This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ಪರಿಶುದ್ಧವಾದ ಕುಂಕುಮವನ್ನು ಮನೆಯಲ್ಲೇ ತಯಾರಿಸುವುದು ಅತ್ಯಂತ ಸುಲಭ

ಪರಿಶುದ್ಧವಾದ ಕುಂಕುಮವನ್ನು ಮನೆಯಲ್ಲೇ ತಯಾರಿಸುವುದು ಅತ್ಯಂತ ಸುಲಭ

ಇಂದಿನ ಹೆಣ್ಣುಮಕ್ಕಳಲ್ಲಿ ಕುಂಕುಮವನ್ನು ಕಾಣುವುದು ಬಹಳ ಕಷ್ಟ ಎನ್ನುವಂತಾಗಿದ್ದು, ಇತ್ತೀಚೆಗಿನ ದಿನಗಳಲ್ಲಿ ವಿವಿಧ ತೆರೆನಾದ ಬಿಂದಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆಯಾದರೂ, ಈಗಿನವರು ಕಾಲದವರು ಹಣೆಗೆ ಸಿಂಧೂರ ಬಿಡಿ, ಬಿಂದಿಯನ್ನು ಇಡುವುದೇ ಇಲ್ಲ. ಈಗಿನ ಹೆಣ್ಣುಮಕ್ಕಳನ್ನು ಕೇಳಿದರೆ ಫ್ಯಾಷನ್ ಎನ್ನುವ ಮೂಲಕ ಹಿರಿಯರ ಬಾಯಿ ಮುಚ್ಚಿಸುತ್ತಾರೆ.

ಸಿಂಧೂರವೆನ್ನುವುದು ಕೇವಲ ಭಾರತೀಯ ಸಂಸ್ಕೃತಿವಾಗಿರದೇ ವೈಜ್ಞಾನಿಕ ಕಾರಣಗಳು ಅಡಗಿವೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.ದಕ್ಷಿಣ ಭಾರತದ ಸೇರಿದಂತೆ ದಕ್ಷಿಣ ಏಷ್ಯಾದ ಕೆಲವು ಕಡೆಗಳಲ್ಲಿ ಹಣೆ ತುಂಬಾ ಸಿಂಧೂರವಿಡುವ ಸಂಪ್ರದಾಯವಿದೆ. ಸಾಮಾನ್ಯವಾಗಿ ಕೆಂಪು ಅಥವಾ ಕಿತ್ತಳೆ ಬಣ್ಣದಲ್ಲಿರುವ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಸಿಂಧೂರವನ್ನು ರಾಸಾಯನಿಕವನ್ನು ಬೆರೆಸಿಮಾಡಲಾಗುತ್ತದೆ.

ನೈಸರ್ಗಿಕವಾಗಿ ಮನೆಯಲ್ಲೇ ತಯಾರಿಸುವ ಕುಂಕುಮದಿಂದ ಚರ್ಮದ ಸಮಸ್ಯೆಯು ಬಾಧಿಸುವುದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ವಿಡಿಯೋವೊಂದರಲ್ಲಿ ಮನೆಯಲ್ಲಿಯೇ ಸುಲಭವಾಗಿ ಹಣೆಗೆ ಹಚ್ಚುವ ಕುಂಕುಮವನ್ನು ತಯಾರಿಸುವುದನ್ನು ತೋರಿಸಲಾಗಿದೆ.

ಸಿಂಧೂರವನ್ನು ಮನೆಯಲ್ಲಿ ತಯಾರಿಸಲು ಅರಿಶಿನ, ನಿಂಬೆ ರಸ, ಗುಲಾಬಿ ನೀರು, ದೇಸಿ ತುಪ್ಪ ಮತ್ತು ಗುಲಾಬಿ ನಿಂಬೆ ಪುಡಿಯಂತಹ ನೈಸರ್ಗಿಕ ಪದಾರ್ಥಗಳನ್ನು ಬಳಸಲಾಗಿದೆ. ಈ ವಿಡಿಯೋದ ಪ್ರಾರಂಭದಲ್ಲಿ ಸಣ್ಣ ಮಿಕ್ಸಿ ಜಾರಿಗೆ ಸ್ವಲ್ಪ ಪ್ರಮಾಣದಲ್ಲಿ ಅರಶಿನ, ಎರಡು ಚಮಚದಷ್ಟು ನಿಂಬೆರಸ ಹಾಗೂ ಎರಡು ಚಮಚ ಗುಲಾಬಿ ನೀರು, ಒಂದು ಚಮಚದಷ್ಟು ದೇಸಿ ತುಪ್ಪ ಹಾಗೂ ಅರ್ಧ ಚಮಚ ಗುಲಾಬಿ ನಿಂಬೆ ಪುಡಿಯನ್ನು ಹಾಕಿ, ಚೆನ್ನಾಗಿ ರುಬ್ಬಿಕೊಳ್ಳಲಾಗಿದೆ. ಹೆಣ್ಣಿನ ಸೌಭಾಗ್ಯದ ಸಂಕೇತವಾಗಿರುವ ನೈಸರ್ಗಿಕ ಸಿಂಧೂರವೂ ಸಿದ್ಧವಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

Nimma Suddi
";