This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Agriculture NewsLocal NewsNational NewsState News

ಮತ್ತೆ ಮುಂಗಾರು ಚುರುಕು; ಸೆಪ್ಟೆಂಬರ್‌ನಲ್ಲಿ ಭರ್ಜರಿ ಮಳೆ!

ಮತ್ತೆ ಮುಂಗಾರು ಚುರುಕು; ಸೆಪ್ಟೆಂಬರ್‌ನಲ್ಲಿ ಭರ್ಜರಿ ಮಳೆ!

ಬೆಂಗಳೂರು:

ಮುಂದಿನ 24 ಗಂಟೆಯಲ್ಲಿ ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ (Rain News) ಸಾಧ್ಯತೆ ಇದೆ. ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಮಳೆಯಾಗುವ (Weather report) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಗುಡುಗು ಮುನ್ನೆಚ್ಚರಿಕೆ
ಮುಂದಿನ 48 ಗಂಟೆಯೊಳಗೆ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾಧ್ಯತೆ ಇದೆ. ಹೀಗಾಗಿ ಮರದಡಿ ನಿಲ್ಲದಂತೆ ಸೂಚಿಸಲಾಗಿದೆ. ಮೀನುಗಾರರಿಗೆ ಯಾವುದೇ ಎಚ್ಚರಿಕೆ ಇಲ್ಲ. ಮುಂದಿನ 24ಗಂಟೆಯಲ್ಲಿ ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ.

ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಗುಡುಗು ಸಹಿತ ತುಂತು ಮಳೆಯಾಗಲಿದೆ. ಗರಿಷ್ಠ ಉಷ್ಣಾಂಶ 32 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಸೆಪ್ಟೆಂಬರ್‌ 2ನೇ ವಾರದಿಂದ ಭಾರಿ ಮಳೆ
ಆಗಸ್ಟ್‌ 27ರಿಂದ ಸೆಪ್ಟೆಂಬರ್‌ವರೆಗೆ 7ರವರೆಗೆ ಕರ್ನಾಟಕದಲ್ಲಿ ಮಳೆಯು ಸಾಧಾರಣವಾಗಿರಲಿದೆ. ಆದರೆ ಸೆಪ್ಟೆಂಬರ್ 8 ರಿಂದ ಭಾರಿ ಮಳೆಯಾಗುವ ನಿರೀಕ್ಷೆಯಿದೆ . ಮಳೆಯ ಪ್ರಮಾಣ ಹೆಚ್ಚಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಒಳನಾಡಿನಲ್ಲಿ ಅಲ್ಲಲ್ಲಿ ಮಳೆ
ರಾಜ್ಯದಲ್ಲಿ ಶನಿವಾರ ನೈರುತ್ಯ ಮುಂಗಾರು ಕರಾವಳಿಯಲ್ಲಿ ದುರ್ಬಲವಾಗಿತ್ತು, ಒಳನಾಡಿನಲ್ಲಿ ಸಾಧಾರಣವಾಗಿತ್ತು. ರಾಜ್ಯದ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ರಾಯಚೂರಿನ ಸಿಂಧನೂರಲ್ಲಿ 5 ಸೆಂ.ಮೀ, ಗುಬ್ಬಿ , ಚಿಕ್ಕನಹಳ್ಳಿ ತಲಾ 3 ಸೆಂ.ಮೀ ಮಳೆಯಾಗಿದೆ.

ಬೇವೂರು, ಯಲಬುರ್ಗಾ, ಕವಡಿಮಟ್ಟಿ, ಹೊಸಕೋಟೆ, ಶೃಂಗೇರಿ ಎಚ್‌ಎಂಎಸ್, ಬೆಳ್ಳೂರು, ದಾವಣಗೆರೆಯಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಕುಕ್ಕನೂರು, ಮುನಿರಾಬಾದ್, ರಾಯಚೂರು, ದೇವದುರ್ಗ , ಶೋರಾಪುರ, ಚನ್ನಗಿರಿ ಸೇರಿದಂತೆ ಶಿವಮೊಗ್ಗ, ಕಡೂರು, ಕೊಟ್ಟೂರಿನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

";