ಬಾಗಲಕೊಟೆ
ತಳಮಟ್ಟದಿಂದ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಸಂಘಟಕ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ದ್ಯೇಯದಂತೆ ನಡೆದುಕೊಂಡ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕದ ಮಾಸ್ ಲೀಡರ್ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ಶಿವಾನಂದ ಜೀನ್‌ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿ.ಎಸ್.ಯಡಿಯೂರಪ್ಪನವರ ಜನ್ಮದಿನದ ನಿಮಿತ್ತ ಫಲಾನುಭವಿಗಳ ಸನ್ಮಾನ ಸಮಾರಂಭದಲ್ಲಿ ಫಲಾನುಭವಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು. ಬಿಎಸ್‌ವೈ ಏಕಾಂಗಿಯಾಗಿ ರಾಜ್ಯ ಸುತ್ತಾಡಿ ಪ್ರವಾಹ ಸಂತ್ರಸ್ತ ಕಣ್ಣೀರು ಒರೆಸಿದ ಮಹಾನ್ ನಾಯಕ. ಬಡವರ ಭಾಗ್ಯವಿದಾತರಾಗಿ ಕೆಲಸ ಮಾಡಿದವರು ಎಂದರು.
ಸಿಎಂ ಇದ್ದಾಗ ಜಾರಿಗೊಳಿಸಿದ ಭಾಗ್ಯಲಕ್ಷಿö್ಮÃ ಯೋಜನೆ ಲಕ್ಷಾಂತರ ಹೆಣ್ಣುಮಕ್ಕಳ ಬದುಕಿಗೆ ಬೆಳಕಾಗಿದೆ. ಜತೆಗೆ ಕ್ಷೀರಭಾಗ್ಯ, ಸಂಧ್ಯಾಸುರಕ್ಷಾ ಹಾಗೂ ರೈತರಿಗಾಗಿ ಮೊದಲ ಬಾರಿ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ ಜಾರಿಗೊಳಿಸಿದರು. ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸುವ ಮೂಲಕ ರೈತ ಮಗನಾಗಿ ನಾಡಿಗೆ ಹೆಸರಾದವರು ಎಂದು ಹೇಳಿದರು.
ಬಸವರಾಜ ಯಂಕAಚಿ, ಗುಂಡುರಾವ್ ಶಿಂಧೆ, ರಾಜು ಶಿಂತ್ರೆ, ಶಶಿಕುಮಾರ ಗುತ್ತೆನ್ನವರ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಸತ್ಯನಾರಾಯಣ ಹೇಮಾದ್ರಿ, ಚಂದ್ರು ರಾಮವಾಡಗಿ, ಯಲ್ಲಪ್ಪ ಎಳಮ್ಮಿ, ಶಂಕರ ಕದಂ, ಹೊನ್ನಪ್ಪ ಅಂಬಿಗೇರ, ಕೃಷ್ಣಾ ಕಾಖಂಡಕಿ, ಬಸವರಾಜ ನೀಲನಾಯಕ, ಬಸವರಾಜ ಬಡಿಗೇರ, ರಮೇಶ ಉಪ್ಪಾರ ಹಾಗೂ ಪದಾಕಾರಿಗಳು ಇದ್ದರು.
ಫಲಾನುಭವಿಗಳ ಸನ್ಮಾನ
ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಮಲ್ಲಪ್ಪ ಡಾವಣಗೇರಿ, ದೂಳಪ್ಪ ಬಾಂಡ್, ಭಾಗ್ಯಲಕ್ಷಿö್ಮÃ ಬಾಂಡ್ ಯೋಜನೆಯಲ್ಲಿ ಕಾವ್ಯ ಎಳಮ್ಮಿ, ಭವಾನಿ ಬಾಗಣಿ, ಸಕರಾರಿ ಪ್ರೌಢಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಯೋಜನೆಯಲ್ಲಿ ಭಾಗ್ಯ ಗಟ್ಟಿಗನೂರ, ವಿಜಯಕುಮಾರ ಅಂಬಿಗೇರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.