This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsState News

ಸಡಗರ ಸಂಭ್ರಮದಿಂದ, ಜರುಗಿದ ಮಾರುತೇಶ್ವರ ಬಸವೇಶ್ವರ ರಥೋತ್ಸವ

ಸಡಗರ ಸಂಭ್ರಮದಿಂದ, ಜರುಗಿದ ಮಾರುತೇಶ್ವರ ಬಸವೇಶ್ವರ ರಥೋತ್ಸವ

ಬಾಗಲಕೋಟೆ

ಪ್ರತಿ ವರ್ಷದಂತೆ ಈ ವರ್ಷವು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲುಕಿನ ತಿಮ್ಮಾಪೂರ ಗ್ರಾಮದ ಅರಾದ್ಯದೇವರಾದ ಶ್ರೀ ಮಾರುತೇಶ್ವರ ಹಾಗೂ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಇತ್ತೀಚಿಗೆ ಮಹಾರಥೋತ್ಸವ ಸಡಗರ ಸಂಭ್ರಮದಿAದ ನೇರವೇರಿತು.

ಅಂದು ಮಧ್ಯಾಹ್ನ ಕಳಸದ ಮೆರವಣಿಗೆಯು ಗ್ರಾಮದಲ್ಲಿ ಸಂಚರಿಸಿದ ನಂತರದ ಕಳಸವನ್ನು ರಥಕ್ಕೆ ಏರಿಸಲಾಗಿತ್ತು ನಂತರ ಭಕ್ತರು ರಥದ ಹಗ್ಗ ಎಳೆಯುವ ಮೂಲಕ ಭಕ್ತಿ ಭಾವದಲ್ಲಿ ಪರವಶರಾದರು.
ರಥೋತ್ಸವದ ಪೂರ್ವದಲ್ಲಿ ಗ್ರಾಮದರಲ್ಲಿ ಉಚ್ಚಯ್ಯ (ಸಣ್ಣ ತೇರು)ನ್ನು ಪಾದಗಟ್ಟೆಯವರಿಗೆ ಎಳೆಯಲಾಯಿತು.

ಕಳೆದ ೨೦೦೦ ಇಸ್ವಿಯಲ್ಲಿ ಚಿತ್ತರಗಿ-ಇಲಕಲ್ಲನ ವಿಜಯ ಮಹಾಂತಶ್ರೀಗಳು ಕೊಳೂರ ಶ್ರೀಗಳು, ಹಡಗಲಿ- ನಿಡಗುಂದಿಯ ರುದ್ರಮುನಿ ಶ್ರೀಗಳು ನಂದವಾಡಗಿಯ ಸಾನಿಧ್ಯದಲ್ಲಿ ಪ್ರಾರಂಭಗೊoಡು ಈ ಇಂದಿಗೆ ೨೩ ವರ್ಷಕ್ಕೆ ಪೂರೈಸಿ ೨೪ ವರ್ಷದ ರಥೋತ್ಸವ ಪಾದರ್ಪಣೆಗೊಂಡ್ಡಿದ್ದು ಈ ವರ್ಷದ ರಥೋತ್ಸವವನ್ನು ಹಡಗಲಿ-ನಿಡಗುಂದಿಯ ರುದ್ರಮುನಿ ಶ್ರೀಗಳು ನಂದವಾಡಗಿಯ ಚನ್ನಬಸವ ಶ್ರೀಗಳು ಗ್ರಾಮದ ವೆ.ಮೂ ಬಸಯ್ಯ ಹೀರೇಮಠ ಸಾಮೂಹಿಕವಾಗಿ ಚಾಲನೆ ನೀಡಿದರು ಈ ಸಂಧರ್ಭದಲ್ಲಿ ಗ್ರಾಮದ ಹಿರಿಯರು ಇತರರು ಉಪಸ್ಥಿತರಿದ್ದರು.

ವಿವಿಧ ಬಣ್ಣದ ಧ್ವಜ ಬಾಳೆಕಂಬಗಳ ವಿವಿಧ ಬಗೆಯ ಹೂಗಳಿಂದ ಶೃಂಗಾರ ಮಾಡಿದ ಭವ್ಯವಾದ ರಥ ನೋಡುಗರ ಕಣ್ಮನ ಸೆಳೆಯಿತು. ರಥೋತ್ಸವದಲ್ಲಿ ತಿಮ್ಮಾಪೂರ, ಹಡಗಲಿ, ಚಿತ್ತರಿಗಿ, ಹುನಗುಂದ ಇಲಕಲ್ಲ ಅಮರಾವತಿ, ಬೇವೂರ, ಹಳ್ಳೂರ, ಭಗವತಿ, ಬೆಳಗಲ್ಲ, ಇದ್ದಲಗಿ, ಧನ್ನೂರ ಕೂಡಲಸಂಗಮ, ಬೆಂಗಳೂರ ಸೇರಿದಂತೆ ವಿವಿಧ ಮಹಾರಾಷ್ರ ಕೊಲ್ಹಾಪೂರ ಪೂಣೆ ಮಂಗಳೂರಿನ ಭಕ್ತರು ಸೇರಿದಂತೆ ಅಪಾರ ಭಕ್ತರು ರಥೋತ್ಸವದಲ್ಲಿ ಪಾಲ್ಲೋಡಿದರು,

ಸೂಕ್ತ ಬಂದೋಬಸ್ತ್: ಹುನಗುಂದ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆಯ ಅಧಿಕಾರಿಗಳಾದ ಪ್ರಕಾಶ ಡಿ ನೇತೃತ್ವದಲ್ಲಿ ಹೆಡ್ ಕಾನ್ಸ್ಟೇಬಲ್ ಗಳಾದ ಎನ್ ಸಿ ಪಾಟೀಲ್ ಸಿದ್ದು ಕೌಲಗಿ ಸಿ ಸಿ ಪಾಟೀಲ ಪಿ ಸಿ ಗಳಾದ ಬಸವರಾಜ ಗೌಡರ ಬಸಯ್ಯ ಹಿರೇಮಠ ಪ್ರಭು ಪವಾರ ಭೀಮಸೇನ ಮಾದರ ಬಲಿ ಚಕ್ರವರ್ತಿ ಸಂಗಮ ಇತರರು ಉಪಸ್ಥಿತರಿದ್ದರು

";