This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಉತ್ತಮ ಸಮಾಜ ನಿರ್ಮಾಣಕ್ಕೆ ಮಾಧ್ಯಮ ಅಗತ್ಯ

ಪತ್ರಿಕೆಗಳ ಮೇಲೆ ಕೋವಿಡ್ ಪರಿಣಾಮ:ವಿಚಾರ ಸಂಕಿರಣ 

ನಿಮ್ಮ ಸುದ್ದಿ ಬಾಗಲಕೋಟೆ

ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಮಾಧ್ಯಮಗಳ ಪಾತ್ರ ಬಹುಮುಖ್ಯವಾಗಿದೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು.

ಜಿಲ್ಲಾ ಪಂಚಾಯತಿಯ ನೂತನ ಸಭಾಭವನದಲ್ಲಿಂದು ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಕೋವಿಡ-೧೯ ಜಿಲ್ಲಾ ಮಟ್ಟದ ಪತ್ರಿಕೆಗಳ ಮೇಲೆ ಬೀರಿದ ಪರಿಣಾಮಗಳ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ-೧೯ ಇಡೀ ಜಗತ್ತನ್ನೇ ಅಲ್ಲೊಲ ಕಲ್ಲೊಲವಾಗಿಸಿದ್ದು, ಇದು ಪತ್ರಿಕೋದ್ಯಮದ ಮೇಲೆ ಮತ್ತು ಪತ್ರಿಕೆಯ ಜೀವಾಳವಾಗಿರುವ ಜಾಹೀರಾತಿಗೆ ಏಟು ಬಿದ್ದಿದೆ. ಹೀಗೆ ಅನೇಕ ಸಮಸ್ಯೆಗಳನ್ನು ಪತ್ರಕರ್ತರು ಅನುಭವಿಸುತ್ತಿದೆ. ಮುಂದಿನ ದಿನಮಾನಗಳಲ್ಲಿ ಪತ್ರಕರ್ತರ ಸಮಸ್ಯೆ ನಿವಾರಣೆ ಆಗಲಿ ಎಂದು ಹಾರೈಸಿದರು. ಮಾಧ್ಯಮ ಆರ್ಥಿಕ ಮತ್ತು ಸಾಮಾಜಿಕ ಜೀವನಕ್ಕೆ ಅತೀ ಮುಖ್ಯವಾಗಿದೆ ಎಂದು ತಿಳಿಸಿದರು.

 

ಪತ್ರಕರ್ತರ ಪೆನ್ನಿಗೆ ಅಗಾಧ ಶಕ್ತಿ ಇದ್ದು, ಪತ್ರಿಕೋದ್ಯಮ ಪತ್ರಕರ್ತರ ಏಕೈಕ ಗುರಿ ಎಂದರೆ ಸೇವೆ. ಗಾಂಧಿಜೀಯವರ ಮಾತಿನಂತೆ ಮಾಧ್ಯಮ ಅತಿ ಪ್ರಮುಖವಾದದ್ದು, ಪತ್ರಕರ್ತನಾದವರು ಸತ್ಯ ಮತ್ತು ನ್ಯಾಯದ ಪರವಾಗಿ ಹೋರಾಡುವವನೆ ನಿಜವಾದ ಪತ್ರಕರ್ತ. ಪ್ರಸ್ತುತ ದಿನಗಳಲ್ಲಿ ಪತ್ರಕರ್ತರಲ್ಲಿ ವೃತ್ತಿಪರ ಚಟುವಟಿಕೆಗಳು ಹೆಚ್ಚಾಗಬೇಕು. ಇದಕ್ಕೆ ತರಬೇತಿ ಶಿಬಿರಗಳ ಅವಶ್ಯಕತೆ ಇದೆ. ಇಂತಹ ಕಾರ್ಯಾಗಾರ, ವಿಚಾರ ಸಂಕಿರಣಗಳು ಪತ್ರಕರ್ತರ ನೈಪುಣ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ಎಲ್ಲರ ಧ್ವನಿಯಾಗುವ ಪತ್ರಕರ್ತರ ಧ್ವನಿಯನ್ನು ಕೊರೊನಾ ನುಂಗಿಹಾಕಿದೆ. ನಿಮ್ಮ ಧ್ವನಿಯಾಗಿ ಸದನದಲ್ಲಿ ಚರ್ಚಿಸಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುವ ಭರವಸೆ ನೀಡಿದರು. ಕೋವಿಡ್ ಬಂದ ನಂತರ ಸರ್ಕಾರಿ ನೌಕರರನ್ನು ಹೊರತು ಪಡಿಸಿ ವೃತ್ತಿಪರ ನೌಕರರಿಗೆ ಕಾರ್ಯವು ಇಲ್ಲ, ಸಂಬಳವು ಇಲ್ಲದಂತಾಗಿದೆ. ಎಲ್ಲ ಪತ್ರಕರ್ತರಿಗೂ ಸಂಕಷ್ಟದ ಪರಿಸ್ಥಿತಿ ಒದಗಿ ಬಂದಿದ್ದು, ಜಿಲ್ಲಾ ಮಟ್ಟದ ಪತ್ರಕರ್ತರ ಸ್ಥತಿ ಚಿಂತಾಜನಕವಾಗಿದೆ ಎಂದರು.

