ಜಿಲ್ಲೆಯಲ್ಲಿ ಯಶಸ್ಸು ಕಂಡ ಯೋಗಾಥಾನ್ ಕಾರ್ಯಕ್ರಮ
ನಿಮ್ಮ ಸುದ್ದಿ ಬಾಗಲಕೋಟೆ
ಗಿನ್ನೀಸ್ ಬುಕ್ ಆಪ್ ರಿಕಾಡ್ರ್ಸ ದಾಖಲೆಗಾಗಿ ರಾಜ್ಯದ 31 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ರವಿವಾರ ಹಮ್ಮಿಕೊಂಡ ಯೋಗಾಥಾನ್ ಕಾರ್ಯಕ್ರಮ ಬಾಗಲಕೋಟೆ ಜಿಲ್ಲೆಯಲ್ಲಿ ಯಶಸ್ಸು ಕಂಡಿತು.
ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ಮೈದಾನದಲ್ಲಿ ಜರುಗಿದ ಯೋಗಾಥಾನ್ ಕಾರ್ಯಕ್ರಮದಲ್ಲಿ 15 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಾಮೂಹಿಕ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಯೋಗಾಥಾನ್‍ದಲ್ಲಿ ತಾಡಾಸನ, ಪದ್ಮ ಹಸ್ತಾಸನ, ಅರ್ಧ ಚಕ್ರಾಸನ, ತ್ರೀಕೋನಾಸನ, ಭದ್ರಾಸನ, ಅರ್ಧ ಉಸ್ತ್ರಾಸನ, ವಕ್ರಾಸನ, ಭುಜಂಗಾಸನ, ಮಕರಾಸನ, ಪವನ ಮುಕ್ತಾಸನ, ಪ್ರಾಣಾಯಾಮ ಸೇರಿದಂತೆ 41 ಮಿನಿಷಗಳ ಕಾಲ 30 ಆಸನಗಳ ಅಭ್ಯಾಸ ಮಾಡಿಸಲಾಯಿತು.
ಕಾರ್ಯಕ್ರಮದಲ್ಲಿ ಒಂದು ಮುಖ್ಯ ವೇದಿಕೆ ಹಾಗೂ 20 ಮಿನಿ ವೇದಿಕೆಗಳನ್ನು ಹಾಕಲಾಗಿತ್ತು. ಪತಂಜಲಿ ಯೋಗ ಸಂಸ್ಥೆಯಿಂದ 84 ಯೋಗ ಬೋಧಕರು ಯೋಗಾಭ್ಯಾಸ ಮಾಡಿಸಿದರು. ಎನ್‍ಸಿಸಿ ಕೆಡೆಟ್ಸ್‍ಗಳನ್ನು ಸ್ಟೀವಡ್ರ್ಸ ಕರ್ತವ್ಯಕ್ಕಾಗಿ ನೇಮಿಸಿಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಿಮಿಸಿರುವ ಯೋಗಪಟುಗಳಿಗೆ 15 ಬ್ಯಾಕ್‍ಗಳನ್ನು ಮಾಡಿ ಕ್ಯೂಆರ್ ಕೋಡ್ ಸ್ಕ್ಯಾನ್‍ಗೆ ವ್ಯವಸ್ಥೆ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು. ಯೋಗಾಥಾನ್‍ದಲ್ಲಿ ನಗರದ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ವೈದ್ಯಕೀಯ, ನರ್ಸಿಂಗ್, ಫಾರ್ಮಸಿ ವಿದ್ಯಾರ್ಥಿಗಳ ಜೊತೆಗೆ ಸಾರ್ವಜನಿಕರು ಸಹ ಭಾಗವಹಿಸಿದ್ದರು.
ಮೈದಾನದಲ್ಲಿ ಹೊದಿಕೆ, ಬ್ಯಾರಿಕೇಡ್, ಮಾರ್ಕಿಂಗ್, ಧ್ವನಿ ವರ್ಧಕ ಅಳವಡಿಸುವದರ ಜೊತೆಗೆ ಸಿಸಿಟಿವಿ ಸಹ ಅಳವಡಿಸಲಾಗಿತ್ತು. ತಾತ್ಕಾಲಿಕ ಶೌಚಾಲಯ ವ್ಯವಸ್ಥೆ, ಭಾಗವಹಿಸಿದವರಿಗೆ ಅಲ್ಪೋಪಹಾರದ ವ್ಯವಸ್ಥೆ ಸಹ ಕಲ್ಪಿಸಲಾಗಿತ್ತು. ಬವಿವ ಸಂಘದ ಎರಡು ಮೈದಾನದಲ್ಲಿ ಯೋಗಾಥಾನ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಪ್ರಾರಂಭದಲ್ಲಿ ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಕೊನೆಗೆ ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.
ಸಾಮೂಹಿಕ ಯೋಗಾಭ್ಯಾಸದಲ್ಲಿ ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ, ಜಿ.ಪಂ ಸಿಇಓ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಆಯುಷ ಅಧಿಕಾರಿ ಅಕ್ಕಮಹಾದೇವಿ ಗಾಣಿಗೇರ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ, ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಉತ್ತಮ ಪ್ರದರ್ಶನ : ಶಾಲಾ-ಕಾಲೇಜುಗಳಿಗೆ ಪ್ರಶಸ್ತಿ
ಯೋಗಾಥಾನ್ ಕಾರ್ಯಕ್ರಮದಲ್ಲಿ ಉತ್ತಮವಾಗಿ ಯೋಗ ಪ್ರದರ್ಶಿಸಿದ ಬಸವೇಶ್ವರ ವಿದ್ಯಾವರ್ಧಕ ಸಂಘದ ಇಂಜಿನೀಯರಿಂಗ್ ಕಾಲೇಜ, ಪದವಿ ಪೂರ್ವ ಕಾಲೇಜ, ನ್ಯೂ ಇಂಗ್ಲೀಷ ಮಿಡಿಯಮ್ ಶಾಲೆ ಹಾಗೂ ಉನ್ನತಿಕರಿಸಿದ ಸರಕಾರಿ ಪ್ರೌಢಶಾಲೆ (ಬಿಟಿಡಿಎ)ಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.