This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local NewsPolitics NewsState News

ಸಚಿವ ಎಂ.ಬಿ.ಪಾಟೀಲ ದೇವಸ್ಥಾನಕ್ಕೆ ಭೇಟಿ

ಸಚಿವ ಎಂ.ಬಿ.ಪಾಟೀಲ ದೇವಸ್ಥಾನಕ್ಕೆ ಭೇಟಿ

ವಿಜಯಪುರ

ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಇಂದು ಸೋಮವಾರ ಬಬಲೇಶ್ವರ ತಾಲೂಕಿನ ಸಾರವಾಡ ದ್ಯಾಮವ್ವದೇವಿ ಮತ್ತು ವಿಜಯಪುರ ನಗರದ ಬುರಣಾಪುರ ರಸ್ತೆಯಲ್ಲಿರುವ ಘತ್ತರಗಿ ಭಾಗಮ್ಮ ದೇವಿಯ ಜಾತ್ರೆಯಲ್ಲಿ ಪಾಲ್ಗೋಂಡು ದೇವಿಯ ಆಶೀರ್ವಾದ ಪಡೆದರು.

ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ನಡೆಯುತ್ತಿರುವ ದ್ಯಾಮವ್ವದೇವಿ ದೇವಸ್ಥಾನದ ಉದ್ಘಾಟನೆ ಮತ್ತು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೋಂಡ ಸಚಿವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಾರವಾಡ ಗ್ರಾಮಸ್ಥರು ಸಚಿವರನ್ನು ಸನ್ಮಾನಿಸಿ ಗೌರವಿಸಿದರು.

ಈ ವೇಳೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಎಂ. ಬಿ. ಪಾಟೀಲ ಅವರು, ದೇಶದಲ್ಲಿ ಈಗ ಐದಾರು ರಾಜ್ಯಗಳು ಭೀಕರ ಬರದಿಂದ ತತ್ತರಿಸಿವೆ. ನಮ್ಮ ರಾಜ್ಯದಲ್ಲಿಯೂ ಬರಗಾಲ ಉಂಟಾಗಿದ್ದು, ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಲಾಗಿದೆ. ರಾಜ್ಯ ಸರಕಾರ ಬರವನ್ನು ಸಮರ್ಥವಾಗಿ ಎದುರಿಸುತ್ತಿದ್ದು, ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುತ್ತಿದೆ. ಇಲ್ಲಿನ ದ್ಯಾಮವ್ವದೇವಿ ಎಲ್ಲರಿಗೂ ಆಯುಷ್ಯ, ಆರೋಗ್ಯ ನೀಡಲಿ. ನಾಡಿನಲ್ಲಿ ಉತ್ತಮ ಮಳೆ ಬಂದು, ಬೆಳೆ ಸಮೃದ್ಧವಾಗಿರುವಂತೆ ಆಶೀರ್ವಾದ ಮಾಡಿ ನಮ್ಮೆಲ್ಲರನ್ನು ಕರುಣಿಸಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಾರವಾಡ ಗ್ರಾಮದ ಹಿರಿಯರಾದ ಕಲ್ಲಯ್ಯ ಲೋಕಯ್ಯ ಹಿರೇಮಠ, ಸದಾಶಿವ ಚಿಕರಡ್ಡಿ, ಮಲ್ಲಣ್ಣ ಕೋಟಿ, ದುಂಡಪ್ಪ ಕೋಟಿ, ಶಿವಪ್ಪ ಕೋಟಿ, ಚಂದ್ರಕಾಂತ ವಾಲಿ, ಶಿವಪ್ಪ ಬಡಿಗೇರ, ದುಂಡಪ್ಪ ಕೋಟಿ, ಪ್ರಭು ಕೋಟಿ, ಸಿದ್ರಾಮಪ್ಪ ಬಿದರಿ, ರಾಜಶೇಖರ ಇನಾಮದಾರ, ರುದ್ರಗೌಡ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಸಚಿವರು ವಿಜಯಪುರ ನಗರದ ಹೊರವಲಯದ ಬುರಣಾಪುರ ರಸ್ತೆಯಲ್ಲಿ ಬಿ. ಎಸ್. ಬಿರಾದಾರ ಅವರ ಸ್ಟೋನ್ ಕ್ರಷರ್ ನಲ್ಲಿ ನಡೆಯುತ್ತಿರುವ ಶ್ರೀ ಘತ್ತರಗಿ ಭಾಗ್ಯವಂತಿದೇವಿಯ 15ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೋಂಡರು. ದೇವಿಯ ದರ್ಶನ ಪಡೆದರು. ಅಲ್ಲದೇ, ಅಲ್ಲಿಯೇ ಉಪಸ್ಥಿತರಿದ್ದ ಜಮಖಂಡಿ ತಾಲೂಕಿನ ಆಲಗೂರಿನ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಡಾ. ಮಹಾದೇವ ಶಿವಾಚಾರ್ಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಸಚಿವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಮುಖಂಡರಾದ ಬಿ. ಎಸ್. ಬಿರಾದಾರ, ಸಿದರಾಯ ಆಡಿನ, ಎಸ್. ಸಿ. ಚಿಕರಡ್ಡಿ, ಎಂ. ಆರ್. ಪಾಟೀಲ ಬಳ್ಳೊಳ್ಳಿ, ನಂದೆಗೋಳ ಮುಂತಾದವರು ಉಪಸ್ಥಿತರಿದ್ದರು.