ಕೋವಿಡ್ ಹಿನ್ನಲೆಯಲ್ಲಿ ಮಾಧ್ಯಮಗಳು ಸಂಕಷ್ಟಕ್ಕೆ ಒಳಗಾಗಿದ್ದು, ಅವರ ನೆರವಿಗೆ ಸರಕಾರ ಮುಂದಾಗಬೇಕು ಎಂದರು. ಪರ್ತಕರ್ತರ ಸಮಸ್ಯೆಗಳನ್ನು ಆಲಿಸಿದ ಅವರು ತಮ್ಮ ಒಂದು ತಿಂಗಳ ಸಂಪೂರ್ಣ ವೇತನವನ್ನು ಜಿಲ್ಲಾ ಪತ್ರಕರ್ತರ ಸಂಘಕ್ಕೆ ನೀಡುವುದಾಗಿ ತಿಳಿಸಿದರು.

ಬುಡಾದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ ಮಾತನಾಡಿ ಕೊರೊನಾ ನಿಯಂತ್ರಣದಲ್ಲಿ ಪತ್ರಕರ್ತರರು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಜನರಿಗೆ ಕೊರೊನಾ ಜಾಗೃತಿ ಬಗ್ಗೆ ಮನವಿಕೆ ಮಾಡುವಲ್ಲಿ ಶ್ರಮಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲವೊಂದು ಪತ್ರಕರ್ತರು ಪ್ರಾಣ ಬಿಟ್ಟ ಉದಾಹರಣೆಗಳನ್ನು ನಾವು ಕಂಡಿದ್ದು, ಅವರ ವಿಕಾಸಕ್ಕೆ ಇಂತಹ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಮಡಿಕೇರಿಯ ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕರಾದ ಅನಂತಶಯನ ಉಪನ್ಯಾಸ ನೀಡಿ ಪತ್ರಕರ್ತರು ಹೃದಯವಂತಿಕೆಯಿಂದ ಕಾರ್ಯ ನಿರ್ವಹಿಸಬೇಕು. ನಿಮ್ಮ ವರದಿಯಲ್ಲಿ ಧನಾತ್ಮಕ ಚಿಂತನೆಗಳಿರಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ಗಣ್ಯರನ್ನು ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ಜಿ.ಪಂ ಉಪಾಧ್ಯಕ್ಷರಾದ ಮುತ್ತಪ್ಪ ಕೋಮಾರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ತಾಲೂಕ ಪಂಚಾಯತ ಅಧ್ಯಕ್ಷರಾದ ಚನ್ನನಗೌಡ ಪರನಗೌಡರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಭಾಷ್ ಹೊದ್ಲೂರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಈಶ್ವರ ಶೆಟ್ಟರ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎನ್.ಶಾಲಗಾರ ಮತ್ತಿತ್ತರ ಗಣ್ಯರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ರಾಜ್ಯ ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿ ಸಿ.ರೂಪಾ ಸ್ವಾಗತಿಸಿದರು. ಪತ್ರಕರ್ತ ಮುತ್ತು ನಾಯ್ಕರ ನಿರೂಪಿಸಿ ವಂದಿಸಿದರು.

";