This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local NewsPolitics NewsState News

ಗ್ಯಾರಂಟಿ ಯೋಜನೆಗಳ ಮಾಹಿತಿ ಪ್ರದರ್ಶನಕ್ಕೆ ಮೇಟಿ ಚಾಲನೆ

ಗ್ಯಾರಂಟಿ ಯೋಜನೆಗಳ ಮಾಹಿತಿ ಪ್ರದರ್ಶನಕ್ಕೆ ಮೇಟಿ ಚಾಲನೆ

ಬಾಗಲಕೋಟೆ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನವನಗರದ ಬಸ್ ನಿಲ್ದಾಣದಲ್ಲಿ ಏರ್ಪಡಿಸಿರುವ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮಾಹಿತಿ ಒಳಗೊಂಡ ವಸ್ತು ಪ್ರದರ್ಶನಕ್ಕೆ ಶಾಸಕರು ಆಗಿರುವ ಬಿಟಿಡಿಎ ಅಧ್ಯಕ್ಷ ಹೆಚ್.ವಾಯ್.ಮೇಟಿ ಮಂಗಳವಾರ ಚಾಲನೆ ನೀಡಿದರು.

ಮಾರ್ಚ 12 ರಿಂದ 14 ರವರೆಗೆ ಪ್ರದರ್ಶನಗೊಳ್ಳುವ ವಸ್ತು ಪ್ರದರ್ಶನ ಮಳಿಗೆಗೆ ಚಾಲನೆ ನೀಡಿ ನಂತರ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಫಲಕಗಳನ್ನು ವೀಕ್ಷಿಸಿದರು.

ಮಾಹಿತಿ ಪ್ರದರ್ಶನದಲ್ಲಿ ಕೃಷಿಯನ್ನು ಉತ್ತೇಜಿಸುವ ಕರ್ನಾಟಕ ರೈತ ಸಮೃದ್ದಿ ಯೋಜನೆ, ಸರಕಾರದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಂಜೂರಾದ ಜಮೀನುಗಳಿಗೆ ಅನಧಿಕೃತ ಪರಭಾರೆಯಿಂದ ರಕ್ಷಣೆ ನೀಡುವ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ, ಮುಖ್ಯಮಂತ್ರಿಗಳ ಐತಿಹಾಸಿಕ ಜನಸ್ಪಂದನ ಕಾರ್ಯಕ್ರಮ, ಹಸಿವು ಮುಕ್ತ ಕರ್ನಾಟಕ, ಸಬಲೀಕರಣದತ್ತ ಮಹಿಳೆಯರ ಪಯಣ.
ಮನೆ ಮನ ಬೆಳೆಗಿದ ಭಾಗ್ಯದ ಬೆಳಕು, ಸ್ತ್ರೀ ಸ್ವಾವಲಂಬನೆಯತ್ತ ದಿಟ್ಟಹೆಜ್ಜೆ,

ಯುವಕರ ಶ್ರೇಯೋಭಿವೃದ್ದಿ, ಸ್ಥಳೀಯ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರದ ಜನಸ್ಪಂದನ ಕಾರ್ಯಕ್ರಮ, ಕ್ಷೀರಭಾಗ್ಯಕ್ಕೆ ಹತ್ತರ ಸಂಭ್ರಮ, ಆಯವ್ಯಯ ಮಂಡನೆಯಲ್ಲಿ ಚರಿತ್ರಾರ್ಹ ದಾಖಲೆ ನಿರ್ಮಿಸಿದ ಮುಖ್ಯಮಂತ್ರಿಗಳ ಸೇರಿದಂತೆ ಅನೇಕ ಜನಪರ ಯೋಜನೆಗಳ ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ.

ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಕಸ್ತೂರಿ ಪಾಟೀಲ, ಬಾಗಲಕೋಟೆ ಘಟಕ ವ್ಯವಸ್ಥಾಪಕ ಅಶೋಕ ಕೋರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

*ನೀರನ್ನು ಮಿತವಾಗಿ ಬಳಸಲು ಬಿಟಿಡಿಎ ಸಲಹೆ*

ಬಾಗಲಕೋಟೆ

ಬೇಸಿಗೆ ಸಮಯದಲ್ಲಿ ನೀರಿನ ಅಭಾವ ಉಂಟಾಗುವ ಸಂಭವವಿದ್ದು, ನೀರನ್ನು ಮಿತವಾಗಿ ಬಳಸುವಂತೆ ಹಾಗೂ ಕುಡಿಯುವ ನೀರನ್ನು ವಿತರಣಾ ನಲ್ಲಿಗಳಿಗೆ ನೇರವಾಗಿ ಮೋಟರ್ ಪಂಪಗಳನ್ನು ಅಳವಡಿಸಿ, ನೀರನ್ನು ಸೆಳೆಯುತ್ತಿರುವುದು ಹಾಗೂ ನೀರನ್ನು ಉಪಯೋಗಿಸಿದ ನಂತರ ನಲ್ಲಿ ಬಂದ್ ಮಾಡದೇ ಶುದ್ದ ಕುಡಿಯುವ ಬದಿ ಚರಂಡಿಗೆ, ಶೌಚಾಲಯಕ್ಕೆ ಬಿಟ್ಟು ಪೋಲಿ ಮಾಡುತ್ತಿರುವುದು, ರಸ್ತೆಗೆ ಸಿಂಪಡಿಸುತ್ತಿರುವುದು ಕಂಡುಬಂದಿರುತ್ತದೆ. ಇದರಿಂದ ನಿವೇಶನದಾರರಿಗೆ ನೀರು ಸಮರ್ಪಕವಾಗಿ ತಲುಪುತ್ತಿಲ್ಲ.

ನೇರವಾಗಿ ಮೋಟರ್ ಪಂಪನ್ನು ವಿತರಣಾ ನಲ್ಲಿಗಳಿಗೆ ಅಳವಡಿಸದಿರಲು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ನೇರವಾಗಿ ಮೋಟರ್ ಪಂಪನ್ನು ನಲ್ಲಿಗಳಿಗೆ ಅಳವಡಿಸಿರುವುದು ಕಂಡಬಂದಲ್ಲಿ ಮೋಟರ್ ಪಂಪನ್ನು ಜಪ್ತಿ ಮಾಡಿ ನೀರಿನ ಸಂಪರ್ಕ ಬಂದ್ ಮಾಡಲು ಕ್ರಮಕೈಗೊಳ್ಳಲಾಗುವುದೆಂದು ಬಿಟಿಡಿಎ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Nimma Suddi
";