This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Education NewsState News

ವರ್ಷದೊಳಗೆ ಮಾದರಿ ಗ್ರಾಪಂಗಳು ರೂಪಿತವಾಗಲಿ

ವರ್ಷದೊಳಗೆ ಮಾದರಿ ಗ್ರಾಪಂಗಳು ರೂಪಿತವಾಗಲಿ

ಬಾಗಲಕೋಟೆ

ಅಭಿವೃದ್ಧಿ ಕೆಲಸದಲ್ಲಿ ಬೇಜವಾಬ್ದಾರಿ ತೋರದೇ ಕಚೇರಿಗೆ ಆಗಮಿಸುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅಕಾರಿಗಳಿಗೆ ಸೂಚಿಸಿದರು.

ಜಿಪಂ ನೂತನ ಸಭಾಭವನದಲ್ಲಿ ಕಂದಾಯ ಹಾಗೂ ಪಂಚಾಯತ ಅಭಿವೃದ್ಧಿ ಅಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಅಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಅಭಿವೃದ್ಧಿ ಹಾಗೂ ಬಡವರ ಪರ ಕೆಲಸವಾಗಬೇಕು. ಅಭಿವೃದ್ಧಿಯಲ್ಲಿ ಜಿಲ್ಲೆ ಮೊದಲ ಸ್ಥಾನಕ್ಕೇರಲು ತಮ್ಮ ಸಂಪೂರ್ಣ ಬೆಂಬಲವಿರುವುದಾಗಿ ತಿಳಿಸಿದರು.

ಪ್ರತಿ ತಾಲೂಕಿಗೆ ೫ ಗ್ರಾಪಂ ಆಯ್ಕೆ ಮಾಡಿಕೊಂಡು ಅಲ್ಲಿನ ಪ್ರತಿ ಮನೆಗೊಂದು ಹಾಗೂ ಶಾಲೆಗಳಲ್ಲಿ ಶೌಚಾಲಯ, ಸಾಮೂಹಿಕ ಶೌಚಾಲಯ, ಶಾಲಾ ಕಾಂಪೌAಡ್ ನಿರ್ಮಾಣ ಸೇರಿದಂತೆ ಮೂಲ ಸೌಲಭ್ಯ ಒದಗಿಸಿ, ವರ್ಷದಲ್ಲಿ ಮಾದರಿ ಗ್ರಾಮಗಳನ್ನಾಗಿ ರೂಪಿಸಲು ಕ್ರಿಯಾ ಯೋಜನೆ ರೂಪಿಸಬೇಕು. ಅನ್ಯ ಇಲಾಖೆಗಳೊಂದಿಗೆ ಸಮನ್ವತೆ ಸಾಸುವಂತಾಗಬೇಕು. ಗ್ರಾಮ ವ್ಯಾಪ್ತಿಯಲ್ಲಿ ಅರಣ್ಯ, ಸರಕಾರಿ ಹಾಗೂ ಗಾಂವಟಾನ್ ಜಾಗದಲ್ಲಿ ಹಲವು ವರ್ಷದಿಂದ ಬಡವರು ಮನೆ ಕಟ್ಟಿಕೊಂಡಿದ್ದರೂ ಅವರಿಗೆ ಈವರೆಗೆ ಹಕ್ಕುಪತ್ರ ದೊರೆತಿಲ್ಲ. ಹಕ್ಕುಪತ್ರ ವಿತರಣೆಗೆ ಇರುವ ಪ್ರಸ್ತುತ ಮಾಹಿತಿಯನ್ನು ತಹಸೀಲ್ದಾರರು ಹಾಗೂ ತಾಪಂ ಇಒಗಳು ತಿಂಗಳ ಕೊನೆಯಲ್ಲಿ ನೀಡಲು ಸೂಚಿಸಿದರು.

ಖಾಸಗಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದರೂ ಜಾಗ ಇನ್ನು ಖಾಸಗಿಯವರ ಹೆಸರಿನಲ್ಲಿದೆ. ಅವುಗಳು ಹಸ್ತಾಂತರವಾಗದೇ ಹಕ್ಕುಪತ್ರ ನೀಡಲು ಬರುವದಿಲ್ಲ. ಇಂತಹ ಸಮಸ್ಯೆ ಜಿಲ್ಲಾದ್ಯಂತ ಇರುವುದಾಗಿ ಬಾದಾಮಿ ತಹಸೀಲ್ದಾರ್ ಜೆ.ಬಿ.ಮಜ್ಜಗಿ ತಿಳಿಸಿದಾಗ ಇಂತಹ ಪ್ರಕರಣಗಳ ಮಾಹಿತಿ ನೀಡಿದಲ್ಲಿ ಸರಕಾರದ ಮಟ್ಟದಲ್ಲಿ ಚರ್ಚಿಸಲಾಗುವುದೆಂದು ತಿಳಿಸಿದರು.

ಸ್ಮಶಾನ ಸಮಸ್ಯೆ ಇರುವ ಗ್ರಾಮಗಳಲ್ಲಿ ಜಾಗ ಗುರುತಿಸಿ ಸ್ಮಶಾನ ನಿರ್ಮಾಣಕ್ಕೆ ಒದಗಿಸುವಂತಾಗಬೇಕು. ಸಮಸ್ಯೆ ಇದ್ದಲ್ಲಿ ಮಾಹಿತಿ ನೀಡಬೇಕು. ಸ್ಮಶಾನಗಳಿಗೆ ಕಾಂಪೌAಡ್ ನಿರ್ಮಿಸಿ ಸ್ವಚ್ಛಗೊಳಿಸಬೇಕು. ಈ ಕಾರ್ಯ ಶೇ.೭೦ ಪಂಚಾಯತಿಗಳು ಮಾಡಿಲ್ಲ. ಸ್ಮಶಾನಕ್ಕೆ ತಂತಿ ಬೇಲಿ, ದುರಸ್ಥಿಗೆ ಮುಂದಾಗಬೇಕು ಎಂದು ಸೂಚಿಸಿದರು.

ಶಾಲೆಗಳಲ್ಲಿ ಶೌಚಾಲಯ ಇಲ್ಲದೇ ಹೆಣ್ಣುಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ನರೇಗಾದಡಿ ಶೌಚಾಲಯ ನಿರ್ಮಿಸಿ, ಜತೆಗೆ ಸಾರ್ವಜನಿಕ ಶೌಚಾಲಯ ನಿರ್ಮಾಣವಾಗಬೇಕು. ಮುಂದಿನ ತಿಂಗಳಿನಿAದ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಲಿದ್ದು, ಮೂರು ತಿಂಗಳಲ್ಲಿ ಶಾಲೆಗಳಲ್ಲಿ ಶೌಚಾಲಯ ಲಭ್ಯವಿರುವಂತಾಗಬೇಕು. ನರೇಗಾ ಪ್ರಗತಿಯಲ್ಲಿ ಜಿಲ್ಲೆ ೬ ಸ್ಥಾನದಲ್ಲಿದ್ದು, ಮೊದಲ ಸ್ಥಾನಕ್ಕೆರಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾಕಾರಿ ಕೆ.ಎಂ.ಜಾನಕಿ, ಜಿಪಂ ಸಿಇಒ ಶಶಿಧರ ಕುರೇರ, ಯುಕೆಪಿ ಮಹಾವ್ಯವಸ್ಥಾಪಕ ರಮೇಶ ಕಳಸದ, ಜಿಪಂ ಉಪಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಉಪವಿಭಾಗಾಕಾರಿಗಳಾದ ಶ್ವೇತಾ ಬೀಡಿಕರ, ಸಂತೋಷ ಕಾಮಗೌಡ, ನಾನಾ ಇಲಾಖೆಯ ಅಕಾರಿಗಳು, ಪಿಡಿಒಗಳು ಇದ್ದರು.

 

 

Nimma Suddi
";