This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Local NewsNational NewsPolitics NewsState News

ಲೋಕಸಭಾ ಚುನಾವಣೆ : ಒಟ್ಟು ಶೇ.72.66 ರಷ್ಟು ಮತದಾನ

ಲೋಕಸಭಾ ಚುನಾವಣೆ : ಒಟ್ಟು ಶೇ.72.66 ರಷ್ಟು ಮತದಾನ

ಬಾಗಲಕೋಟೆ:

ಬಾಗಲಕೋಟೆ ಲೋಕಸಭಾ ಚುನಾವಣೆಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಒಟ್ಟು 18,06183 ಮತಗಳ ಪೈಕಿ 13,12,319 ಮತಗಳು ಚಲಾವಣೆಗೊಳ್ಳುವ ಮೂಲಕ ಒಟ್ಟು ಶೇ.72.66 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.

ಮುಧೋಳ ಮೀಸಲು ಕ್ಷೇತ್ರದಿಂದ ಒಟ್ಟು 208982 ಪೈಕಿ 159621 ಮತ ಚಲಾವಣೆಗೊಳ್ಳುವ ಮೂಲಕ (ಶೇ.76.38) ರಷ್ಟು ಮತದಾನವಾದರೆ, ತೇರದಾಳ ಮತಕ್ಷೇತ್ರದಲ್ಲಿ ಒಟ್ಟು 237450 ಮತಗಳ ಪೈಕಿ 183661 ಮತಗಳು ಚಲಾವಣೆಗೊಂಡು (ಶೇ.77.35) ರಷ್ಟು, ಜಮಖಂಡಿ ಮತಕ್ಷೇತ್ರದಲ್ಲಿ ಒಟ್ಟು 223981 ಮತಗಳ ಪೈಕಿ 163359 ಮತಗಳು ಚಲಾವಣೆಗೊಂಡು (ಶೇ.72.93) ರಷ್ಟು, ಬೀಳಗಿ ಮತಕ್ಷೇತ್ರದಲ್ಲಿ ಒಟ್ಟು 235593 ಮತಗಳ ಪೈಕಿ 175371 ಮತ ಚಲಾವಣೆಗೊಂಡು (ಶೇ.74.44) ರಷ್ಟು, ಬಾದಾಮಿ ಮತಕ್ಷೇತ್ರದಲ್ಲಿ ಒಟ್ಟು 226500 ಮತಗಳ ಪೈಕಿ 162925 ಮತ ಚಲಾವಣೆಗೊಂಡು (ಶೇ.71.93) ರಷ್ಟು, ಬಾಗಲಕೋಟೆ ಮತಕ್ಷೇತ್ರದಲ್ಲಿ ಒಟ್ಟು 253284 ಮತಗಳ ಪೈಕಿ 167573 ಮತ ಚಲಾವಣೆಗೊಂಡು (ಶೇ.66.16) ರಷ್ಟು, ಹುನಗುಂದ ಮತಕ್ಷೇತ್ರದಲ್ಲಿ ಒಟ್ಟು 228349 ಮತಗಳ ಪೈಕಿ 155230 ಮತ ಚಲಾವಣೆಗೊಂಡು (ಶೇ.67.98) ರಷ್ಟು ಹಾಗೂ ನಗರಗುಂದ ಕ್ಷೇತ್ರದಿಂದ ಒಟ್ಟು 192044 ಮತಗಳ ಪೈಕಿ 144579 ಮತ ಚಲಾವಣೆಗೊಂಡು (ಶೇ.75.28) ರಷ್ಟು ಮತದಾನವಾಗಿದೆ ಎಂದು ತಿಳಿಸಿದರು.

ತೇರದಾಳ ಮತಕ್ಷೇತ್ರದಲ್ಲಿ ಅತೀ ಹೆಚ್ಚ ಮತದಾನವಾದರೆ, ಬಾಗಲಕೋಟೆ ಮತಕ್ಷೇತ್ರದಲ್ಲಿ ಅತೀ ಕಡಿಮೆ ಮತದಾನವಾಗಿದೆ. ಚಲಾವಣೆಗೊಂಡ ಒಟ್ಟು 1312319 ಮತಗಳಲ್ಲಿ 663613 ಪುರುಷರು ಮತ ಚಲಾಯಿಸಿದರೆ, 648679 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಅಲ್ಲದೇ ಒಟ್ಟು 101 ಇತರೆ ಮತದಾರರ ಪೈಕಿ 27 ಜನ ಮತ ಚಲಾಯಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆ-2019 ರಲ್ಲಿ 68.90 ರಷ್ಟು ಆದರೆ ಪ್ರಸಕ್ತ ಚುನಾವಣೆಯಲ್ಲಿ ಶೇ.72.66 ರಷ್ಟು ಮತದಾನವಾಗಿದೆ. ಕಳೆದ ಚುನಾವಣೆಗಿಂತ ಪ್ರಸಕ್ತ ಚುನಾವಣೆಯಲ್ಲಿ ಶೇ.3.76 ರಷ್ಟು ಮತದಾನ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.

ಜೂನ್ 4 ರಂದು ಮತ ಎಣಿಕೆ
ಜೂನ್ 4 ರಂದು ಮತ ಎಣಿಕೆ ಕಾರ್ಯ ಜರುಗಲಿದ್ದು, ಉದ್ಯಾನಗಿರಿಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮತ ಎಣಿಕಾ ಕೇಂದ್ರ ಹಾಗೂ ಭದ್ರತಾ ಕೊಠಡಿಗಳನ್ನು ಸ್ಥಾಪಿಸಲಾಗಿದ್ದು, 8 ಮತಕ್ಷೇತ್ರಗಳ ಮತ ಯಂತ್ರಗಳನ್ನು ಭದ್ರತಾ ಕೊಠಡಿಯಲ್ಲಿ ಭದ್ರವಾಗಿ ಇರಿಸಲಾಗಿದೆ. ಪ್ರತಿ ಮತಕ್ಷೇತ್ರಕ್ಕೆ ಒಂದು ಭದ್ರತಾ ಕೊಠಡಿ ಹಾಗೂ ಒಂದು ಎಣಿಕೆ ಕೊಠಡಿಯನ್ನು ಗುರುತಿಸಲಾಗಿದೆ. ನೆಲ ಮಹಡಿಯಲ್ಲಿ ಮುಧೋಳ, ಬಾದಾಮಿ, ಬೀಳಗಿ, ನರಗುಂದ ಮತಕ್ಷೇತ್ರಗಳಿಗೆ ಸಂಬAಧಿಸಿದ ಮತ ಎಣಿಕೆ ಕಾರ್ಯ ನಡೆದರೆ, ಮೊದಲನೇ ಮಹಡಿಯಲ್ಲಿ ತೇರದಾಳ, ಜಮಖಂಡಿ, ಬಾಗಲಕೋಟೆ ಹಾಗೂ ಹುನಗುಂದ ಮತಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ.

Nimma Suddi
";