ನಂದೂರ್‌ಬಾರ್ ಮಹಾರಾಷ್ಟ್ರ:ಹಿಂದೂ ನಂಬಿಕೆಯನ್ನು ತೊಡೆದುಹಾಕಲು ಕಾಂಗ್ರೆಸ್ ಷಡ್ಯಂತ್ರದಲ್ಲಿ ತೊಡಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನಂದೂರ್‌ಬಾರ್‌ನಲ್ಲಿ ಇಂದು ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸಾಗರೋತ್ತರ ಘಟಕದ ಮಾಜಿ ಮುಖ್ಯಸ್ಥರ ಹೇಳಿಕೆಗಳ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ರಾಮ ಮಂದಿರ ನಿರ್ಮಾಣವು ಭಾರತದ ಕಲ್ಪನೆಗೆ ವಿರುದ್ಧವಾಗಿದೆ ಎಂದು ಶೆಹಜಾದೆ (ರಾಹುಲ್ ಗಾಂಧಿ) ಗುರುಗಳು ಅಮೆರಿಕಕ್ಕೆ ಹೇಳಿದ್ದಾರೆ” ಎಂದರು.
“ಕಾಂಗ್ರೆಸ್‌ನ ಮನಸ್ಥಿತಿ ನೋಡಿ, ರಾಮನ ದೇಶದಲ್ಲಿ ರಾಮಮಂದಿರವನ್ನು ದೇಶ ವಿರೋಧಿ ಎಂದು ಕರೆಯುತ್ತಿದ್ದಾರೆ.’ ಸರ್ಕಾರಿ ಇಫ್ತಾರಿ’ಯನ್ನು ಆಯೋಜಿಸುವ, ಭಯೋತ್ಪಾದಕರ ಸಮಾಧಿಯನ್ನು ಶೃಂಗಾರಗೊಳಿಸುವವರು ನಮ್ಮ ಪ್ರಭು ರಾಮನನ್ನು, ಆತನ ಮಂದಿರ ಮತ್ತು ರಾಮ ಮಂದಿರಕ್ಕೆ ಹೋಗುವವರು ದೇಶವಿರೋಧಿಗಳು ಎಂದು ಕರೆಯುತ್ತಿದ್ದಾರೆ ಎಂದು ಮೋದಿ ವಾಗ್ದಾಳಿ ನಡೆಸಿದರು.
ಅದೇ ವೇಳೆ ಉದ್ಧವ್ ಠಾಕ್ರೆ ಶಿವಸೇನಾ ಬಣದ ವಿರುದ್ಧ ವ್ಯಂಗ್ಯವಾಡಿದ ಅವರು, ಉದ್ಧವ್ ಬಣವನ್ನು “ನಕಲಿ ಶಿವಸೇನೆ”ಎಂದಿದ್ದಾರೆ. “ನಕಲಿ ಶಿವಸೇನೆಯವರು ನನ್ನನ್ನು ಜೀವಂತ ಸಮಾಧಿ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ” ಎಂದಿದ್ದಾರೆ ಪ್ರಧಾನಿ.