This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Education NewsLocal NewsState News

ಕೃಷಿ ತಜ್ಞ ಲಿಂ ನಾಗರಾಳ ರವರ ಪಾಂಡಿತ್ಯ ಅಮೋಘವಾದದ್ದು : ನಾಡಗೌಡರ

ಕೃಷಿ ತಜ್ಞ ಲಿಂ ನಾಗರಾಳ ರವರ ಪಾಂಡಿತ್ಯ ಅಮೋಘವಾದದ್ದು : ನಾಡಗೌಡರ

ಕೃಷಿ ತಜ್ಞ ಲಿಂ ನಾಗರಾಳ ರವರ ಪಾಂಡಿತ್ಯ ಅಮೋಘವಾದದ್ದು : ನಾಡಗೌಡರ

ಹುನಗುಂದ :

ಸಾಹಿತ್ಯ, ಜನಪದ ಸಾಹಿತ್ಯ, ವಚನ ಸಾಹಿತ್ಯ, ಕೃಷಿ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಪದವಿ ಪ್ರಾಧ್ಯಾಪಕರಿಗಿಂತಲೂ ಮಿಗಿಲಾದ ಪಾಂಡಿತ್ಯದ ಅನುಭವವನ್ನು ಲಿಂ. ಡಾ|| ಮಲ್ಲಣ್ಣ ನಾಗರಾಳ ರವರ ಕಾರ್ಯ ಅಮೋಘವಾದದ್ದು ಎಂದು ಹುನಗುಂದದ ಸಾಹಿತಿ ಡಾ ನಾಗರಾಜ ನಾಡಗೌಡ ಹೇಳಿದರು.

ಶ್ರೀ ವಿಜಯ ಮಹಾಂತೇಶ ಪದವಿಪೂರ್ವ ಕಾಲೇಜಿನಲ್ಲಿ ಹೊನ್ನಗುಂದ ಸಾಹಿತ್ಯ ವೇದಿಕೆ ಹಮ್ಮಿಕೊಂಡ ಲಿಂ. ಡಾ|| ಮಲ್ಲಣ್ಣ ನಾಗರಾಳ ಅವರ ನುಡಿನಮನ ಕರ‍್ಯಕ್ರಮದಲ್ಲಿ ಮಾತನಾಡಿ. ಕನಿಷ್ಟ ಪ್ರಮಾಣದ ವಿದ್ಯಾಭಾಸ ಮಾಡಿ ಪ್ರಮುಖ

ಕೃಷಿ ಕಾಯಕದ ಜೊತೆಗೆ ಬಹುತೇಕ ಮಠದ ಪೂಜ್ಯರ ಜೊತೆಗೆ ಒಡನಾಡಿಯಾಗಿ, ವಚನ ತತ್ವಗಳನ್ನು ಪಾಲಿಸುತ್ತ ಶರಣ ಕಾಯಕದಲ್ಲಿ ಕಾಲ ಕಳೆದರು.

ಜೊತೆಗೆ ಘನಮಠ ಶಿವಯೋಗಿಗಳರವರ ಕೃಷಿ ಜ್ಞಾನ ಪ್ರದೀಪ್ತಿ ಕೆ ಯನ್ನು ಜೀವನದುದ್ದಕ್ಕೂ ಬಳಸಿಕೊಂಡು ತಮ್ಮ ಭೂಮಿ ಜತೆ ಬಹುತೇಕ ರೈತರ ಭೂಮಿಗೆ ಸ್ವಯಂ ಪ್ರೇರಣೆಯಿಂದ ಹೋಗಿ ಭೂಮಿ ಸಮತೋಲನ. ಗುಂಡಾವರ್ತಿ, ಓಡುವ ನೀರನ್ನು ತಡೆಯುವುದು ಮತ್ತು ಬಿದ್ದ ನೀರು ಇಂಗುವoತೆ ಕೃಷಿ ಜ್ಙಾನವನ್ನು ಲಿಂ. ಮಲ್ಲಣ್ಣನವರು ಮೈಗೂಡಿಸಿಕೊಂಡು ಅವರೊಬ್ಬ ವಿಶೇಷ ವ್ಯಕ್ತಿಯಾಗಿದ್ದರು ಎಂದು ಹುನಗುಂದದ ಸಾಹಿತಿ ಡಾ|| ನಾಗರಾಜ ನಾಡಗೌಡ ತಿಳಿಸಿದರು.

