This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

National NewsPolitics NewsState News

ಭಾರತವನ್ನು ಹೆದರಿಸುವವರನ್ನು ಅವರ ನೆಲಕ್ಕೆ ನುಗ್ಗಿ ಹೊಡೆದು ಬರ್ತೀವಿ: ಮೋದಿ

ಭಾರತವನ್ನು ಹೆದರಿಸುವವರನ್ನು ಅವರ ನೆಲಕ್ಕೆ ನುಗ್ಗಿ ಹೊಡೆದು ಬರ್ತೀವಿ: ಮೋದಿ

ಬಸ್ತಿ/ ಶ್ರಾವಸ್ತಿ : ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷದ ನಡುವಿನ ಮೈತ್ರಿ ವಿರುದ್ಧ ತೀವ್ರ ವಾಗ್ದಾಳಿ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಎರಡೂ ಪಕ್ಷಗಳು ಪಾಕಿಸ್ತಾನದ ಪರ ಅನುಕಂಪ ಹೊಂದಿವೆ. ಪಾಕ್‌ ಬಳಿ ಪರಮಾಣು ಬಾಂಬ್‌ ಇದೆ ಎಂದು ಈ ಪಕ್ಷಗಳ ನಾಯಕರು ಭಾರತೀಯರನ್ನೇ ಹೆದರಿಸುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ಬುಧವಾರ ಉತ್ತರಪ್ರದೇಶದ ಬಸ್ತಿ ಮತ್ತು ಶ್ರಾವಸ್ತಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಮೋದಿ, ಭಾರತವನ್ನು ಹೆದರಿಸುವವರನ್ನು ಅವರ ನೆಲಕ್ಕೆ ನುಗ್ಗಿ ಹೊಡೆದು ಬರ್ತೀವಿ. 56 ಇಂಚಿನ ಎದೆ ಬಗ್ಗೆ ಅವರಿಗೆ ಗೊತ್ತಿಲ್ಲವೇ’ ಎಂದು ಮೋದಿ ಪ್ರಶ್ನಿಸಿದರು.ಈ ನಡುವೆ, ಈ ಬಾರಿ ಉತ್ತರಪ್ರದೇಶದಲ್ಲಿ ಇಂಡಿಯಾ ಮೈತ್ರಿಕೂಟ 80ರ ಪೈಕಿ 79 ಸ್ಥಾನ ಗೆಲ್ಲಲಿದೆ ಎಂಬ ಅಖಿಲೇಶ್‌ ಯಾದವ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಮೋದಿ, ಜೂ.4ರಂದು ಮತದಾರರು ಎರಡೂ ಪಕ್ಷಗಳ ನಾಯಕರನ್ನು ನಿದ್ದೆಯಿಂದ ಎಬ್ಬಿಸಲಿದ್ದಾರೆ. ಬಳಿಕ ಎರಡೂ ಪಕ್ಷಗಳು ಇವಿಎಂ ಮೇಲೆ ದೂಷಣೆ ಆರಂಭಿಸಲಿವೆ ಎಂದು ತಿರುಗೇಟು ನೀಡಿದರು.

ಇದೇ ವೇಳೆ ರಾಮಮಂದಿರ ಉದ್ಘಾಟನೆಗೆ ನೀಡಲಾದ ಆಹ್ವಾನ ತಿರಸ್ಕರಿಸಿದ ಎರಡೂ ಪಕ್ಷಗಳ ನಾಯಕರ ಬಗ್ಗೆ ಕಿಡಿಕಾರಿದ ಮೋದಿ, ‘ಕಾಂಗ್ರೆಸ್‌ನ ಶೆಹಜಾದಾ ರಾಮಮಂದಿರದ ಕುರಿತ ಸುಪ್ರೀಂಕೋರ್ಟ್‌ ತೀರ್ಪನ್ನೇ ಬದಲಾಯಿಸುವ ಮಾತಾಡುತ್ತಾರೆ. ಅವರು ರಾಮಮಂದಿರಕ್ಕೆ ಮತ್ತೆ ಬಾಬ್ರಿ ಬೀಗ ಹಾಕುವ ಕನಸು ಕಾಣುತ್ತಿದ್ದಾರೆ. ರಾಮಲಲ್ಲಾನನ್ನು ಮರಳಿ ಟೆಂಟ್‌ಗೆ ಕಳುಹಿಸಲು ಉದ್ದೇಶಿಸಿದ್ದಾರೆ ಎಂದು ಆರೋಪಿಸಿದರು.

ಹಿಂದೆ ಬಾಂಬ್‌ ಹಿಡಿದುಕೊಂಡು ನಮಗೇ ಹೆದರಿಸಲು ಯತ್ನಿಸುತ್ತಿದ್ದ ಭಯೋತ್ಪಾದನೆಯ ಆಶ್ರಯದಾತರು, ಇಂದು ಆಹಾರಕ್ಕಾಗಿಯೇ ಬೇಡುವ ಪರಿಸ್ಥಿತಿ ಇದೆ. ಪಾಕಿಸ್ತಾನದ ಕಥೆ ಮುಗಿದೇ ಹೋಗಿದ್ದರೂ ಅವರ ಪರ ಅನುಕಂಪ ಹೊಂದಿರುವ ಕಾಂಗ್ರೆಸ್‌ ಮತ್ತು ಎಸ್‌ಪಿ, ಅವರ ಬಳಿ ಪರಮಾಣು ಬಾಂಬ್‌ ಇದೆ, ‘ಅವರ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು’ ಎಂದು ನಮಗೇ ಎಚ್ಚರಿಕೆ ನೀಡುತ್ತಿದ್ದಾರೆ. ಆದರೆ ಹಾಲಿ ಭಾರತದಲ್ಲಿರುವುದು ದುರ್ಬಲ ಕಾಂಗ್ರೆಸ್‌ ಸರ್ಕಾರ ಅಲ್ಲ, ಬಲಿಷ್ಠ ಮೋದಿ ಸರ್ಕಾರ ಎಂಬುದು ಅವರಿಗೆ ಗೊತ್ತಿಲ್ಲವೇ?

";