ಬೆಂಗಳೂರು: ಅರೋಪಿಯ ವಕೀಲ ಸಮಯಾವಕಾಶ ಕೇಳಿದ್ದು, ಕಾನೂನು ವ್ಯಾಪ್ತಿಯಲ್ಲಿ ಸಮಯ ನೀಡಲು ಬರೋದಿಲ್ಲ ಅಂತ ತಾವು ನಿನ್ನೆ ಹೇಳಿದ್ದೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.
ಪ್ರಜ್ವಲ್ ರೇವಣ್ಣ ಲೈಂಗಿಕ ಟೇಪುಗಳ ಪ್ರಕರಣಕ್ಕೆಸಂಬಂಧಿಸಿದಂತೆ ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ನಿನ್ನೆ ಹೇಳಿದ್ದನ್ನೇ ಪುನರಾವರ್ತಿಸಿದ್ದು, ಪ್ರಜ್ವಲ್ ಜರ್ಮನಿಯಲ್ಲಿರೋದು ಎಸ್ಐಟಿ ಲುಕೌಟ್ ನೋಟೀಸನ್ನು ಜಾರಿ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಜ್ವಲ್ ರೇವಣ್ಣನ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದು ಮಾಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಬರೆದಿರುವ ಪತ್ರ ಬರೆದಿರುವ ಸಂಗತಿಯನ್ನು ಸಹ ಪರಮೇಶ್ವರ್ ಹೇಳಿದರು.
ಈ ಪ್ರಕರಣದಲ್ಲಿ ಹೆಚ್ ಡಿ ರೇವಣ್ಣ ಅರೋಪಿ ನಂಬರ್ ವನ್ ಆಗಿದ್ದರೂ ಅವರನ್ನು ಯಾಕೆ ಬಂಧಿಸಿಲ್ಲ ಎಂದು ಕೇಳಿದ ಪ್ರಶ್ನೆಗೆ ಪರಮೇಶ್ವರ್, ಅವರಿಗೂ 41/ಎ ಅಡಿ ನೋಟೀಸ್ ಜಾರಿಮಾಡಲಾಗಿದೆ, ಅವರು ಮೊದಲ ನೋಟೀಸ್ ಗೆ ಪ್ರತಿಕ್ರಿಯೆ ನೀಡದ ಕಾರಣ ಎರಡನೇ ನೋಟೀಸ್ ಜಾರಿ ಮಾಡಲಾಗಿದ್ದು ಇದಕ್ಕೂ ಪ್ರತಿಕ್ರಿಯಿಸಲು 24 ಗಂಟೆಗಳ ಕಾಲಾವಕಾಶವಿರುತ್ತದೆ ಎಂದರು.
ಅವರು ಹಾಜರಾಗದ ಸಂದರ್ಭದಲ್ಲಿ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪರಮೇಶ್ವರ್ ಹೇಳಿದರು. ಅವರು ರೇವಣ್ಣ ವಿರುದ್ಧ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಅಂತ ಹೇಳುತ್ತಾರೆಯೇ ಹೊರತು ಅರೆಸ್ಟ್ ಮಾಡಲಾಗುವುದು ಅನ್ನಲ್ಲ ಎಂದು ಸೂಚಿಸಿದರು.