ಶಿವಮೊಗ್ಗ: ನಾನು ಲೋಕಸಭಾ ಚುನಾವಣೆ ಪ್ರಚಾರಕ್ಕೆ ಮತ್ತೆ ಬರುತ್ತಿದ್ದು, ಗ್ಯಾರಂಟಿ ಇಟ್ಟುಕೊಂಡು ಮತ ಕೇಳುತ್ತೆ. ಕಾಂಗ್ರೆಸ್ ಪಕ್ಷಕ್ಕಾಗಿ ಕತ್ತೆ ರೀತಿ ದುಡಿಯುತ್ತಿದ್ದೇನೆ ಎಂದು ಶಿಕ್ಷಣ ಇಲಾಖೆಯ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತವರು ಕ್ಷೇತ್ರ ಶಿಕಾರಿಪುರದಲ್ಲಿ ಕಾಂಗ್ರೆಸ್ ಗ್ಯಾರಂಟಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷ ಅವಕಾಶ ನೀಡಿದರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಈ ಬಗ್ಗೆ ಅಧಿಕೃತವಾಗಿ ನನಗೆ ಏನೂ ಹೇಳಿಲ್ಲ ಎಂದು ಹೇಳಿದರು.
ವಿರೋಧ ಪಕ್ಷದವರಿಗೆ ಜನರು ಉತ್ತರ ಕೊಡುತ್ತಿದ್ದು, ಇವತ್ತು ಶಿಕಾರಿಪುರ ಸೇರಿ ರಾಜ್ಯದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಟೀಕಾ ಟಿಪ್ಪಣಿಗಳಿಗೆ ಈ ಸಮಾವೇಶ ಉತ್ತರ ಆಗುತ್ತೆ ಎಂದಿದ್ದಾರೆ.ಧೈರ್ಯವಾಗಿ ಜನರ ಬಳಿ ಬಂದು ಆಶೀರ್ವಾದ ಕೇಳುತ್ತೆವೆ. ಹೆಚ್ಚಿನ ಅನುದಾನ ಜಿಲ್ಲೆಗೆ ತರುತ್ತೇನೆ ಎಂದರು.