 

*1.ಸಾರವಾಡ ದ್ಯಾಮವ್ವದೇವಿ ದೇವಸ್ಥಾನಕ್ಕೆ ಸಚಿವ ಎಂ. ಬಿ. ಪಾಟೀಲ ಭೇಟಿ:* ಸಾರವಾಡ ಗ್ರಾಮದಲ್ಲಿ ನಡೆಯುತ್ತಿರುವ ದ್ಯಾಮವ್ವದೇವಿ ದೇವಸ್ಥಾನ ಉದ್ಘಾಟನೆ ಮತ್ತು ಜಾತ್ರಾ ಮಹೋತ್ಸವದಲ್ಲಿ ಸಚಿವ ಎಂ. ಬಿ. ಪಾಟೀಲ ಪಾಲ್ಗೋಂಡು ದೇವಿಯ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮಾಧುರಾಯಗೌಡ ಬಿರಾದಾರ, ರುದ್ರಗೌಡ ಬಿರಾದಾರ, ಪ್ರಕಾಶ ಕೋಟಿ, ಶಿವಪ್ಪ ಬಡಿಗೇರ ಉಪಸ್ಥಿತರಿದ್ದರು.

*2. ಸಾರವಾಡ ದ್ಯಾಮವ್ವದೇವಿ ದೇವಸ್ಥಾನಕ್ಕೆ ಸಚಿವ ಎಂ. ಬಿ. ಪಾಟೀಲ ಭೇಟಿ:* ಸಾರವಾಡ ಗ್ರಾಮದಲ್ಲಿ ನಡೆಯುತ್ತಿರುವ ದ್ಯಾಮವ್ವದೇವಿ ದೇವಸ್ಥಾನ ಉದ್ಘಾಟನೆ ಮತ್ತು ಜಾತ್ರಾ ಮಹೋತ್ಸವದಲ್ಲಿ ಸಚಿವ ಎಂ. ಬಿ. ಪಾಟೀಲ ಪಾಲ್ಗೋಂಡು ಮಾತನಾಡಿದರು. ಕಲ್ಲಯ್ಯ ಲೋಕಯ್ಯ ಹಿರೇಮಠ, ಸದಾಶಿವ ಚಿಕರಡ್ಡಿ, ಮಲ್ಲಣ್ಣ ಕೋಟಿ, ದುಂಡಪ್ಪ ಕೋಟಿ, ಶಿವಪ್ಪ ಕೋಟಿ, ಚಂದ್ರಕಾಂತ ವಾಲಿ, ಶಿವಪ್ಪ ಬಡಿಗೇರ, ದುಂಡಪ್ಪ ಕೋಟಿ, ಪ್ರಭು ಕೋಟಿ, ಸಿದ್ರಾಮಪ್ಪ ಬಿದರಿ, ರಾಜಶೇಖರ ಇನಾಮದಾರ, ರುದ್ರಗೌಡ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.

*3.ಬುರಣಾಪುರ ರಸ್ತೆಯಲ್ಲಿರುವ ಘತ್ತರಗಿ ಭಾಗಮ್ಮ ದೇವಸ್ಥಾನಕ್ಕೆ ಸಚಿವ ಎಂ. ಬಿ. ಪಾಟೀಲ ಭೇಟಿ:* ವಿಜಯಪುರ ನಗರದ ಬುರಣಾಪುರ ರಸ್ತೆಯಲ್ಲಿರುವಶ್ರೀ ಘತ್ತರಗಿ ಭಾಗ್ಯವಂತಿದೇವಿಯ 15ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಎಂ. ಬಿ. ಪಾಟೀಲ ಪಾಲ್ಗೋಂಡರು. ಈ ಸಂದರ್ಭದಲ್ಲಿ ಎಸ್. ಸಿ. ಚಿಕರಡ್ಡಿ, ಬಿ. ಎಸ್. ಬಿರಾದಾರ ಉಪಸ್ಥಿತರಿದ್ದರು.


*4.ಬುರಣಾಪುರ ರಸ್ತೆಯಲ್ಲಿರುವ ಘತ್ತರಗಿ ಭಾಗಮ್ಮ ದೇವಸ್ಥಾನಕ್ಕೆ ಸಚಿವ ಎಂ. ಬಿ. ಪಾಟೀಲ ಭೇಟಿ:* ವಿಜಯಪುರ ನಗರದ ಬುರಣಾಪುರ ರಸ್ತೆಯಲ್ಲಿರುವಶ್ರೀ ಘತ್ತರಗಿ ಭಾಗ್ಯವಂತಿದೇವಿಯ 15ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಎಂ. ಬಿ. ಪಾಟೀಲ ಪಾಲ್ಗೋಂಡರು. ಈ ಸಚಿವರನ್ನು ಬಿ. ಎಸ್. ಬಿರಾದಾರ, ಎಂ. ಆರ್. ಪಾಟೀಲ ಬಳ್ಳೊಳ್ಳಿ ಮುಂತಾದವರು ಸನ್ಮಾನಿಸಿ ಗೌರವಿಸಿದರು.

Nimma Suddi
";