ಕಲಬುರಗಿ: ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಕ್ಕೆ ತೊಂದರೆ ಆಗುತ್ತಿದೆ ಎಂದು ಕಲಬುರಗಿ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದ್ದಾರೆ.
ರವಿವಾರ ರಂದು ಕಲಬುರಗಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಗೆ 65 ಸಾವಿರ ಕೋಟಿ ಹಣ ಖರ್ಚಾಗುತ್ತಿದೆ. ಎಲ್ಲ ಹೆಣ್ಣು ಮಕ್ಕಳು ಸರ್ಕಾರಿ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಉಚಿತ ಅಕ್ಕಿ, ತಲಾ ಎರಡು ಸಾವಿರ ಹಣ ಮಹಿಳೆಯರ ಖಾತೆ ಹಾಕುತ್ತಿದ್ದೇವೆ. ಇದರಿಂದ ಬಹಳಷ್ಟು ಖರ್ಚು ಆಗುತ್ತಿದೆ, ಇದರಿಂದ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದರು.
ನಿಮ್ಮ ನಿರೀಕ್ಷೆ ಹುಸಿಗೊಳಿಸದಂತೆ ಕೆಲಸ ಮಾಡುತ್ತಿದ್ದು, ಐದು ವರ್ಷದಲ್ಲಿ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ. ಈ ವರ್ಷ ನಮ್ಮ ಕ್ಷೇತ್ರಕ್ಕೆ 9 ಕೋಟಿ ರೂ. ಅನುದಾನ ಬಂದಿದೆ. 38 ಹಳ್ಳಿ ಮತ್ತು 23 ವಾರ್ಡ್ಗಳಿಗೆ ಹಂಚಬೇಕು. ಒಂದೊಂದು ಹಳ್ಳಿ, ವಾರ್ಡ್ಗೆ 20 ಲಕ್ಷ ರೂ. ಬರುತ್ತೆ. ಈಗಾಗಲೆ ಕಾಮಕಾರಿಗಳಿಗೆ ಟೆಂಡರ್ ಕೆರೆಯಾಲಿಗೆ. ಕಾಮಗಾರಿಗಳಿಗೆ ಹಣ ನೀಡಬೇಕಿದ್ದು, ನಾಲ್ಕು ಕೋಟಿ ರೂ. ನಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.
ಅಧಿಕಾರಕ್ಕೆ ಬಂದ ಕೆಲವೆ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿದ ಕೆಲವೆ ದಿನಗಳಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಚ್ಚರಿ ಹೇಳಿಕೆಯೊಂದು ನೀಡಿದ್ದರು. ಅದು ” ಈ ವರ್ಷ (2023) ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ನಾವು (ಐದು ಗ್ಯಾರಂಟಿ ಯೋಜನೆಗಳಿಗಾಗಿ) 40,000 ಕೋಟಿ ರೂಪಾಯಿಗಳನ್ನು ಮೀಸಲಿಡಬೇಕಾಗಿತ್ತು ಎಂದು ವಿವರಿಸಿದರು.