ಕಲಬುರಗಿ: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಅಡ್ಡ ಮತದಾನ ಭೀತಿ ವಿಚಾರವಾಗಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಸುಳ್ಳು, ನೇರ ಮತದಾನ ನಡೆಯಲಿದೆ ಎಂದು ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ಮೇಲೆ ಕಾಂಗ್ರೆಸ್ ಸಂಪೂರ್ಣ ನಾಶ ಆಗುತ್ತದೆ ಎಂಬ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಹೇಳಿಕೆ ವಿಚಾರವಾಗಿ ಮಾತನಾಡಿದ ಖರ್ಗೆ, ಅವರು ವಿರೋಧ ಪಕ್ಷದವರಿದ್ದಾರೆ. ಏನು ಬೇಕಾದರೂ ಹೇಳುತ್ತಾರೆ. ಎಸ್ಪಿ, ಆಮ್ ಆದ್ಮಿ ಪಕ್ಷ, ಝಾರ್ಖಂಡ್, ಬಿಹಾರದಲ್ಲಿ ನಮ್ಮ ಮೈತ್ರಿ ಘೋಷಣೆಯಾಗಿದೆ. ಹೊಂದಾಣಿಕೆ ಆಗಬೇಕಿದೆ ಎಂದರು.ಪ್ರಜಾಪ್ರಭುತ್ವದಲ್ಲಿ ಅಹಂನಿಂದ ಮಾತಾಡಿದರೆ ಜನ ಅವರಿಗೆ ಪಾಠ ಕಲಿಸುತ್ತಾರೆ ಎಂದರು.
ಕಲಬುರಗಿಗೆ ಬಂದು ಚವ್ಹಾಣ್ ಏನೇನೋ ಮಾತಾಡಿ ಹೋಗುವುದಲ್ಲ. 371 ಜೆ ಈ ಭಾಗಕ್ಕೆ ತಂದಿದ್ದೇವೆ, ರಾಜ್ಯ ಸರ್ಕಾರ ಐದು ಸಾವಿರ ಕೋಟಿ ಕೊಡುತ್ತಿದೆ. ಕೆಕೆಆರ್ಡಿಬಿಗೆ 10 ಸಾವಿರ ಕೋಟಿ ಕೊಡಿಸಲು ಹೇಳಿ ಚವ್ಹಾಣ್ಗೆ. ಸುಮ್ಮನೆ ಮಾತಾಡಿ ಹೋಗುವುದಲ್ಲ. ನಮ್ಮ ಅಸ್ಥಿತ್ವವೇ ನಿಮಗೆ ಗೊತ್ತಿಲ್ಲ ಅಂದರೆ ನಮಗ್ಯಾಕೆ ಟೀಕೆ ಮಾಡುತ್ತೀರಾ? ನಾವು ಶಕ್ತಿ ಶಾಲಿ ಇದ್ದೇವೆ ಅಂತಾ ಅವರಿಗೆ ಗೊತ್ತಿಲ್ಲ ಎಂದರು.
ಸುರಪುರ ಕಾಂಗ್ರೆಸ್ ಶಾಸಕ ರಾಜಾವೆಂಕಟಪ್ಪ ನಾಯಕ್ ವಿಧಿವಶ ಹಿನ್ನಲೆ ಅಂತಿಮ ದರ್ಶನ ಪಡೆಯಲು ವಿಶೇಷ ವಿಮಾನದ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆ, ರಾಜಾವೆಂಕಟಪ್ಪ ನಾಯಕ್ ಅವರನ್ನ ಕಳೆದುಕೊಂಡಿರುವುದು ನನಗೆ ಅತೀವ ದುಖಃವಾಗಿದೆ ಎಂದು ಹೇಳಿದರು.