ಮಂಡ್ಯ: ನನಗೆ ಜೀವ ಬೆದರಿಕೆ ಇದ್ದರೂ ನಾನು ಹೋರಾಡಿದ್ದೇನೆ. ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಡಿದ್ದಕ್ಕೆ ಬೆದರಿಕೆ ಕರೆ ಮಾಡಿದ್ದರು ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಕಾವೇರಿ ಭವನದಲ್ಲಿ ಆಯೋಜಿಸಿದ್ದ ತಮ್ಮ ಅಧಿಕಾರ ಅವಧಿಯ ಕೊನೆ ದಿಶಾ ಸಭೆಯಲ್ಲಿ ಮಾತನಾಡಿದ ಅವರು, ನನಗೆ ನಿರಂತರವಾಗಿ ಜೀವ ಬೆದರಿಕೆ ಕರೆ ಬರುತ್ತಿದ್ದವು. ಕೆಆರ್ಎಸ್ ಉಳಿವಿಗಾಗಿ ಅಕ್ರಮದ ವಿರುದ್ಧ ಹೋರಾಡಿದ್ದೇನೆ. ಹೋರಾಟದ ಫಲವಾಗಿ ಹೈಕೋರ್ಟ್ ಗಣಿಗಾರಿಕೆ ನಿಷೇಧಿಸಿದೆ ಎಂದು ವಿವರಿಸಿದರು.
ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ದೆಹಲಿ ಪ್ರವಾಸದ ಬಗ್ಗೆ ಸುಮಲತಾ ಪ್ರತಿಕ್ರಿಯೆ ನೀಡಿದ್ದು, ಹೆಚ್.ಡಿ.ಕುಮಾರಸ್ವಾಮಿ ಏನು ಬೇಕಾದರೂ ಹೇಳಿಕೊಳ್ಳಲಿ. ಅಂತೆ ಕಂತೆಗಳನ್ನ ನಾವು ಕೇಳಿಕೊಂಡೇ ಬರುತ್ತಿದ್ದೇವೆ. ಅಂತಿಮವಾಗುವವರೆಗೆ ಏನೂ ಹೇಳುವುದಕ್ಕೆ ಆಗಲ್ಲ. ನನ್ನ ಮುಂದೆ ಹಲವಾರು ಆಯ್ಕೆಗಳಿವೆ. ನನಗೆ ಬೇರೆಡೆ ಟಿಕೆಟ್ ಪಡೆಯುವುದು ಕಷ್ಟವಲ್ಲ. ನಾನು ಕ್ಷೇತ್ರ ಉಳಿಸಿಕೊಳ್ಳಬೇಕು ಅಂತಾ ಹೇಳಿದ್ದೇನೆ.
ಅಂತಿಮ ನಿರ್ಧಾರ ಆಗುವವರೆಗೂ ಏನೂ ಹೇಳಲ್ಲ ಎಂದಿದ್ದಾರೆ.ಈ ಬಾರಿ ಲೋಕಸಭೆಗೆ ನನ್ನ ಸ್ಪರ್ಧೆ ಖಚಿತ. ಕಳೆದ 5 ವರ್ಷಗಳ ದಿಶಾ ಸಭೆಗಳಲ್ಲಿ ಹಲವು ವಿಷಯ ಚರ್ಚೆಯಾಗಿದೆ. ಚರ್ಚೆಯಾದ ವಿಷಯ ಎಷ್ಟರ ಮಟ್ಟಿಗೆ ಜಾರಿಯಾಗಿದೆ ಎನ್ನುವುದರ ಬಗ್ಗೆ ವಿವರ ಕೇಳಬೇಕು ಎಂದು ಸೂಚಿಸಿದರು.