This is the title of the web page
This is the title of the web page

Live Stream

June 2024
S M T W T F S
 1
2345678
9101112131415
16171819202122
23242526272829
30  

| Latest Version 9.4.1 |

State News

ಬಂಗಾಳದಲ್ಲಿ ಕಾಂಗ್ರೆಸ್​​ಗೆ ಒಂದೇ ಒಂದು ಸೀಟು ಕೊಡಲಾರೆ; ಮಮತಾ ಬ್ಯಾನರ್ಜಿ

ಮಾಲ್ಡಾ (ಪಶ್ಚಿಮ ಬಂಗಾಳ): ಜನವರಿ 31: ಬಂಗಾಳದಲ್ಲಿ ಇಂಡಿಯಾ ಮೈತ್ರಿಕೂಟ ಬಗ್ಗೆ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಸಿಡಿದೆದ್ದಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಈ ಬಾರಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹೊಸ ಷರತ್ತೊಂದನ್ನು ಕಾಂಗ್ರೆಸ್ ಮುಂದಿಟ್ಟಿದ್ದು, ಕಾಂಗ್ರೆಸ್ ಪಕ್ಷ ಟಿಎಂಸಿ ಜತೆ ಯಾವುದೇ ಮೈತ್ರಿ ಬಯಸುವುದಾದರೆ ಅವರು ಸಿಪಿಎಂನಿಂದ ದೂರವಾಗಬೇಕು ಎಂಬುದು. ಸೀಟು ಹಂಚಿಕೆ ಮಾತುಕತೆಯ ಸಂದರ್ಭದಲ್ಲಿ ತೃಣಮೂಲದ ಎರಡು ಸ್ಥಾನಗಳ ಪ್ರಸ್ತಾಪವನ್ನು ಕಾಂಗ್ರೆಸ್ ತಿರಸ್ಕರಿಸಿದೆ.

ನಾವು ಅವರಿಗೆ ಒಂದೇ ಒಂದು ಸೀಟು ಕೂಡಾ ಕೊಡುವುದಿಲ್ಲ ಎಂದಿದ್ದಾರೆ ಮಮತಾ ಬ್ಯಾನರ್ಜಿ.ಸಿಪಿಎಂ ಹಲವು ಸಂದರ್ಭಗಳಲ್ಲಿ ನನ್ನ ಮೇಲೆ ದೈಹಿಕ ಹಲ್ಲೆ ನಡೆಸಿದೆ. ನನ್ನನ್ನು ನಿರ್ದಯವಾಗಿ ಥಳಿಸಲಾಯಿತು. ನನ್ನ ಹಿತೈಷಿಗಳ ಆಶೀರ್ವಾದದಿಂದ ಮಾತ್ರ ನಾನು ಬದುಕಿದ್ದೇನೆ ಎಂದರು.