ದಾವಣಗೆರೆ: ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ ಹಾಗೂ ಬಾಳೆ ಗಿಡಗಳು ಬೆಂಕಿಗಾಹುತಿಯಾದ ಘಟನೆ ದಾವಣಗೆರೆತಾಲೂಕಿನ ಹುಣಸಡಕಟ್ಟೆ ಗ್ರಾಮದಲ್ಲಿ ನಡೆದಿದೆ.
ವಿಶ್ವನಾಥ್ ಎಂಬುವವರಿಗೆ ಸೇರಿದ ತೋಟ ಇದಾಗಿದ್ದು, 1,300 ಅಡಿಕೆ ಹಾಗೂ 1,400 ಬಾಳೆ ಗಿಡಗಳು ಸುಟ್ಟು ಭಸ್ಮವಾಗಿದೆ. ರೈತನ ಕುಟುಂಬ ಗ್ರಾಮದಲ್ಲಿ ಇಲ್ಲದನ್ನ ತಿಳಿದ ಕಿಡಿಗೇಡಿಗಳು, ದ್ವೇಷದಿಂದ ಬೆಂಕಿ ಇಟ್ಟ ಶಂಕೆ ವ್ಯಕ್ತವಾಗಿದೆ. ಇನ್ನು ಸ್ಥಳೀಯರು ಸೇರಿ ಅರ್ಧ ಅಡಿಕೆ ಹಾಗೂ ಬಾಳೆ ತೋಟವನ್ನು ಬೆಂಕಿಯಿಂದ ಉಳಿಸಿದ್ದಾರೆ.
ಕಳೆದ ವರ್ಷ ಇದೇ ತೋಟದಿಂದ ಬರೊಬ್ಬರಿ ಎಳು ಲಕ್ಷ ರೂಪಾಯಿ ಆದಾಯ ಬಂದಿದ್ದು, ಈ ವರ್ಷ ಬೆಂಕಿಗೆ ಬಲಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಹೊಟ್ಟೆಕಿಚ್ಚಿನಿಂದ ಫಲಕ್ಕೆ ಬಂದ ಅಡಿಕೆ ಮರಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಶಂಕೆಯಿದ್ದು, ರೈತ ವಿಶ್ವನಾಥ್ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಖೆ ಆರಂಭಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.