ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಮಾಂಸಾಹಾರವನ್ನು ಸೇವಿಸಿ ಸುತ್ತೂರು ಮಠಕ್ಕೆ ಹೋಗಿಲ್ಲ ಎಂದು ಸಚಿವ ಎಂಬಿ ಪಾಟೀಲ್ ಹೇಳಿದರು.
ವಿಧಾನಸೌಧದಲ್ಲಿ ಶುಕ್ರವಾರ ಮಾತನಾಡಿದ ಅವರು, ಮಾಂಸಾಹಾರವನ್ನು ಸೇವಿಸಿ ಸಿದ್ದರಾಮಯ್ಯ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದಾರೆ ಎಂಬ ವಿಚಾರವಾಗಿ ತಲೆದೋರಿರುವ ವಿವಾದಕ್ಕೆ ಈ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದರು.
ಹಿಂದೂಗಳ ಹಣವನ್ನು ಹಿಂದೂಗಳಿಗೆ ಕೊಡಬೇಕೆಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿಕೆ ವಿಚಾರವಾಗಿ ಮಾತನಾಡಿ, ಇದು ಮೂರ್ಖತನದ ಪರಮಾವಧಿ. ನಮ್ಮ ದೇಶದ ಸಂವಿಧಾನ ಬೆಳ್ತಂಗಡಿ ಶಾಸಕರಿಗೆ ಗೊತ್ತಿಲ್ಲಾ ಅನಿಸುತ್ತದೆ.ಶಾಸಕರಾಗೋದಕ್ಕೆ ಅವರು ಅರ್ಹರಿಲ್ಲ ಎಂದರು.
ಇಂತಹ ಮುರ್ಖತನದ ಪ್ರಶ್ನೆಗಳಿಗೆ ಉತ್ತರ ಕೊಡದೆ ಇರುವ ಇರುವುದು ಉತ್ತಮ ಎಂದರು.ದೇಶ ವಿಭಜನೆಯ ಹೇಳಿಕೆ ಕೊಟ್ಟ ಸಂಸದ ಡಿ ಕೆ ಸುರೇಶ್ ಅವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂಬ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿ, ಈಶ್ವರಪ್ಪನವರು ಅನೇಕ ಸಲ ಏನೇನೊ ಮಾತಾನಾಡಿದ್ದಾರೆ. ಅದನ್ನೆಲ್ಲಾ ತೆಗೆದು ನೋಡಿದ್ರೆ ಬಹಳ ಅನಾಹುತಕ್ಕೆ ಹೋಗುತ್ತದೆ. ಡಿ ಕೆ ಸುರೇಶ್ ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಅನ್ನೋದನ್ನು ಗಮನಿಸಬೇಕು ಎಂದು ತಿಳಿಸಿದರು.