This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Education NewsLocal NewsNational NewsState News

ಮಹಾ ಪ್ರಸಾದಿ ಶ್ರೀ ಡೋಹರ ಕಕ್ಕಯ್ಯನವರ ಜಾತ್ರಾ ಮಹೋತ್ಸವ

ಮಹಾ ಪ್ರಸಾದಿ ಶ್ರೀ ಡೋಹರ ಕಕ್ಕಯ್ಯನವರ ಜಾತ್ರಾ ಮಹೋತ್ಸವ

ಬೆಳಗಾವಿ

ಖಾನಾಪೂರ ತಾಲೂಕಿನ ಶ್ರೀಕ್ಷೇತ್ರ ಕಕ್ಕೇರಿ ಗ್ರಾಮದಲ್ಲಿರುವ ಶ್ರೀ ಡೋಹರ ಕಕ್ಕಯ್ಯನವರ ಜಾತ್ರೆಯನ್ನು ಅದ್ದೂರಿಯಾಗಿ ಮಾಡಬೇಕೆಂದು ಜಾತ್ರಾ ಕಮೀಟಿ ನಿರ್ಣಯ ಮಾಡಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಸಹ ದಿ: ೮ ರಂದು ಮಹಾಶಿವರಾತ್ರಿಯ ದಿನದಂದು ಅಖಂಡ ಜಾಗರಣೆ, ಮತ್ತು ಪ್ರವಚನ-ದೇವರ ನಾಮಸ್ಮರಣೆ ಇರುವದು ನಂತರದ ದಿನ ದಿ: ೯ ರಂದು ಮುಂಜಾನೆ ಮಹಾ ರುದ್ರಾಭಿಷೇಕ, ಅಡ್ಡಪಲ್ಲಕ್ಕಿ ಉತ್ಸವದ ನಂತರ ಸಾಮೂಹಿಕ ವಿವಾಹ ಕಾರ್ಯಕ್ರಮ, ಹಾಗೂ ಮಹಾ ಅನ್ನ ಪ್ರಸಾದ ಜರಗುವದು, ಈ ಅಜ್ಜನವರ ಜಾತ್ರೆಗೆ ವಿಶೇಷ ಅತಿಥಿಗಳಾಗಿ ಖಾನಾಪುರ ಶಾಸಕರಾದ ವಿಠ್ಠಲ ಹಲಗೇಕರ್ ರವರು, ನಾಗ್‌ಠಾಣಾ ಶಾಸಕರಾದ ವಿಠ್ಠಲ ಕಟಕದೋಂಡ ರವರು ಮತ್ತು ಹುಬ್ಬಳ್ಳಿ ಪೂರ್ವಕ್ಷೇತ್ರ ಶಾಸಕರು ಪ್ರಸಾದ ಅಬ್ಬಯ್ಯನವರು ಹಾಗೂ ಹಲವಾರು ಸರ್ಕಾರಿ ಅಧಿಕಾರಿಗಳು ಈ ಜಾತ್ರೇಗೆ ಉಪಸ್ಥರಿರುವರು.

ಶ್ರೀ ಕ್ಷೇತ್ರ ಕಕ್ಕೇರಿ ಗ್ರಾಮದಲ್ಲಿ ನೆಲೆಸಿರುವ ೧೨ನೇ ಶತಮಾನದ ಪ್ರಸಿದ್ಧ ಶೀ ಡೋಹರ ಕಕ್ಕಯ್ಯ ನವರದ್ದು ಒಂದು ಅತ್ಯಂತ ರೋಚಕ ಕಥೆಯೆ ಇದೆ ಎಂದು ನಾವು ಹೇಳಬಹುದು.

೧೨ ಶತಮಾನದಲ್ಲಿ ಒಂದು ರಾಜ್ಯದಲ್ಲಿ ಮಹಾನ ಸೈನ್ಯಾದಿಪತಿಗಳಾಗಿ ಶ್ರೀ ಡೋಹರ ಕಕ್ಕಯ್ಯಾನವರು ಕಾರ್ಯನಿರ್ವಹಿಸುತ್ತಿದ್ದರು ನಂತರ ದಿನಗಳಲ್ಲಿ ಮನ ಪರಿರ್ವತನೆಗೊಂಡ ನಂತರ ಒಂದು ರಾಜ್ಯ ದಿಂದ ಇನ್ನೊಂದು ರಾಜ್ಯಕ್ಕೆ ವಲಸೆ ಹೋಗುತ್ತಾ ಬಿಜ್ಜಳರ ರಾಜ್ಯದಲ್ಲಿ ಮಹಾನ ಬಸವಣ್ಣನವರು ಹೆಸರುಕೇಳಿ ಅವರನ್ನು ಒಂದು ಬಾರಿಯಾದರು ಅವರನ್ನು ಬೆಟ್ಟಿ ಮಾಡಲೇಬೇಕೆಂದು ಅವರ ರಾಜ್ಯಕ್ಕೇ ಒಲಸೆ ಬಂದರು ನಂತರ ದಿನಗಳಲ್ಲಿ ದಿನಗಳು ಕಳದಂತೆ ಅವರನ್ನು ಬೆಟ್ಟಿ ಮಾಡುವ ಅವಕಾಸ ದೊರಕದೆ ಹೋದಾಗ ಕಕ್ಕಯ್ಯನವರ ತಮ್ಮದೆ ಆದ ತೋಗಲು ಹದಮಾಡುವ ಕಾಯಕದಲ್ಲಿ ನಿರತರಾಗುತ್ತಾರೆ ಒಂದು ದಿನ ಬಿಜ್ಜಳ ರಾಜ್ಯಕ್ಕೆ ಕಕ್ಕಯ್ಯನವರು ಬಂದುಳಿದಿರುವ ವಿಷಯ ತಿಳಿದು ಬಸವಣ್ಣನವರು ಅವರನ್ನು ತಮ್ಮ ಅನುಭವ ಮಂಟಪಕ್ಕೆ ಕರೆತಂದು ಅವರನ್ನು ನಮ್ಮ ಶಿವ ಶರಣರಲ್ಲಿ ಒಬ್ಬರಾಗಿ ಅವರ ವಿಚಾರ ದಾರೆಗಳನ್ನು ಪ್ರಸ್ತಾಪಸಲ್ಪಡುತ್ತಾರೆ ಕಕ್ಕನವರ ಅನುಬವ ಅವರ ವಿಚಾರ ದಾರೆಗಳನ್ನು ಕಂಡ ಬಸವಣ್ಣನವರು ನಂತರದ ದಿನಗಳಲ್ಲಿ ಅವರನ್ನು ತಮ್ಮ ಮಂಟಪಕ್ಕೆ ಬರುವ ಎಲ್ಲ ಶಿವ ಶರಣರಿಗೆ ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆಮಾಡುವ ಕಾಯಕಕ್ಕೆ ಅವರನ್ನು ನಿಯಮಿಸುತ್ತಾರೆ ಆಗ ಎಲ್ಲ ಶಿವ ಶರಣರು ಹಾಗೂ ಇವರ ಭಕ್ತಾದಿಗಳು ಇವರ ಕಾಯಕವನ್ನು ಆನಂದಿಸಿ ಹೊಗಲತೋಡಗುತ್ತಾರೆ ಇದನ್ನೂ ನೋಡಿದ ಬಸವನ್ನನವರು ಇವರ ಕಾಯಕವನ್ನು ಮೆಚ್ಚಿ ಕಕ್ಕಯ್ಯಾನವರನ್ನು ಶ್ರೀ ಮಹಾಪ್ರಸಾದಿ ಡೋಹರ ಕಕ್ಕಯ್ಯಾ ಎಂದು ಹೆಸರಿಸಲ್ಪಡುತ್ತಾರೆ.

ಹೀಗೆ ಐತಿಹಾಸಿಕ ಸ್ಥಳವಾದ ಶ್ರೀಕ್ಷೇತ್ರ ಕಕ್ಕೇರಿ ಜಾತ್ರೆಗೆ ಪ್ರತಿ ವರ್ಷ ದಂತೆ ಈ ವರ್ಷವು ೨೫ಸಾವಿರದಿಂದ ೩೦ ಸಾವಿರ ಜನರು ಸೇರುವ ಸಾಧ್ಯತೆ ಇದ್ದು ಭಕ್ತರಿಗೆ ಎಲ್ಲರಿತಿಯಿಂದ ಅವರಿಗೆ ಜಾತ್ರಾ ವ್ಯವಸ್ಥೆ ಮಾಡಲಾಗಿದೆ ಎಂದು ಜಾತ್ರ‍್ತಾ ಕಮಿಟಿ ಬೆಳಗಾವಿ ಸರ್ಕಿಟ್ ಹೌಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು ಈ ಸಭೆಗೆ ಸುಭಾಸ ನಾರಾಯನಕರ, ರಾವ್ ಬಹದ್ದೂರ ಕದಂ, ವಿಠ್ಠಲ ಪೋಲ್. ವಿನಾಯಕ ಕದಂ. ಯೋಗೇಶ ಮಾವರಕರ, ಯಶವಂತ ನಾರಾಯನಕರ, ಅಶ್ವೀನಿ ಸಿರೆಕರ, ನಿಜಲಿಂಗ ನಾರಾಯನಕರ, ಮಂಜು ಹುಟಗಿ, ಯಲ್ಲಪ್ಪಾ ಸವನೂರ, ಸುಭಾಸ ಘೋಡಕೆ, ಪ್ರತಾಪ ಸಿರೆಕರ ಇವರು ಉಪಸ್ಥಿರಿದ್ದರು.

";