ನಿಮ್ಮ ಸುದ್ದಿ ಬಾಗಲಕೋಟೆ
ತೋಟಗಾರಿಕಾ ಬೆಳೆಗಳ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿದೆ ಎಂದು ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಮಹಾನಿರ್ದೇಶಕ ಡಾ.ತ್ರಿಲೋಚನ್ ಮೊಹಾಪಾತ್ರ ಹೇಳಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿಂದು ಜರುಗಿದ ತೋವಿವಿಯ ೧೦ನೇ ಘಟಿಕೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆನ್‌ಲೈನ್ ಮೂಲಕ ಭಾಗವಹಿಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ೨,೧೫೬.೭೩ ಸಾವಿರ ಹೆಕ್ಟೆರ್ ವ್ಯಾಪ್ತಿ ಹೊಂದಿದ್ದು, ವಿಸ್ತೀರ್ಣದಲ್ಲಿ ೨ನೇ ಸ್ಥಾನದಲ್ಲಿದೆ. ೧೯,೧೮೪.೦೬ ಸಾವಿರ ಮಿಲಿಯನ್ ಟನ್‌ನಷ್ಟು ಉತ್ಪಾದನೆ ಇದ್ದು, ೮ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ತೋಟಗಾರಿಕೆ ವಿಸ್ತರಣೆಯ ವ್ಯಾಪ್ತಿ ಮಹತ್ವದ್ದಾಗಿದೆ. ಇದಕ್ಕಾಗಿ ಒಣ ಭೂಮಿಯಲ್ಲಿ ಮತ್ತು ತ್ಯಾಜ್ಯ ಭೂಮಿಯಲ್ಲಿ ತೋಟಗಾರಿಕೆಯ ಸಾಮರ್ಥ್ಯವನ್ನು ಅನ್ವೇಷಿಸಿ ಅಭಿವೃಧ್ದಿಪಡಿಸಬೇಕಾಗಿದೆ ಎಂದು ತಿಳಿಸಿದರು.
ತೋಟಗಾರಿಕೆಯು ಕರ್ನಾಟಕ ಉದಯೋನ್ಮುಖ ವಲಯಗಳಲ್ಲಿ ಪ್ರಮುಖ ಕ್ಷೇತ್ರವಾಗಿದ್ದು, ರಾಜ್ಯದ ಸುಮಾರು ೨೩ ಲಕ್ಷ ಕುಟುಂಬಗಳು ಇದರಲ್ಲಿ ತೊಡಗಿಕೊಂಡಿವೆ. ತೋಟಗಾರಿಕೆಯು ಸುಮಾರು ೨೧.೫ ಲಕ್ಷ ಹೆಕ್ಟೆರ್ ಪ್ರದೇಶವನ್ನು ಹೊಂದಿದ್ದು, ೧೯೧.೮೪ ಲಕ್ಷ ಟನ್ ತೋಟಗಾರಿಕಾ ಉತ್ಪನ್ನಗಳನ್ನು ಉತ್ಪಾದಿಸಿದೆ. ತೋಟಗಾರಿಕೆ ಉತ್ಪಾದನೆಯು ವರ್ಷವೀಡಿ ರೈತರನ್ನು ವಿಸ್ತçತ ಉದ್ಯೋಗದಲ್ಲಿ ತೊಡಗಿಸುತ್ತದೆ. ವರ್ಷದ ೮-೧೦ ತಿಂಗಳುಗಳಲ್ಲಿ ಹರಡಿಕೊಂಡಿರುವದರಿAದ ವರ್ಷದುದ್ದಕ್ಕೂ ಆದಾಯದ ಮೂಲವಾಗಿದೆ ಎಂದು ತಿಳಿಸಿದರು.
ಭಾರತವು ಕೃಷಿ ಉತ್ಪನ್ನಗಳ ರಪ್ತಿನಲ್ಲಿ ೭ನೇ ಸ್ಥಾನದಲ್ಲಿದ್ದು, ಹಣ್ಣು ಮತ್ತು ತರಕಾರಿಗಳ ಉತ್ಪಾದನೆಯಲ್ಲಿ ೨ನೇ ಸ್ಥಾನದಲ್ಲಿದೆ. ತೋಟಗಾರಿಕೆ ಬೆಳೆಗಳಾದ ಬಾಳೆಹಣ್ಣು ಮತ್ತು ಮಾವಿನೊಂದಿಗೆ ತಾಜಾ ತರಕಾರಿಗಳಾದ ಈರುಳ್ಳಿ, ಬಟಾಣಿ ಮತ್ತು ಆಲೂಗಡ್ಡೆಗಳ ರಫ್ತು ವೃದ್ದಿಸಿದೆ. ಅದೇ ರೀತಿ ಮಸಾಲೆಗಳು ಮತ್ತು ಹೂವುಗಳ ರಪ್ತು ಹೆಚ್ಚಿಸಿ ವಿದೇಶಿ ವಿನಿಮಯವನ್ನು ದ್ವಿಗುಣಗೊಳಿಸುವ ಭರವಸೆಯನ್ನು ಮೂಡಿಸಿದೆ. ಭಾರತವು ತೋಟಗಾರಿಕೆ ಬೆಳೆಗಳ ಉತ್ಪಾದನೆಯಲ್ಲಿ ಪ್ರಮುಖ ದೇಶವಾಗಿ ಹೊರಹೊಮ್ಮಿದ್ದು, ಕೃಷಿ ಆರ್ಥಿಕತೆಯಲ್ಲಿ ತೋಟಗಾರಿಕೆಯ ಪಾಲು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂದು ತಿಳಿಸಿದರು.
ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ದೇಶದ ೬ ವಿಶೇಷ ವಿಶ್ವವಿದ್ಯಾಲಯಗಳಲ್ಲಿ ೩ನೇ ತೋಟಗಾರಿಕೆ ವಿಶ್ವವಿದ್ಯಾಲಯವಾಗಿದೆ. ತೋಟಗಾರಿಕೆ ಅಭಿವೃದ್ದಿಯಲ್ಲಿ ಕರ್ನಾಟಕ ಅಭೂತಪೂರ್ವ ಪ್ರಗತಿ ಸಾಧಿಸಿದೆ. ಬಹಳ ಹಿಂದೆಯೇ ತೋಟಗಾರಿಕೆ ನಿರ್ದೇಶನಾಲಯ ಸ್ಥಾಪನೆ ಮತ್ತು ಇತ್ತೀಚಿನ ದಿನಗಳಲ್ಲಿ ತೋಟಗಾರಿಕೆ ವಿಜ್ಞಾನಕ್ಕೆ ಬೆಂಬಲ ನೀಡಿರುವುದು ಸ್ಪಷ್ಟವಾಗಿದೆ. ರಾಷ್ಟಿçÃಯ ತೋಟಗಾರಿಕೆ ಮಿಷನ್‌ವು ರಾಜ್ಯದ ತೋಟಗಾರಿಕೆಯ ಪ್ರಗತಿಗೆ ದೊಡ್ಡ ಉತ್ತೇಜನ ನೀಡಿದೆ.
ಭಾರತದಲ್ಲಿಯೇ ತೋಟಪಟ್ಟಿ ಬೆಳೆಗಳ ವಿಸ್ತೀರ್ಣದಲ್ಲಿ ಮೊದಲನೇ ಮತ್ತು ಉತ್ಪಾದನೆಯಲ್ಲಿ ೨ನೇ ಸ್ಥಾನದಲ್ಲಿದೆ. ಬಾಗಲಕೋಟೆ ತೋವಿವಿಯಲ್ಲಿ ಸಮಗ್ರವಾದ ಸಂಶೋಧನೆ ಮತ್ತು ಅಭಿವೃದ್ದಿಯು ತೋಟಗಾರಿಕೆ ಕ್ಷೇತ್ರದಲ್ಲಿ ಉತ್ಪಾದಕತೆ, ಉತ್ತಮ ಗುಣಮಟ್ಟ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಪ್ರಮುಖವಾಗಿದೆ. ತೋಟಗಾರಿಕೆಯಲ್ಲಿ ಸಾರ್ವಜನಿಕ ಸಂಶೋಧನೆಗೆ ಕರ್ನಾಟಕ ರಾಜ್ಯವು ಹೆಚ್ಚಿನ ಬೆಂಬಲವನ್ನು ನೀಡುತ್ತಿದೆ. ರಾಜ್ಯದಲ್ಲಿ ತೋಟಗಾರಿಕೆ ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲದ ಕೊರತೆ ಇರುವುದು ಕಂಡುಬAದಿದೆ. ವಿಶ್ವವಿದ್ಯಾಲಯ ಕೇವಲ ೧೨ ವರ್ಷಗಳಲ್ಲಿ ಐಸಿಎಆರ್-ಜೆಆರ್‌ಎಫ್ ಪ್ರಶಸ್ತಿಗಳಲ್ಲಿ ಪ್ರಥಮ ಸ್ಥಾನವನ್ನು ಸತತ ೪ ಬಾರಿ ಪಡೆದುಕೊಂಡಿದ್ದು ಹೆಮ್ಮೆಯ ವಿಷಯವೆಂದರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಮತ್ತು ರೇಷ್ಮೆ ಸಚಿವರು ಹಾಗೂ ಬಾಗಲಕೋಟೆ ತೋವಿವಿಯ ಸಹಕುಲಪತಿಗಳಾದ ಆರ್.ಶಂಕರ, ತೋಟಗಾರಿಕೆ ವಿವಿಯ ಕುಲಪತಿ ಡಾ.ಕೆ.ಎಂ.ಇಂದಿರೇಶ ಸೇರಿದಂತೆ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯರು, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ಅಧ್ಯಯನ ಮಂಡಳಿ ಸದಸ್ಯರು, ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಶಾಸಕ ವೀರಣ್ಣ ಚರಂತಿಮಠ ಮತ್ತಿತರರು ಉಪಸ್ಥಿತರಿದ್ದರು.