ಹಾವೇರಿ: ಕಳೆದ ವರ್ಷ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಎಲ್ಲ ಹಣ ಪಾವತಿ ಮಾಡಿದ್ದೇವೆ. ಈ ವರ್ಷ ಪೂರೈಸಿದ ರೈತರಿಗೆ ಜನವರಿವರೆಗೆ ಕ್ಲಿಯರಾಗಿದ್ದು, ರೈತರ ಕಬ್ಬಿನ ಬಾಕಿ ಕೊಡಿಸುವುದು ನನ್ನ ಜವಾಬ್ದಾರಿ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಭರವಸೆ ನೀಡಿದ್ದಾರೆ
.ತಾಲೂಕಿನ ಅಗಡಿ ಗ್ರಾಮದಲ್ಲಿ ಮಾತನಾಡಿದ ಅವರು ಫೆಬ್ರವರಿ ತಿಂಗಳ ಬಾಕಿ ಕೊಡಬೇಕಿದೆ ಫೆಬ್ರವರಿ ತಿಂಗಳದು ಕೊಡಬೇಕಂದ್ರೆ ಸಕ್ಕರೆ ದರ ಏರಿಕೆಯಾಗುತ್ತಿಲ್ಲ. ಕೇಂದ್ರ ಸರ್ಕಾರ ಯಾರಿಗೂ ಹೇಳದೆ ಎಥೆನಾಲ್ ಪಾಲಿಸಿ ಜಾರಿಗೆ ತಂದಿದ್ದಲ್ಲದೆ ಅದನ್ನ ವಾಪಸ್ ಸಹ ಪಡೆಯಿತು ಎಂದರು.
ನಾಲ್ಕು ನೂರು ಕೋಟಿ ರೂಪಾಯಿ ವೆಚ್ಚ ಮಾಡಿ ಎಥೆನಾಲ್ ಪ್ಯಾಕ್ಟರಿ ಹಾಕಿದವರಿಗೆ ಇದು ಬಾರಿ ನಷ್ಟ .ಸಕ್ಕರೆ ರಪ್ತಾಗುತ್ತಿಲ್ಲ ಇತ್ತ ದರ ಸಹ ಏರಿಕೆಯಾಗುತ್ತಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ 55 ರೂಪಾಯಿ ಇದೆ. ಆದರೆ ದೇಶದಲ್ಲಿ ಲೋಕಸಭೆ ಚುನಾವಣಿ ಇರುವ ಕಾರಣ ಅದು 34 ರೂಪಾಯಿಗೆ ಇದೆ ಎಂದು ತಿಳಿಸಿದರು.