ಬಾಗಲಕೋಟೆ
ಪ್ರಾಥಮಿಕ ಶಿಕ್ಷಣವು ಮಕ್ಕಳ ಭವಿಷÀ್ಯದ ತಳಪಾಯವಾಗಿರುವುದರಿಂದ ಅದರ ಪ್ರಾರಂಭದ ಹಂತವಾಗಿರುವ ನಲಿಕಲಿ ತರಗತಿಯು ಅತ್ಯಂತ ಭದ್ರ ಬುನಾದಿಯಾಗಿದೆ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸಂಗಪ್ಪ ಚಲವಾದಿ ಹೇಳಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ನಾಗೂರ ಕ್ಲಸ್ಟರ್ ಮಟ್ಟದ ನಲಿ-ಕಲಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ನಲಿ-ಕಲಿ ಎಂಬುದು ಸರಕಾರಿ ಶಾಲೆಗಳಲ್ಲಿ ಅಳವಡಿಸಿದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಮಕ್ಕಳ ಶೈಕ್ಷಣಿಕ ಭವಿ?À್ಯ ನಿರ್ಮಾಣ ಮಾಡುವಲ್ಲಿ ಈ ಹಂತದ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದರು.
ಅತ್ಯಂತ ಪರಿಣಾಮಕಾರಿ ಬೋಧನಾ ಕ್ರಮವಾದ ನಲಿ-ಕಲಿಯು ಮಕ್ಕಳ ಸ್ನೇಹಿ, ಚಟುವಟಿಕೆ ಆಧಾರಿತ ವಿಧಾನವಾಗಿದ್ದು ಮಕ್ಕಳು ತಾವು ಕಲಿಕೆಯ ಯಾವ ಹಂತದಲ್ಲಿದ್ದೇವೆ ಎಂದು ಸ್ವತಃ ಗುರುತಿಸಿಕೊಂಡು ಮುಂದಿನ ಹಂತಕ್ಕೆ ತಾವೇ ಮುಂದುವರಿಯುವ ಅವಕಾಶವಿದೆ. ಅವರಿಗೆ ಸುಗಮಕಾರರಾಗಿ ಶಿಕ್ಷಕರು ತಮ್ಮ ಜವಾಬ್ದಾರಿ ನಿರ್ವಹಿಸಬೇಕಾಗಿದೆ. ಆ ನಿಟ್ಟಿನಲ್ಲಿ ತಾವು ಕಂಡುಕೊAಡ ಕ್ಲಿ?À್ಟತೆಗಳುನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ವೇದಿಕೆಯಾಗಿ ಈ ಸಮಾಲೋಚನಾ ಸಭೆ ಮಹತ್ವದ್ದಾಗಿದೆ ಎಂದು ಹೇಳಿದರು.
ಸಂಪನ್ಮೂಲ ಶಿಕ್ಷಕರಾಗಿ ಆಗಮಿಸಿದ್ದ ಅಜೀಂ ಪ್ರೇಮಜೀ ಫೌಂಡೇಶನ್‌ನ ಶ್ರೀಕಾಂತ, ಪ್ರಾಥಮಿಕ ಹಂತದಿAದಲೇ ಇಂಗ್ಲೀ?Àನ್ನು ಅಳವಡಿಸಿದ ಪರಿಣಾಮ ಶಿಕ್ಷಕರಿಗೆ ಪೂರಕ ತರಬೇತಿ ಇಲಾಖೆ ನೀಡಿದ್ದರೂ ಒಂದ?ÀÄ್ಟ ಸಮಸ್ಯೆಗಳು ಕಂಡು ಬರುತ್ತವೆ. ಅವುಗಳನ್ನು ಮುಕ್ತವಾಗಿ ಚರ್ಚಿಸುವ ಮೂಲಕ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.
ಶಿಕ್ಷಕರಾದ ಎಂ.ಜಿ.ಬಡಿಗೇರ, ಎಸ್.ಎಸ್.ಲಾಯದಗುಂದಿ, ರತ್ನಾ ಸೋಂಪೂರ, ಎಸ್.ಎಂ.ಮೇಟಿ, ದ್ರಾಕ್ಷಾಯಣಿ ಜುಟ್ಟಲ, ಹೇಮಾ ಕುಲಕರ್ಣಿ, ಸಾವಿತ್ರಿ ಮಾಶ್ಯಾಳ, ಎಸ್.ಐ.ಹೈದ್ರಾಬಾದ್, ಎ.ಎಸ್.ಚಿತ್ತವಾಡಗಿ, ಎ.ಬಿ.ಪಟ್ಟದಕಲ್ಲ ಇದ್ದರು.