ಕಲಬುರಗಿ : ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದ ನಿರ್ದೇಶಕ, ನಿರ್ಮಾಪಕ, ನಟ ಎಲ್ಲಾ ಅವರೇ ಇದ್ದು, ಈಗ ಅದೆಲ್ಲವನ್ನು ಬಿಟ್ಟು ಪ್ರದರ್ಶಕರ ಮೇಲೆ ತಪ್ಪನ್ನು ಹಾಕುತ್ತಿದ್ದಾರೆ. ಡೈರೆಕ್ಟರ್, ಪ್ರೊಡ್ಯೂಸರ್, ಆಕ್ಟರ್ ಬಗ್ಗೆ ಮಾತನಾಡ್ತಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಪೆನ್‌ಡ್ರೈವ್ ಪ್ರಕರಣದ ಡೈರೆಕ್ಟರ್, ಪ್ರೊಡ್ಯೂಸರ್, ಆ್ಯಕ್ಟರ್ ಎಲ್ಲಾ ಅವರೇ ಇದ್ದಾರೆ. ಅದು ಬಿಟ್ಟು ಪ್ರದರ್ಶಕರ ಮೇಲೆ ಹಾಕುತ್ತಿದ್ದಾರೆ. ಪಾಪ ಯಾರೋ ಸಿನಿಮಾ ಟೆಂಟ್ ಹಾಕಿರುತ್ತಾರೆ, ಯಾವುದೋ ಪಿಚ್ಚರ್ ರಿಲೀಸ್ ಮಾಡ್ತಾರೆ. ಆದರೆ, ಆ ಡೈರೆಕ್ಟರ್, ಪ್ರೊಡ್ಯೂಸರ್, ಆ್ಯಕ್ಟರ್ ಗಳ ಬಗ್ಗೆ ಮಾತನಾಡ್ತಿಲ್ಲ. ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದತಿಗೆ ಪತ್ರ ಬರೆದರು ಕೂಡ ಇನ್ನು ಕ್ರಮಕೈಗೊಂಡಿಲ್ಲ. ಮೋದಿಯವರಿಗೆ ರಷ್ಯಾ-ಉಕ್ರೇನ್ ನಿಲ್ಲಿಸೋಕೆ ಆಗುತ್ತೆ. ಪಾಸ್ ಪೋಟ್೯ ರದ್ದು ಮಾಡೋಕ್ ಆಗ್ತಿಲ್ವಾ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್‌ನಲ್ಲಿ ಶಿವರಾಮೇಗೌಡ ಆಡಿಯೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಆಡಿಯೋದಲ್ಲಿ ಮಾತನಾಡಿರೋ ಇಬ್ಬರು ಕೂಡ ಬಿಜೆಪಿ ನಾಯಕರು. ಅದಕ್ಕೆ ಬಿಜೆಪಿಯವರೇ ಉತ್ತರ ಕೊಡಬೇಕು. ಅವರು ಇಬ್ಬರು ಯಾರದ್ದೋ ಹೆಸರು ಉಲ್ಲೇಖ ಮಾಡಿದ್ರೆ ನಾವಾಕ್ಯೆ ಉತ್ತರ ಕೊಡಬೇಕು. ಈ ಸಂಪೂರ್ಣ ಘಟನೆ ಬಗ್ಗೆ ಶಾ ಅವರಿಗೆ ಮಾಹಿತಿ ಇತ್ತು. ಪ್ರಕರಣ ಮುಖ್ಯ ಆರೋಪಿಯೇ ಇನ್ನು ಸಿಕ್ಕಿಲ್ಲ. ಆಗಲೇ ಕೇಸ್‌ನ ದಾರಿ ತಪ್ಪಿಸೋ ಕೆಲಸ ಮಾಡ್ತಿದ್ದಾರೆ ಎಂದರು.