ಬಾಗಲಕೋಟೆ
ಹಿಂದು-ಮುಸ್ಲಿಂರ ಭಾವೈಕ್ಯದ ಹಬ್ಬವಾದ ಮೊಹರಂನ್ನು ಜಿಲ್ಲಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಮೊಹರಂ ಮುಸ್ಲಿಂ ಬಾಂಧವರ ಹಬ್ಬವಾದರೂ ಬಹುತೇಕ ಹಿಂದುಗಳು ಆಚರಿಸುವುದನ್ನು ಈ ಭಾಗದಲ್ಲಿ ಕಾಣುತ್ತೇವೆ. ಕೆಲವೆಡೆ ಮುಸ್ಲಿಂ ಸಮುದಾಯ ಇಲ್ಲದ ಗ್ರಾಮಗಳಲ್ಲೂ ಮೊಹರಂನ್ನು ಹಿಂದುಗಳೇ ಶ್ರದ್ಧೆಯಿಂದ ಆಚರಿಸುವುದು ವಿಶೇಷತೆ ಪಡೆದಿದೆ.
ಗುದ್ದಲಿ ಹಾಕಿದಾಗಿನಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮೊಹರಂ ಹಬ್ಬದ ಸಡಗರ ಮನೆ ಮಾಡಿತ್ತು. ನಾನಾ ಕಡೆಗಳಲ್ಲಿ ಹಿಂದು-ಮುಸ್ಲಿಂರು ಅಲಾಯಿ ದೇವರನ್ನು ಪ್ರತಿಷ್ಠಾಪಿಸಿದ್ದರು. ಪ್ರತಿದಿನವೂ ಸಕ್ಕರೆ, ಬೆಲ್ಲ, ಕೊಬ್ಬರಿ, ಲೋಹದ ಕುದುರೆ, ಬಟ್ಟೆಯನ್ನು ಕಾಣಿಕೆ ರೂಪದಲ್ಲಿ ಸಮರ್ಪಿಸಿ ಪೂಜೆ ಸಲ್ಲಿಸಿದ್ದರು.
ಮೊಹರಂ ಹಿನ್ನೆಲೆಯಲ್ಲಿ ಐದು ದಿನದಿಂದ ಅಲಿದೂಲಾ ಘೋಷಣೆ, ಹುಲಿ ವೇಷಧಾರಿಗಳ ಆಕರ್ಷಕ ಹೆಜ್ಜೆ, ಅಳ್ಳೊಳ್ಳಿ ಬಾವಾ ವೇಷಧಾರಿಗಳ ಕುಣಿತ ಗಮನ ಸೆಳೆದಿತ್ತು. ಬುಧವಾರ ಬೆಳಗ್ಗೆಯಿಂದಲೇ ದೇವರ ಮೆರವಣಿಗೆ ಆರಂಭಗೊಂಡಿತು. ಸಂಜೆ ನಾನಾ ವಿಧಿ-ವಿಧಾನಗಳು ನಡೆಯಲಿವೆ.