ಎಸ್ಸೆಸ್ಸೆಲ್ಸಿ ಪರೀಕ್ಷೆ
ನಿಮ್ಮ ಸುದ್ದಿ ಬಾಗಲಕೋಟೆ
ಸೋಮವಾರದಿಂದ ಆರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಸಂಗಮೇಶ್ವರ ಪರೀಕ್ಷೆ ಕೇಂದ್ರದಲ್ಲಿ ಶೇ.೮೦ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಸಮವಸ್ತ್ರ ಕಂಡು ಬರಲಿಲ್ಲ.
ಸರಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಆಗಮಿಸುವ ಪರೀಕ್ಷಾರ್ಥಿಗಳು ಆಯಾ ಶಾಲೆಯ ಸಮವಸ್ತ್ರದೊಂದಿಗೆ ಬರಬೇಕು. ಸಮವಸ್ತç ಲಭ್ಯವಿರದ ಕಡೆ ಸಾಮಾನ್ಯ ಧಿರಿಸಿನಲ್ಲಿ ಬರಲಿದ್ದಾರೆ ಎಂದು ತಿಳಿಸಿತ್ತು. ಜತೆಗೆ ಕೇಂದ್ರದ ಮುಖ್ಯ ಅಧೀಕ್ಷಕರು ಪೂರ್ವ ಸಿದ್ದತೆ ಸಭೆಯಲ್ಲೂ ಸಮವಸ್ತç ಕಡ್ಡಾಯವಲ್ಲ ಎಂದು ಸೂಚಿಸಿದ್ದರಿಂದ ಬಹುತೇಕ ವಿದ್ಯಾರ್ಥಿಗಳು ಸಾಮಾನ್ಯ ದಿರಿಸಿನಲ್ಲಿ ಆಗಮಿಸಿದ್ದರು.
ಪರೀಕ್ಷೆಗೆ ಹಿಜಾಬ್ ಧಾರಣೆ ನಿರಾಕರಿಸಿದ್ದರೂ ಹಿಜಾಬ್ ಧರಿಸಿಕೊಂಡು ಬಂದ ಇಬ್ಬರು ವಿದ್ಯಾರ್ಥಿನಿಯರು ಪುನ: ಮನೆಗೆ ತೆರಳಿ ಹಿಜಾಬ್ ತೆಗೆದು ಪರೀಕ್ಷೆಗೆ ಹಾಜರಾದರೆ ಮತ್ತಿಬ್ಬರು ವಿದ್ಯಾರ್ಥಿನಿಯರು ಕೇಂದ್ರದ ಹೊರಗೆ ಹಿಜಾಬ್ ತೆಗೆದು ಪರೀಕ್ಷೆ ಕೋಣೆ ಪ್ರವೇಶಿಸಿದರು. ಕೇಂದ್ರದಲ್ಲಿ ಹಿಜಾಬ್ ತೆಗೆಯಲು ಪ್ರತ್ಯೇಕ ವ್ಯವಸ್ಥೆ ಮಾಡಿದ್ದೇವೆಂದು ಹೇಳಿದ್ದರೂ ಅಂತಹ ವ್ಯವಸ್ಥೆ ಕಂಡು ಬರಲಿಲ್ಲ.
ಪರೀಕ್ಷೆಗೆ ಆಗಮಿಸುವ ವಿದ್ಯಾರ್ಥಿಗಳನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಥರ್ಮಲ್ ಸ್ಕಾö್ಯನ್ ಮಾಡಲಾಗುವುದು ಎಂದಿದ್ದರೂ ಕಾಟಾಚಾರಕ್ಕೆ ಎಂಬಂತಾಗಿತ್ತು. ಬಹುತೇಕ ವಿದ್ಯಾರ್ಥಿಗಳು ಸೇರಿದಂತೆ ಪರೀಕ್ಷೆ ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಮಾಸ್ಕ್ ಧರಿಸಿರಲಿಲ್ಲ.
ಪರೀಕ್ಷೆಗೆ ಬರೆದ ಕುಬ್ಜ ವಿದ್ಯಾರ್ಥಿ
ಸ್ಥಳೀಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಕೇಂದ್ರದಲ್ಲಿ ಸಮೀಪದ ಸೂಳೇಬಾವಿ ಸರಕಾರಿ ಪ್ರೌಢಶಾಲೆಯ ಮನೋಜ ಹಿರೇಮಠ ಎಂಬ ವಿದ್ಯಾರ್ಥಿ ಪರೀಕ್ಷೆ ಕೇಂದ್ರದಲ್ಲಿ ಎಲ್ಲರ ಗಮನ ಸೆಳೆದನು. ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎಚ್.ಬೀರಕಬ್ಬಿ ವಿದ್ಯಾರ್ಥಿಯನ್ನು ಕೇಂದ್ರಕ್ಕೆ ಬರಮಾಡಿಕೊಂಡರು. ಈ ಕೇಂದ್ರದಲ್ಲಿ ೫ ವಿದ್ಯಾರ್ಥಿಗಳು ವಿಶೇಷಚೇತನರಿದ್ದು ಅವರಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೋಣೆ ವ್ಯವಸೆ ಮಾಡಲಾಗಿತ್ತು.