ಬಾಗಲಕೋಟೆ ; ಕರ್ತವ್ಯಕ್ಕೆ ಹಾಜರಾಗಲು ವರದಿ ಮಾಡಿಕೊಳ್ಳುವ ಸಂಬಂಧ ತಮ್ಮದೇ ಇಲಾಖೆಯ ನೌಕರನಿಗೆ 5 ಸಾವಿರ ರೂ.ಗಳ ಲಂಚ ಕೇಳಿ ಪಡೆಯುತ್ತಿದ್ದಾಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅ್ಇಕಾರಿಗಳ ಕಚೇರಿಯ ಸಹಾಯಕ ಆಡಳಿತಾಧಿಕಾರಿ ರಾಜಶ್ರೀ ಪೋಳ ಲೋಕಾಯುಕ್ತ ಬಲೆಗೆ ಸಿಲುಕಿದ್ದಾರೆ.
ಆರೋಗ್ಯ ಇಲಾಖೆಯ ನೌಕರ ರಾಘವೇಂದ್ರ ಮಡಿವಾಳ ಕರ್ತವ್ಯಕ್ಕೆ ಅನಧಿಕೃತ ಗೈರು ಉಳಿದಿದ್ದು, ಅವರನ್ನು ಮರಳಿ ಕರ್ತವ್ಯಕ್ಕೆ ಸೇರಿಸಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಟಿಪ್ಪಣಿ ಮೂಲಕ ರಾಜಶ್ರೀ ಪೋಳ ಅವರಿಗೆ ಸೂಚಿಸಿದ್ದರು.
ಆದರೂ ರಾಘವೇಂದ್ರ ಮಡಿವಾಳ ಅವರನ್ನು ಕರ್ತವ್ಯಕ್ಕೆ ಹಾಜರು ಮಾಡಿಕೊಳ್ಳಲು ಪೋಳು ವಿಳಂಬತೆ ತೋರಿ ಸತಾಯಿಸಿದ್ದು, 5 ಸಾವಿರ ರೂ.ಲಂಚಕ್ಕೆ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ. ಮಡಿವಾಳರಿಂದ 5 ಸಾವಿರ ರೂ.ಲಂಚ ಪಡೆಯುವಾಗ ಲೋಕಾಯುಕ್ತ ಎಸ್ ಪಿ ಸತೀಶ ಚಿಟಗುಬ್ಬಿ ಅವರ ಮಾರ್ಗದರ್ಶನದ ತಂಡ ಬಲೆ ಬೀಸಿದ್ದಾರೆ.
ಡಿವೈಎಸ್ಪಿ ಸಿದ್ದೇಶ್ವರ ನೇತೃತ್ವದಲ್ಲಿ ಸಿಪಿಐಗಳಾದ ಬಸವರಾಜ ಲಮಾಣಿ, ಬಸವರಾಜ ಮುಕಾರ್ತಿಹಾಳ ಸಿಬ್ಬಂದಿಗಳಾದ ಬಸವರಾಜ ದೇಸಾಯಿ, ನಾಗಪ್ಪ ಪೂಕಾರಿ, ಸಿದ್ದು ಮುರನಾಳ, ಮಂಜು ಜೋಕೆರ, ಭೀಮನಗೌಡ ಪಾಟೀಲ, ಶಂಕರ ಬಳಬಟ್ಟಿ, ಹನಮಂತ ಹಲಗತ್ತಿ, ಶಿವಾನಂದ ಮುಷ್ಠಿಗೇರಿ, ರಾಮನಗೌಡ ಗೌಡರ, ವಿ.ಜಿ.ರಾಜನಾಳ, ಹನಮಂತ ಮಾಸರಡ್ಡಿ ಮತ್ತಿತರರು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.