This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಪ್ರಧಾನಿ ಮೋದಿಯವರಂತೆ ಸುಳ್ಳು ಹೇಳೋಕೆ ನಮಗೆ ಬರಲ್ಲ – ಮಲ್ಲಿಕಾರ್ಜುನ ಖರ್ಗೆ

ಪ್ರಧಾನಿ ಮೋದಿಯವರಂತೆ ಸುಳ್ಳು ಹೇಳೋಕೆ ನಮಗೆ ಬರಲ್ಲ – ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ದೇಶದಲ್ಲಿ ಸರ್ವಾಧಿಕಾರ ತರಬೇಕು ಅನ್ನೋದೇ ಪ್ರಧಾನಿ ನರೇಂದ್ರ ಮೋದಿಯವರ ಉದ್ದೇಶವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ಕಲಬುರಗಿಯ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ” ದೇಶದಲ್ಲಿ 545 ಕ್ಷೇತ್ರಗಳಿದ್ದು, ಎಲ್ಲವನ್ನೂ ನಾವೇ ಗೆಲ್ತೀವಿ ಅಂತಾರೆ. ಮೋದಿಯವರ ಈ ನಡುವಳಿಕೆ ಮತ್ತು ಪ್ರಜಾಪ್ರಭುತ್ವದ ಕುರಿತು ಅವರಿಗೆ ಇರುವ ಅಭಿಪ್ರಾಯ ಸರಿಯಿಲ್ಲ ” ಎಂದರು.

ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಮೋದಿ ದುರುಪಯೋಗ ಮಾಡಿಕೊಳ್ಳುತ್ತಿದ್ದು, ವಿರೋಧ ಪಕ್ಷಗಳಲ್ಲಿ ಇರುವ ಮುಖಂಡರನ್ನು ಹೆದರಿಸಿ ತಮ್ಮ ಕಡೆ ಸೆಳೆದುಕೊಳ್ಳುತಿದ್ದಾರೆ. ಈಗ ಪರಿಸ್ಥಿತಿ ಹೇಗಿದೆ ಎಂದರೆ, ನಮ್ಮ ಕಡೆ ಇದ್ದಾಗ ಕರಪ್ಟ್ ಅಂತಾರೆ, ಅವರ ಕಡೆ ಹೋದಾಗ ಕರೆಕ್ಟ್ ಹೇಗೆ ಆಗ್ತಾರೆ ಎಂದು ಪ್ರಶ್ನಿಸಿದರು.

ಮೋದಿ ಒಟ್ಟಾರೆ ದೇಶದಲ್ಲಿ ದ್ವಂದ್ವ ರಾಜಕಾರಣ ನಡೆಸುತ್ತಿದ್ದು, ರೀತಿ ಮುಂದುವರೆದರೆ ಪ್ರಜಾಪ್ರಭುತ್ವಕ್ಕೆ ಅಪಾಯ ತಪ್ಪಿದ್ದಲ್ಲ. ದೇಶದಲ್ಲಿ ಸರ್ವಾಧಿಕಾರದ ಆಡಳಿತ ತರಬೇಕು ಅನ್ನೋದು ಪ್ರಧಾನಿ ಮೋದಿಯವರ ಆಸೆಯಾಗಿದ್ದು, ಇದನ್ನು ದೇಶದ ಜನರು ಅರ್ಥ ಮಾಡಿಕೊಳ್ಳಬೇಕು. ಮೋದಿ ಇದ್ದರೆ ಮಾತ್ರ ದೇಶ ನಡೆಯುತ್ತೆ ಅಂತ ಕೆಲವರು ತಿಳಿದುಕೊಂಡಿದ್ದಾರೆ. ಆದರೆ, ಮೋದಿಗಿಂತಲೂ ಮೊದಲು ದೇಶದಲ್ಲಿ ಯಾರೂ ಪ್ರಧಾನ ಮಂತ್ರಿಗಳು ಇರಲಿಲ್ಲವಾ? ” ಎಂದು ಮರುಪ್ರಶ್ನೆ ಹಾಕಿದರು.

";