ಹುನಗುಂದದ ಇಂಗ್ಲಿಷ್ ಪ್ರಾಧ್ಯಾಪಕ ಶ್ರೀಶೈಲ ಗೊಲಗೊಂಡ ಮಾತನಾಡಿ ಅವರು ಮಾಡಿದ ಸಮಾಜ ಸೇವೆ, ಶರಣ ಜೀವನ ಕೃಷಿ ತತ್ವಜ್ಞಾನ. ಅವರು ಒಬ್ಬ ಸಂಶೋಧಕರಾಗಿ ಮಾಡಿದ ಮಹತ್ವದ ಬಗ್ಗೆ ಮುಂದಿನ ಪೀಳಿಗೆಗೆ ಮನದಟ್ಟುವಂತೆ ಮುದ್ರಣಗಳು ಆಗಬೇಕು ಎಂದು ತಿಳಿಸಿದರು.

ಹುನಗುಂದದ ನ್ಯಾಯವಾದಿ ಸಾಹಿತಿ ಮಹಾಂತೇಶ ಅವಾರಿ ಮಾತನಾಡಿ ಲಿಂ. ಮಲ್ಲಣ್ಣ ನಾಗರಾಳ ಅವರು ಸ್ಮರಣೆ ನೆನಪು ಬಸವ ತತ್ವ ಪಾಲನೆ ಜೊತೆಗೆ ನೆಲ, ನುಡಿ, ಸಂಸ್ಕçತಿಯನ್ನು ಬದುಕಿನಲ್ಲಿ ರೂಢಿಸಿಕೊಂಡು ಅವರೊಬ್ಬ ಮಾದರಿ ವ್ಯಕ್ತಿಯಾಗಿದ್ದರು ಎಂದರು.

ಶಿಕ್ಷಕ ಪ್ರಭು ಮಾಲಗಿತ್ತಿಮಠ , ತಾಲೂಕಿ ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ. ಉಪನ್ಯಾಸಕ ರವಿ ಹಾದಿಮನಿ ಮಾತನಾಡಿದರು.

ಹೊಸವೇ ಅಧ್ಯಕ್ಷ ಸಂಗಮೇಶ ಮುಡಪಲದಿನ್ನಿ ಅಧ್ಯಕ್ಷತೆ ವಹಿಸಿದ್ದರು ಲಿಂ. ಡಾ| ಮಲ್ಲಣ್ಣ ನಾಗರಾಳ ಅವರ ಭಾವಚಿತ್ರಕ್ಕೆ ಪುಷ್ಪಸಮರ್ಪಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕಾಲೇಜು ಪ್ರಾಚರ‍್ಯ ಎಸ್. ಎಸ್. ಬೋಳಿಶಟ್ಟರ ಮಹಾಂತೇಶ ನಾಗರಾಳ, ವಿರೇಶ ಕುರ್ತಕೋಟಿ, ಡಾ| ನಾಗರತ್ನ ಭಾವಿಕಟ್ಟಿ ಶೈಲಾ ಜಿಗಳೂರ,
ಸಂಗಮೇಶ ಹೊದ್ಲೂರ, ಬಸವರಾಜ ಕಣ್ಣೂರ, ಎಸ್ ಎಸ್.ಮುಳ್ಳೂರ, ಶಶಿಧರ ದರಗಾದ ಹಾಗೂ ಜಗಧೀಶ ಹದ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ಶಿಕ್ಷಕಿ ಗೀತಾ ತಾರಿವಾಳ ಪ್ರಾರ್ಥಿಸಿದರು ಮಹಿಬೂಬ ಚಿತ್ತರಗಿ ಸ್ವಾಗತಿಸಿದರು ಜಗದೀಶ ಹಾದಿಮನಿ ವಂದಿಸಿದರು

Nimma Suddi
";