ತುಮಕೂರು : ನಾನು ಅಂದು ಒಳ ಮೀಸಲಾತಿ ಗೋಜಿಗೆ ಹೋಗಬಾರದಿದ್ದು, ಈ ಬಗ್ಗೆ ನನಗೆ ಹಲವು ಬಾರಿ ಅಂದುಕೊಂಡಿದ್ದೇನೆ ಎಂದು ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ ಪಶ್ಚಾತಾಪ ವ್ಯಕ್ತಪಡಿಸಿದ್ದಾರೆ.
ಪಕ್ಷದೊಳಗಿನ ಕೆಲ ದೌರ್ಬಲ್ಯಗಳ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದು, ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಜಿಲ್ಲಾ ಮಟ್ಟದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾಧುಸ್ವಾಮಿ ಮಾತನಾಡಿದರು.
ಈ ಒಳ ಮೀಸಲಾತಿ ವಿಷಯ ನನಗೆ ಬೇಡ. ಏಕೆ ಸುಮ್ಮನೆ ನನ್ನನ್ನು ಎಳೆದು ತರ್ತೀರಾ..? ಎಂದು ಕ್ಯಾಬಿನೇಟ್ ನಲ್ಲಿ ಹೇಳಿದ್ದೆ. ನಾವು ಒಳ್ಳೆಯದನ್ನೇ ಮಾಡಿದ್ದೇವೆ. ಆದರೆ ವ್ಯವಸ್ಥೆ ನಮ್ಮನ್ನು ಸಹಿಸಿಕೊಳ್ಳಲಿಲ್ಲ. ಎಲ್ಲೋ ಒಂದು ಕಡೆ ನಾವು ಎಡದಿದ್ದೇವೆ ಎಂದು ಮಾಧುಸ್ವಾಮಿ ಅಭಿಪ್ರಾಯಪಟ್ಟರು.ಸಂಘಟಿತರಾದ ಮೇಲೆ ಹೋರಾಟಕ್ಕೆ ಇಳಿತೇವೆ ಎಂದರು.
ಚರಿತ್ರೆ ನಿರ್ಮಾಣ ಮಾಡೋದು ಹೀರೋಗಳಲ್ಲ. ಪಿತ್ತೂರಿ ಮಾಡೋರು, ಮೀರ್ ಸಾದಿಕ್ ಗಳಂತಹ ಅವರು ಚರಿತ್ರೆ ನಿರ್ಮಾಣ ಮಾಡುತ್ತಾರೆ ಎಂದು ಹೇಳುವ ಮೂಲಕ ಪಕ್ಷದೊಳಗಿನ ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದರು.