This is the title of the web page
This is the title of the web page

Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

State News

ಕಲಬುರಗಿಯಲ್ಲಿ 2ಎ ಮೀಸಲಿಗಾಗಿ ಮಾ.3ಕ್ಕೆ ಬೃಹತ್‌ ಸಮಾವೇಶ

ಕಲಬುರಗಿಯಲ್ಲಿ 2ಎ ಮೀಸಲಿಗಾಗಿ ಮಾ.3ಕ್ಕೆ ಬೃಹತ್‌ ಸಮಾವೇಶ

ಕಲಬುರಗಿ: ಸಮಾಜಕ್ಕೆ ಸರಕಾರ 2ಎ ಮೀಸಲಾತಿ ಹಾಗೂ ಕೇಂದ್ರ ಸರಕಾರ ಲಿಂಗಾಯತರಿಗೆ ಒಬಿಸಿ ಪಟ್ಟಿಯಲ್ಲಿಸೇರಿಸಬೇಕು ಎಂಬ ಹಕ್ಕೊತ್ತಾಯ ಮಂಡಿಸಲು ಮಾರ್ಚ್ 3 ರಂದು ಕಲಬುರಗಿಯಲ್ಲಿ ಪ್ರಥಮ ಬೃಹತ್‌ ಸಮಾವೇಶ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಕೂಡಲಸಂಗಮ ಮಹಾಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, ಮಾರ್ಚ್ 3 ಕ್ಕೆ ಕಲಬುರಗಿ-ಯಾದಗಿರಿ ಹಾಗೂ ಬೀದರ್‌ ಜಿಲ್ಲೆಗಳ ಸಮಾವೇಶವನ್ನು ಕಲಬುರಗಿಯಲ್ಲಿ ನಡೆಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಫೆಬ್ರವರಿ 15ರಿಂದ ಈ ಮೂರು ಜಿಲ್ಲೆಗಳ ತಾಲೂಕು, ಜಿಲ್ಲಾಪಂಚಾಯಿತಿ ಕ್ಷೇತ್ರಗಳಲ್ಲಿಹೋಗಿ ಸಮುದಾಯ ಮುಖಂಡರ ಸಭೆಗಳಿಂದ ಸಂಘಟನೆ ಮಾಡಿ, ಸಮಾವೇಶಕ್ಕೆ ಜನರನ್ನು ಆಹ್ವಾನಿಸಲಿದ್ದಾರೆ.

15 ದಿನ ಮೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ 2ಎ ಮೀಸಲು ಹಾಗೂ ಒಬಿಸಿ ಪಟ್ಟಿಗೆ ಸೇರಿಸುವುದರಿಂದ ಸಿಗುವ ಸೌಲಭ್ಯಗಳ ಬಗ್ಗೆ ಜನರಿಗೆ ಮನವರಿಕೆಯನ್ನು ಸ್ವಾಮೀಜಿ ಮಾಡಲಿದ್ದಾರೆ.ಪೂರ್ವಭಾವಿ ಸಭೆಯಲ್ಲಿ ಲಿಂಗಾಯತ ಮುಖಂಡರ ಅಭಿಪ್ರಾಯಗಳನ್ನು ಆಲಿಸಿದ ನಂತರ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಲೋಕಸಭೆ ಚುನಾವಣೆಯ ಒಳಗಡೆ 2 ಎ ಮೀಸಲಾತಿ ಹಾಗೂ ಒಬಿಸಿ ಪಟ್ಟಿಗೆ ಸೇರ್ಪಡೆಗೆ ಹಕ್ಕೊತ್ತಾಯ ಮಂಡಿಸುವ ಸಲುವಾಗಿ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ

.

Nimma Suddi
";