ಬೆಂಗಳೂರು : ದೆಹಲಿಗೆ ಹೊರಟಿದ್ದ ನಮ್ಮ ರಾಜ್ಯ ರೈತರನ್ನು ವಶಕ್ಕೆ ಪಡೆಯಲಾಗಿದೆ ರಾಜ್ಯದ ರೈತರನ್ನು ವಶಕ್ಕೆ ಪಡೆದು ವಾರಣಾಸಿಗೆ ಸ್ಥಳಾಂತರಿಸುತ್ತಿದ್ದಾರೆ ರೈತರನ್ನು ಸ್ಥಳಾಂತರಿಸದೆ ಕೂಡಲೇ ಬಿಡುಗಡೆಗೊಳಿಸುವಂತೆ ಮಧ್ಯಪ್ರದೇಶದ ಸಿಎಂ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದು ಮನವಿ ಮಾಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಮಧ್ಯಪ್ರದೇಶದ ಸಿಎಂ ಡಾ. ಮೋಹನ್ ಯಾದವ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ರಾಜ್ಯದ ರೈತರನ್ನು ಮತ್ತೆ ಪ್ರದೇಶ ವಶಕ್ಕೆ ಪಡೆದು ನಾಲ್ಕು ದಿನಗಳಾಗಿವೆ. ನ್ಯಾಯಯುತವಾಗಿ ಪ್ರತಿಭಟನೆಗೆ ತೆರಳುತ್ತಿದ್ದರು. ಅದು ಸಂವಿಧಾನಿಕ ಹಕ್ಕಾಗಿದೆ ರಾಜ್ಯದ ರೈತರನ್ನು ಭೋಪಾಲ್ ಪೊಲೀಸರು ಬಂಡಿಸಿರುವುದು ದುರದಷ್ಟಕರವಾಗಿದೆ. ಮಧ್ಯಪ್ರದೇಶದ ಪೊಲೀಸರು ರೈತರ ಜೊತೆ ಕೆಟ್ಟದಾಗಿ ವರ್ತಿಸುತ್ತಿದ್ದಾರೆ ಎಂದು ಸೂಚಿಸಿದರು.