*ವಿಶ್ವ ವಿಕ
ಬಾಗಲಕೋಟೆ
ಪ್ರತಿಯೊಬ್ಬ ವಿಕಲಚೇತನರಲ್ಲಿ ಒಂದೊಂದು ವಿಧಧ ಶಕ್ತಿ, ಕೌಶಲ್ಯವನ್ನು ಹೊಂದಿದ್ದು, ಅವರಲ್ಲಿ ಆತ್ಮಸ್ಥೈರ್ಯ ತುಂಬಿ ಪ್ರೋತ್ಸಾಹಿಸುವ ಕಾರ್ಯವಾಗಬೇಕೆಂದು ಸಂಸದ ಪಿ.ಸಿ.ಗದ್ದಗೌಡರ ಹೇಳಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವಿಕಲಚೇತನರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು, ಕ್ಷೇಮಾಭಿವೃದ್ದಿ ಸಂಘಗಳ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ವಿಕಲಚೇತನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲಚೇತನರು ಇಂದು ಎಲ್ಲ ಕ್ಷೇತ್ರಗಳಲ್ಲಿ ಮುಖ್ಯವಾಹಿನಿಗೆ ಬರುತ್ತಿರುವುದನ್ನು ನೋಡುತ್ತಿದ್ದೇವೆ. ಅಂಗವೈಕಲ್ಯವಿದ್ದರೂ ಅವರಲ್ಲಿ ಏಕಾಗ್ರತೆ, ಶಕ್ತಿ ಅವರಿಲ್ಲಿದೆ. ದೇಶದ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಢುವ ಮೂಲಕ ದೇಶದ ಹೆಸರು ತಂದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರ ವಿಕಲಚೇತನರಿಗೆ ವಿವಿಧ ಸೌಲಭ್ಯಗಳನ್ನು ನೀಡುವ ಮೂಲಕ ಶಕ್ತಿ ತುಂಬುವ ಕೆಲಸ ಮಾಡುತ್ತಿವೆ. ಜಿಲ್ಲೆಯಲ್ಲಿರುವ ವಿಕಲಚೇತನರನ್ನು ಸರ್ವೇ ಮಾಡಿ ಎಲ್ಲರಿಗೂ ಸೌಲಭ್ಯ ಒದಗಿಸುವ ಕಾರ್ಯ ಮಾಡಲಾಗುವುದೆಂದು ತಿಳಿಸಿದರು.
ಬೀಳಗಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿ ಕೆಲವೊಂದು ಕಾರಣಗಳಿಂದ ಅಂಗವೈಕಲ್ಯದಿಂದ ಹುಟ್ಟುತ್ತಿದ್ದಾರೆ. ಆದರೆ ದೇವರು ಅವರಿಗೆ ವಿಶೇಷ ಶಕ್ತಿಯನ್ನು ಕೊಟ್ಟಿರುತ್ತಾನೆ. ಪಾಲಕರು ಇದನ್ನು ಅರಿತು ಅವರು ಕೂಡಾ ಸ್ವಾವಲಂಬಿ ಬದುಕು ನಡೆಸಯವಂತೆ ಮಾಡಬೇಕು. ಕಿರಸೂರಿನ ದೀಲಿಪ್ ರೊಳ್ಳಿ ಎಂಬ ಅಂದತ್ವಹೊಂದಿದ ಯುವಕ ಸ್ನಾಕತೋತ್ತರವರೆಗೆ ಶಿಕ್ಷಣ ಮುಗಿಸಿ, ಸದ್ಯ ಜಿಲ್ಲಾ ಖಜಾನೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿರುವುದು ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ ವಿಕಲಚೇತನರ ಬಗ್ಗೆ ಹಿಂದೆ ತಾತ್ಸಾರ ಭಾವನೆಯಿಂದ ನೋಡುತ್ತಿದ್ದರು. ಈಗ ಆ ದೃಷ್ಠಿ ಕೋನ ಬದಲಾವಣೆಯಾಗಿದೆ. ಅವರು ಸಹ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಅಂತದೊಂದು ಶಕ್ತಿ ದೇವರು ಅವರಿಗೆ ನೀಡಿರುತ್ತಾನೆ ಎಂದರು.
ಜಿ.ಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ ಮಾತನಾಡಿ ಮನುಷ್ಯನಿಗೆ ಯಾವುದೇ ಒಂದು ಕೊರತೆ ಇದೆ ಎಂದರೆ ಅದರ ಜೊತೆ ಇನ್ನೊಂದು ಶಕ್ತಿ ಕೊಟ್ಟಿರುತ್ತಾನೆ. ಒಂದು ಕೈ ಇಲ್ಲವಾದರೆ ಎರಡು ಕೈಗಳ ಶಕ್ತಿ ಒಂದೇ ಕೈಗೆ ದೇವರು ಕೊಟ್ಟಿರುತ್ತಾನೆ. ದೌರ್ಭಲ್ಯಕ್ಕೆ ಮತ್ತೊಂದು ಶಕ್ತಿ ಇದ್ದೇ ಇರುತ್ತದೆ. ಕೊರತೆ ಇದೇ ಎಂದು ಹಿಂದಕ್ಕೆ ಹೋಗದೇ ಮುಂದಿನ ಗುರಿಯತ್ತ ಸಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಚ್.ವಾಯ್.ಮೇಟಿ ಅವರು ವಿಕಲಚೇತನರು ಸಹ ಆತ್ಮಸ್ಥೈರ್ಯ ಕಳೆದುಕೊಳ್ಳದೇ ಮುಂದೆ ಬರುತ್ತಿದ್ದಾರೆ. ಯಾವುದೇ ರೀತಿಯ ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗುವದಿಲ್ಲ. ಛಲವೊಂದಿದ್ದರೆ ಸಾಕು ಎಂದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದವನ್ನು ಸನ್ಮಾನಿಸಲಾಯಿತು. ಅಲ್ಲದೇ ಕ್ರೀಡೆ ಹಾಗೂ ಸಾಂಸ್ಕøತಿ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಪ್ರಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಅಮರೇಶ ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಮುಖ್ಯ ಯೋಜನಾಧಿಕಾರಿ ಪುನಿತ್ ಸೇರಿದಂತೆ ಎಸ್.ಎಚ್.ಗುಳೇದ ಹಾಗೂ ಇತರರು ಉಪಸ್ಥಿತರಿದ್ದರು. ವಿಕಲಚೇತನರ ಕಲ್ಯಾಣಾಧಿಕಾರಿ ಸವಿತಾ ಕಾಳೆ ಸ್ವಾಗತಿಸಿದರು. ಪಾಟೀಲ ವಂದಿಸಿದರು, ಹುಚ್ಚೇಶ ಲಾಯದಗುಂದಿ ನಿರೂಪಿಸಿದರು. ನಂತರ ವಿಕಲಚೇತನ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.