಕ ಲಿಂಬಾವಳಿ ಅನುಮೋಧಿಸಿದರು.

 

Nimma Suddi
";