ವಿಜಯಪುರ
ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲೊಂದಾದ ಬಬಲೇಶ್ವರ ತಾಲೂಕಿನ ಕೃಷ್ಣಾನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಮಂಡಳಿ ಚುನಾವಣೆಗೆ ಕಣಗಣನೆ ಶುರುವಾಗಿದೆ.
ಸೆ.1ರಂದು ಮತದಾನ ಹಾಗೂ ಎಣಿಕೆ ಕಾರ್ಯ ನಡೆಯಲಿದ್ದು, ಆಡಳಿತ ಹಿಡಿಯಲು 3 ಬಣಗಳ ನಡುವೆ ನಡೆಯುತ್ತಿರುವ ಪೈಪೋಟಿಯಲ್ಲಿ ಯಾರಿಗೆ ಅಧಿಕಾರ ದಕ್ಕಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಯಾವ ಬಣಕ್ಕೆ ಸಕ್ಕರೆ ಆಡಳಿತ?
ದಿ.ಬಿ.ಟಿ.ಪಾಟೀಲ ಮೆಮೋರಿ ಯಲ್’ ನಂದಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಶುಕ್ರವಾರ 9ರಿಂದ ಸಂಜೆ 4ರ ತನಕ ಮತದಾನ ಪ್ರಕ್ರಿಯೆ ನಡೆಯಲಿದೆ. ಅದೇ ದಿನ ಸಂಜೆ 5ರ ನಂತರ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.
ಪ್ರತಿಷ್ಠಿತ ಸಹಕಾರಿ ಕಾರ್ಖಾನೆಯ ಆಡಳಿತ ಗಿಟ್ಟಿಸಿಕೊಳ್ಳಲು 3 ಬಣಗಳ ನಡುವೆ ಜಿದ್ದಾಜಿದ್ದಿಯ ಕಾಳಗ ನಡೆದಿದೆ. ಸಕ್ಕರೆ ಕಾರ್ಖಾನೆ ಅಧಿಕಾರದಲ್ಲಿ ಅವಳಿ ಜಿಲ್ಲೆಯ ರಾಜಕಾರಣ ಬೆಸೆದುಕೊಂಡಿದ್ದರಿಂದ ಚುನಾವಣೆ: ವಿಜಯಪುರ-ಬಾಗಲಕೋಟೆ ಜಿಲ್ಲೆಯ ರಾಜಕಾರಣಿಗಳಿಗೆ ತಮ್ಮ ಬೆಂಬಲಿತ ಬಣಕ್ಕೆ ಅಧಿಕಾರ ಕೊಡಿಸುವುದು ಪ್ರತಿಷ್ಠೆ ವಿಷಯವಾಗಿದೆ. ಅದಕ್ಕಾಗಿ ಎರಡೂ ಜಿಲ್ಲೆಯ ನಾಯಕರು ಬೆಂಬಲಿಗರ ಗೆಲುವಿಗಾಗಿ ರಣತಂತ್ರ ಹೆಣೆದಿದ್ದಾರೆ.
17 ಸ್ಥಾನಗಳಿಗೆ ಚುನಾವಣೆ: ಒಬ್ಬ ವ್ಯವಸ್ಥಾಪಕ ನಿರ್ದೇಶಕ, 2 ನಾಮನಿರ್ದೇಶಿತ ಹಾಗೂ 17 ಚುನಾಯಿತ ನಿರ್ದೇಶಕರನ್ನು ಕಾರ್ಖಾನೆ ಆಡಳಿತ ಮಂಡಳಿ ಹೊಂದಿದೆ. ಈಗ 17 ನಿರ್ದೇಶಕ ಸ್ಥಾನಗಳಿಗೆ ಸದ್ಯ ಚುನಾವಣೆ ನಡೆಯುತ್ತಿದೆ.
ಬಳಿಕ ಸರಕಾರದಿಂದ ಮತ್ತು ಡಿಸಿಸಿ, ಬ್ಯಾಂಕ್ ಸೇರಿ ಇಬ್ಬರನ್ನು ನಾಮನಿರ್ದೇಶಿತರನ್ನಾಗಿ ನೇಮಕ ಮಾಡಲಾಗುತ್ತದೆ. 17 ಸ್ಥಾನಗಳ ಪೈಕಿ ಕಬ್ಬು ಬೆಳೆಗಾರರ ಕ್ಷೇತ್ರದಿಂದ 15 (9 ಸಾಮಾನ್ಯ, 2 ಮಹಿಳೆಯರು, 2 ಸ್ಥಾನ ಹಿಂದುಳಿದ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಕಾರ್ಖಾನೆ ಸದಸ್ಯ ಸೊಸೈಟಿಗಳಿಂದ | ನಿರ್ದೇಶಕ (ಬ ವರ್ಗ) ಸ್ಥಾನ, ಕಬ್ಬು ಬೆಳೆಗಾರರಲ್ಲದ ಸದಸ್ಯರಿಂದ 1 ನಿರ್ದೇಶಕ (ಡ ವರ್ಗ) ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಒಟ್ಟು 1684 ಮತದಾರಂದು ಇದರಲ್ಲಿ ನಿಯಮ ಪ್ರಕಾರ ಅರ್ಹತೆ ಇದ್ದವರಿಗೆ ಮತದಾನದ ಅವಕಾಶ ಇರುತ್ತದೆ. 38 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ತ್ರಿಕೋನ ಸ್ಪರ್ಧೆ
ವಿಜಯಪುರ-ಬಾಗಲಕೋಟೆ ಜಿಲ್ಲೆಯಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಹಿಡಿಯುವುದೇ ರಾಜಕೀಯ ಪ್ರತಿಷ್ಠೆಯಾಗಿದೆ. ಹೀಗಾಗಿ ಪ್ರತಿ ಚುನಾವಣೆಯಲ್ಲಿ ಬಣ ರಾಜಕಾರಣ ಎ ವರ್ಗ, 1 ಎಸ್ಸಿ ಹಾಗೂ 1 ಎಸ್‌ಟಿ) ನಿರ್ದೇಶಕರ ಹುಟ್ಟಿಕೊಳ್ಳುತ್ತದೆ. ಈ ಹಿಂದಿನ ಚುನಾವಣೆಗಳಲ್ಲಿ ಎರಡು ಬಣಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು, ಆದರೆ, ಈ ಸಲದ ಚುನಾವಣೆಯಲ್ಲಿ 3ನೇ ಬಣ ಅಸ್ತಿತಕ್ಕೆ ಬಂದಿದ್ದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಹಿಂದಿನ ಅವಧಿಗಳಲ್ಲಿ ಶಶಿಕಾಂತಗೌಡ ಪಾಟೀಲ ಹಾಗೂ ಕುಮಾರ ದೇಸಾಯಿ ನೇತೃತ್ವದ ಬಣ ಅಧಿಕಾರ ಹಿಡಿದಿದ್ದವು. ಈ ಬಾರಿಯೂ ಎರಡೂ ಬಣಗಳು ಮತ್ತೆ ಪೈಪೋಟಿ ನಡೆಸಿವೆ. ಆದರೀಗ ಎರಡೂ ಬಣಗಳಿಗೆ ಟಕ್ಕರ್ ಕೊಡಲು ರಮೇಶ ಬಿದನೂರ ನೇತೃತ್ವದಲ್ಲಿ ನಂದಿ ಸಮಾನ ಮನಸ್ಕರ ರೈತರ ವೇದಿಕೆ ಹೆಸರಿನ ಬಣ ಮುಂದಾಗಿದೆ.