This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

National NewsState News

ಲೋಕಸಭಾ ಚುನಾವಣೆ 2024: ನಾಮಪತ್ರ ಸಲ್ಲಿಕೆಗೂ ಮುಂಚೆ ವಾರಾಣಸಿಯಲ್ಲಿ ಇಂದು ಮೋದಿ ರೋಡ್​ ಶೋ

ಲೋಕಸಭಾ ಚುನಾವಣೆ 2024: ನಾಮಪತ್ರ ಸಲ್ಲಿಕೆಗೂ ಮುಂಚೆ ವಾರಾಣಸಿಯಲ್ಲಿ ಇಂದು ಮೋದಿ ರೋಡ್​ ಶೋ

ಮೂರನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಕಾಶಿಗೆ ಆಗಮಿಸುತ್ತಿದ್ದು ಸಂಜೆ ರೋಡ್​ ಶೋ ನಡೆಸಲಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಇಂದು ಬಿಎಚ್​ಯು ಸಿಂಗ್​ದ್ವಾರದಿಂದ ವಿಶ್ವನಾಥ್ ಧಾಮದವರೆಗೆ ರೋಡ್​ ಶೋ ನಡೆಸಲಿದೆ. 2014,2019ರ ನಂತರ ಪ್ರಧಾನಿ ಮತ್ತೊಮ್ಮೆ 2024ರಲ್ಲಿ ವಾರಾಣಸಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ. ತಮ್ಮ ಎರಡು ದಿನಗಳ ಕಾರ್ಯಕ್ರಮದಲ್ಲಿ ಅವರು ಬಿಹಾರ ಹಾಗೂ ಜಾರ್ಖಂಡ್​ನಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಬಳಿಕ ಮೇ 13ರಂದು ಸಂಜೆ 4 ಗಂಟೆಗೆ ಬಬತ್​ಪುರ ವಿಮಾನ ನಿಲ್ದಾಣ ತಲುಪಲಿದ್ದಾರೆ.

ಇಲ್ಲಿಂದ ಸೇನಾ ಹೆಲಿಕಾಪ್ಟರ್​ ಬಿಎಚ್​ಯು ಹೆಲಿಪ್ಯಾಡ್ ತಲುಪಲಿದೆ. ಅಲ್ಲಿಂದ ತೆರೆದ ವಾಹನದಲ್ಲಿ ಮೋದಿ ಲಂಕಾದ ಸಿಂಗ್​ದ್ವಾರಕ್ಕೆ ಬರಲಿದ್ದಾರೆ. ಇಲ್ಲಿ 5 ಗಂಟೆಗೆ ಮಾಳವೀಯರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮಹಾಮಾನ ಪಂಡಿತ ವಿಶ್ವನಾಥ್ ಧಾಮವನ್ನು ತಲುಪಲು ಸುಮಾರು 4 ಗಂಟೆಗಳು ಬೇಕಾಗುತ್ತದೆ. ವಿಶ್ವನಾಥ ದೇಗುಲದಲ್ಲಿ ಷೋಡಶೋಪಚಾರ ದರ್ಶನ ಹಾಗೂ ಪೂಜೆ ಸಲ್ಲಿಸಿದ ಬಳಿಕ ರಸ್ತೆ ಮಾರ್ಗವಾಗಿ ಬರೇಕ ಅತಿಥಿಗೃಹಕ್ಕೆ ತೆರಳಲಿದ್ದಾರೆ.

ಮೇ14ರಂದು ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸೇರಿದಂತೆ 12 ರಾಜ್ಯಗಳ ಮುಖ್ಯಮಂತ್ರಿಗಳು ಉಪಸ್ಥಿತರಿರಲಿದ್ದಾರೆ. ಇದಲ್ಲದೆ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜ್​ನಾಥ್​ ಸಿಂಗ್ ಸೇರಿದಂತೆ ಅನೇಕ ಕೇಂದ್ರ ಸಚಿವರೂ ಇರಲಿದ್ದಾರೆ.

ವಾರಾಣಸಿಯಲ್ಲಿ ಮೇ 14 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಅದಕ್ಕೂ ಮುನ್ನ ಮೋದಿ ರೋಡ್​ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ. ಮೋದಿಯವರನ್ನು ಬರಮಾಡಿಕೊಳ್ಳಲು ವಾರಾಣಸಿ ಸಜ್ಜಾಗಿದೆ.

";