This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Education NewsLocal NewsNational NewsPolitics NewsState News

ಬಾಕಿ ಕೆಲಸ ಪೂರ್ಣಗೊಳಿಸಲು ಸಚಿವ ತಿಮ್ಮಾಪೂರ ಸೂಚನೆ

ಬಾಕಿ ಕೆಲಸ ಪೂರ್ಣಗೊಳಿಸಲು ಸಚಿವ ತಿಮ್ಮಾಪೂರ ಸೂಚನೆ

ಬಾಗಲಕೋಟೆ:

ಕುಲಹಳ್ಳಿ-ಹುನ್ನೂರ ಏತ ನೀರಾವರಿ ಯೋಜನೆಗೆ ರೈತರ ಅನುಕೂಲಕ್ಕಾಗಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದ್ದು, ಬಾಕಿ ಉಳಿದ ಕೆಲಸವನ್ನು ತುರ್ತಾಗಿ ಕೈಗೊಂಡು ಪೂರ್ಣ ಪ್ರಮಾಣದ ಯೋಜನೆಯ ಲಾಭ ರೈತರು ಪಡೆಯುವಂತೆ ಆಗಬೇಕೆಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ತಿಳಿಸಿದರು.

ಜಮಖಂಡಿ ತಾಲೂಕಿನ ಕುಲಹಳ್ಳಿಯ ಹತ್ತಿರ ನಿರ್ಮಿಸಲಾದ ಕುಲಹಳ್ಳಿ-ಹುನ್ನೂರ ಏತ ನೀರಾವರಿ ಯೋಜನೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಿ ಮಾತನಾಡಿದ ಅವರು ರಬಕವಿ-ಬನಹಟ್ಟಿ ಮತ್ತು ಜಮಖಂಡಿ ತಾಲೂಕಿನ 9163 ಹೆಕ್ಟೆರ್ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ನೀಡುವ ಉದ್ದೇಶದಿಂದ ಈ ಯೋಜಯದ್ದಾಗಿದ್ದು, ಮುಂಗಾರು ಹಂಗಾಮಿಗೆ ರೈತರ ಅನುಕೂಲಕ್ಕಾಗಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದ್ದು, ಒಂದೇ ಪೈಪ್ ಮೂಲಕ ನಿರಂತವಾಗಿ ನೀರು ಕೊಡುವಂತೆ ನೀರಾವರಿ ಅಧಿಕಾರಿಗಳಿಗೆ ಸೂಚಿಸಿದರು.

ಜನರ ಹಿತಕ್ಕಾಗಿ ಸರಕಾರ ಮಂಜೂರು ಮಾಡಿದ ಯೋಜನೆಗಳನ್ನು ಸಮರ್ಪಕವಾಗಿ ಕಾರ್ಯಗತ ಮಾಡಬೇಕು. ಯಾವುದೇ ಸರಕಾರ ಬಂದರು ಕೂಡಾ ಜನರ ಹಿತ ಮುಖ್ಯವಾಗಿರುತ್ತದೆ. ಏತ ನೀರಾವರಿ ಯೋಜನೆ ಕೆಲವೊಂದು ಕಾರಣಗಳಿಂದ ನಿಗದಿತ ಸಮಯದಲ್ಲಿ ಯೋಜನೆ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಇನ್ನು ಹೀಗಾಗದಂತೆ ಕ್ರಮವಹಿಸಲಾಗುವುದು. ಈ ಯೋಜನೆಯ ಭೌತಿಕ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕಾರ್ಯ ಶೀಘ್ರದಲ್ಲಿಯೇ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸಚಿವರು ಸೂಚಿಸಿದರು.

ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಮಾತನಾಡಿ ಬೇಸಿಗೆ ಕಾಲದಲ್ಲಿ ರೈತರಿಗೆ ಅನುಕೂಲವಾಗಿ ಎಂಬ ಉದ್ದೇಶದಿಂದ 80 ಕೋಟಿ ವೆಚ್ಚದಲ್ಲಿ 9 ಸಾವಿರ ಹೆಕ್ಟೆರ್‌ಗೆ ನೀರು ಪೂರೈಸುವ ಕಾರ್ಯ ಇದಾಗಿದ್ದು, ಇಷ್ಟೊಂದು ಜಮಿನಿಗೆ ಅಲ್ಪ ಖರ್ಚಿನಲ್ಲಿ ಈ ಕಾರ್ಯ ಮಾಡಿದ್ದ, ಸರಕಾರದ ಮಟ್ಟದಲ್ಲಿ ಮಾತ್ರ ಸಾಧ್ಯವೆಂದರು. ಈ ನೀರಾವರಿ ಯೋಜನೆಯಲ್ಲಿ 1660 ಎಚ್.ಪಿ ಸಾಮರ್ಥ್ಯವುಳ್ಳ 4 ಪಂಪ್‌ಗಳನ್ನು ಅಳವಡಿಸಲಾಗಿದೆ. ಒಂದೊAದು ಪಂಪ್ 5 ರಿಂದ 6 ಮೀಟರ್ ಎತ್ತರಕ್ಕೆ ಚಿಮ್ಮಿಸುವ ಸಾಮರ್ಥ್ಯ ಹೊಂದಿದ್ದು, 7 ಕಿ.ಮೀ ವರೆಗೆ ನೀರು ಹರಿಯಲಿದೆ ಎಂದರು.

ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ ರಬಕವಿ ಬನಹಟ್ಟಿ ತಾಲೂಕಿನ ಕುಲಹಳ್ಳಿ, ಹಿಪ್ಪರಗಿ ಮತ್ತು ಮದರಖಂಡಿ, ಜಮಖಂಡಿ ತಾಲೂಕಿನ ಹುನ್ನೂರ, ಜಮಖಂಡಿ, ಕುಂಬಾರಹಳ್ಳ, ಹಂಚನಾಳ, ಕಂಕಣವಾಡಿ, ಕಡಪಟ್ಟಿ, ಸನಾಳ, ಆಲಗೂರ, ಕುಂಚನೂರ, ಮೈಗೂರ, ಶಿರಗುಪ್ಪಿ, ಆಲಬಾಳ, ಮುತ್ತೂರ ಸೇರಿ 16 ಗ್ರಾಮದ ರೈತರು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ಪ್ರಾಯೋಗಿಕವಾಗಿ ಚಾಲನೆ ನೀಡಿದರೂ ಸಹ ನಿರಂತರವಾಗಿ ನೀರು ಪೂರೈಸಲು ಕ್ರಮವಹಿಸುವಂತೆ ಸಚಿವರಲ್ಲಿ ಮನವಿ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಆನಂದ ನ್ಯಾಮಗೌಡ, ಕುಲಹಳ್ಳಿ ಗ್ರಾ.ಪಂ ಅಧ್ಯಕ್ಷೆ ಸಾವಿತ್ರಿ ಪೂಜಾರಿ, ಜಮಖಂಡಿ ಜಿ.ಎಲ್.ಬಿ.ಸಿ ವೃತ್ತದ ಅಧೀಕ್ಷಕ ಅಭಿಯಂತರ ಶ್ರೀಶೈಲ ಕಲ್ಯಾಣಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿ.ಎಸ್.ನಾಯಕ, ವಿಭಾಗೀಯ ಅಧಿಕಾರಿ ವಾಸಿಮ್ ಜಮಾದಾರ, ಗುತ್ತಿಗೆದಾರ ದೀಪಕ ಕಡೆಗಾಂವಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Nimma Suddi
";