This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Education NewsLocal NewsPolitics News

ದಲಿತರ ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟ ಹಣ ಕಾಂಗ್ರೆಸ್‌ನಿಂದ ದುರ್ಬಳಕೆ

ದಲಿತರ ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟ ಹಣ ಕಾಂಗ್ರೆಸ್‌ನಿಂದ ದುರ್ಬಳಕೆ

ಬಾಗಲಕೋಟೆ

ರಾಜ್ಯದ ಪರಿಶಿಷ್ಟ ಜಾತಿ ಪಂಗಡಗಳ ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟಿರುವ ೧೧,೪೪೨ ಕೋಟಿ ಹಣವನ್ನು ದಲಿತರ ಅಭಿವೃದ್ಧಿಗೆ ಬಳಸದೇ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ಐದು ಗ್ಯಾರಂಟಿಗಳಿಗೆ ದುರ್ಬಳಕೆ ಮಾಡಿಕೊಂಡು ಎಸ್.ಸಿ. ಎಸ್.ಟಿ. ಸಮುದಾಯವನ್ನು ಕಾಂಗ್ರೆಸ್ ವಂಚಿಸುತ್ತಿದೆ ಎಂದು ಮಾದಿಗ ಮಹಾಸಭಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾದಿಗ ಮಹಾಸಭಾ ರಾಜ್ಯಾಧ್ಯಕ್ಷ ಮುತ್ತಣ್ಣ ಬೆಣ್ಣೂರ ಅವರು ಮಾತನಾಡುತ್ತ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಅಧಿಕಾರ ವಹಿಸಿಕೊಂಡಾಗೊಮ್ಮೆ ಪರಿಶಿಷ್ಟ ಜಾತಿ, ಪಂಗಡಗಳ ಬಗ್ಗೆ ನಾಟಕೀಯ ಮಾತುಗಳಿಂದಲೇ ನಂಬಿಸಿ ಆರ್ಥಿಕ ಸಬಲೀಕರಣದಲ್ಲಿ ಒಳಹೊಡೆತ ನೀಡುತ್ತಲೇ ಬಂದಿದ್ದು ಇದಕ್ಕೆ ಹತ್ತು ಹಲವು ಜ್ವಲಂತ ಸಾಕ್ಷಿಗಳಿವೆ. ಮುಖ್ಯಮಂತ್ರಿಗಳಿಗೆ ದಲಿತರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೇ ಎಸ್.ಸಿ.ಪಿ. ಟಿ.ಎಸ್.ಪಿ. ಹಣವನ್ನು ಕೂಡಲೇ ಮರಳಿಸಿ ಪರಿಶಿಷ್ಟರ ಸಮಗ್ರ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಿ ಅದು ಬಿಟ್ಟು ರಾಜ್ಯದ ದಲಿತರನ್ನು ವಂಚಿಸುತ್ತಿರುವದು ಅತ್ಯಂತ ಹೇಯ ಕೃತ್ಯವಾಗಿದೆ ಎಂದರು.

ಒಳ ಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರವು ಗೃಹ ಸಚಿವ ಡಾ.ಜಿ.ಪರಮೇಶ್ವರರವರು ಒಂದು ರೀತಿಯ ಹೇಳಿಕೆ ನೀಡುತ್ತಾರೆ ಇನ್ನೊಂದೆಡೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪರವರು ಮತ್ತು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರರವರು ಒಂದೊAದು ಬಗೆಯ ಹೇಳಿಕೆಗಳನ್ನು ನೀಡಿ ರಾಜ್ಯದ ಪರಿಶಿಷ್ಟರನ್ನು ಗೊಂದಲದಲ್ಲಿ ಸಿಲುಕಿಸುತ್ತಿದ್ದಾರೆ. ಒಳಮೀಸಲಾತಿ ವಿಚಾರದಲ್ಲಿ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲವೇ ಇಲ್ಲ. ಒಳ ಮೀಸಲಾತಿಯನ್ನು ಈಗಾಗಲೇ ಹಿಂದಿನ ಸರ್ಕಾರವು ಕೇಂದ್ರಕ್ಕೆ ಶಿಫಾರಸ್ಸು ಮಾಡಿಯಾಗಿದೆ. ಆ ವಿಚಾರದಲ್ಲಿ ಪ್ರಸ್ತುತ ಸರ್ಕಾರ ಅನಾವಶ್ಯಕ ಮೂಗು ತೂರಿಸುತ್ತಾ ರಾಜ್ಯದ ಪರಿಶಿಷ್ಟರಿಗೆ ಮಂಕು ಬೂದಿಯನ್ನು ಎರಚುವದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.

ಮಾದಿಗ ಮಹಾಸಭಾ ರಾಜ್ಯ ಸಂಘಟನಾ ಸಂಚಾಲಕರಾದ ಶಿವಾನಂದ ಟವಳಿ ಮಾತನಾಡಿ ಚಿತ್ರದುರ್ಗ ಜಿಲ್ಲೆ ಕಾವಾಡಿಗರ ಹಟ್ಟಿಯಲ್ಲಿ ನಡೆದ ವಿಷಪೂರಿತ ನೀರು ಕುಡಿದು ಸುಮಾರು ಎಂಟು ಜನ ಮಾದಿಗರು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಸರ್ಕಾರವು ಸಾಮಾಜಿಕ ನ್ಯಾಯದ ಪರ ನಡೆಯದೇ ಇಡೀ ಘಟನೆಯನ್ನು ತಿರುಚಿ ಕಲುಷಿತ ನೀರು ಕಾಲರಾ ಹೆಸರಲ್ಲಿ ಸಾಮೂಹಿಕ ಹತ್ಯೆಗೆ ಬೆಂಗಾವಲಾಗಿ ನಿಂತಿದೆ.

ದಲಿತ ಸಚಿವತ್ರಯರುಗಳು ಸರ್ಕಾರದ ಗಮನ ಸೆಳೆಯುವಲ್ಲಿ ವಿಫಲರಾಗಿದ್ದು ಜಾತಿಯತೆ ನಡೆ ಅನುಸರಿಸುತ್ತಿದ್ದಾರೆ. ಕಾಂಗ್ರೆಸ್‌ನಿಂದ ಮಾದಿಗರನ್ನು ಹತ್ತಿಕ್ಕುವ ಹುನ್ನಾರವು ನಡೆಯುತ್ತಿದೆ. ಸಚಿವ ಸಂಪುಟದಲ್ಲಿ ಸಮುದಾಯಕ್ಕೆ ಹತ್ತಿರವಿರದ ಸ್ಥಾನ ನೀಡಿ ಮಾದಿಗರನ್ನು ರಾಜಕೀಯವಾಗಿ ಹತ್ತಿಕ್ಕಿದ್ದು ಜ್ವಲಂತ ಉದಾಹರಣೆಯಾಗಿದೆ. ಕಾರಣ ಮಾದಿಗ ಸಮುದಾಯವು ಎಚ್ಚೆತ್ತುಕೊಂಡು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ಸರ್ಕಾರದ ನಡೆ ವಿರುದ್ಧ ಮತ ಚಲಾವಣೆಗೆ ಸಿದ್ದರಿರಬೇಕೆಂದು ಈ ಮೂಲಕ ಸಮುದಾಯಕ್ಕೆ ಕೋರುತ್ತೇವೆ.

ಪತ್ರಿಕಾಗೋಷ್ಠಿಯಲ್ಲಿ ಮಾದಿಗ ಮಹಾಸಭಾ ರಾಜ್ಯ ಕಾರ್ಯದರ್ಶಿ ಸತೀಶ ಎಚ್.ಸೂಳಿಕೇರಿ, ಬಾಗಲಕೋಟ ಜಿಲ್ಲಾಧ್ಯಕ್ಷ ಕಾಂತಿಚಂದ್ರ ಜ್ಯೋತಿ, ಯುವ ಘಟಕದ ಜಿಲ್ಲಾಧ್ಯಕ್ಷ ಸುನೀಲ ಕಂಬೋಗಿ, ಬಾಗಲಕೋಟ ತಾಲೂಕ ಕಾರ್ಯದರ್ಶಿ ಕನಕಪ್ಪ ಎಸ್.ಪೂಜಾರಿ, ಶಿವರಾಜ ಎಂ.ಬೆಣ್ಣೂರ ಹಾಜರಿದ್ದರು.

Nimma Suddi
";