ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆ ಅದ್ವಾನಗಳ ಆಗರವಾಗಿ ಪರಿಣಮಿಸಿದ್ದು, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಆಸ್ಪತ್ರೆ ಇದೀಗ ಸೂಕ್ತ ಸೌಲಭ್ಯಗಳಿಲ್ಲದೆ ಪಾಳು ಬಿದ್ದಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದ್ದು, ಆಸ್ಪತ್ರೆ ತುಂಬೆಲ್ಲ ಕಾಂಡೋಮ್ಗಳು ಬಿದ್ದುಕೊಂಡಿವೆ. ರೋಗಿಗಳಿಗೆ ಚಿಕಿತ್ಸೆ ನೀಡಬೇಕಿದ್ದ ಆಸ್ಪತ್ರೆಯಲ್ಲಿ ಅನೈತಿಕ ಚಟುವಟಿಕೆ ಆರೋಪ ಕೇಳಿಬಂದಿದ್ದು, ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ನರೇಗಲ್ ಪಟ್ಟಣದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಗೆ ಪ್ರವೇಶಿಸಿದರೆ ಸಾಕು ಅಸಹ್ಯ ವಸ್ತುಗಳ ದರ್ಶನವಾಗುತ್ತಿದೆ.
ಹೊಸ ಕಟ್ಟಡದ ಕೊಠಡಿಗಳಲ್ಲಿ ಪ್ಯಾಕ್ಡ್ ಹಾಗೂ ಬಳಕೆ ಮಾಡಿದ ಕಾಂಡೋಮ್ಗಳೇ ಕಾಣಿಸುತ್ತಿದ್ದು, ಆಸ್ಪತ್ರೆ ಉದ್ಘಾಟನೆಯಾಗಿ ಮೂರು ವರ್ಷಗಳು ಕಳೆದರೂ ರೋಗಿಗಳಿಗೆ ಅದರ ಪ್ರಯೋಜನ ದೊರೆಯದಂತಾಗಿದ್ದು, ಅಂದಿನ ಶಾಸಕ ಕಳಕಪ್ಪ ಬಂಡಿ ಅವರಿಂದ ಆಸ್ಪತ್ರೆ ಲೋಕಾರ್ಪಣೆಗೊಂಡಿತ್ತು. ಆಸ್ಪತ್ರೆಗೆ ಸಿಬ್ಬಂದಿ ನೇಮಕ, ಸೂಕ್ತ ಉಪಕರಣಗಳು ಹಾಗೂ ಪರಿಕರಗಳನ್ನು ಒದಗಿಸಿಕೊಡುವುದಾಗಿ ಉದ್ಘಾಟನೆ ವೇಳೆ ಶಾಸಕರು ಭರವಸೆ ನೀಡಿದ್ದರು. ಮೇಲ್ನೋಟಕ್ಕೆ ನೋಡುವವರಿಗೆ ಆಸ್ಪತ್ರೆಗೆ ಹೊರಗಡೆಯಿಂದ ಬೀಗ ಹಾಕಿದೆ.
ಆದರೂ ಒಳಗಡೆಯ ಚಿತ್ರಣ ಬೇರೆಯೇ ರೀತಿಯಾಗಿದ್ದು, ಆಸ್ಪತ್ರೆ ಕಟ್ಟಡದಲ್ಲಿ ಅನೈತಿಕ ಚಟುವಟಿಕೆ ಮಾಡುವವರು ಯಾರು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯಕೀಯ ಸೌಕರ್ಯ ಹಾಗೂ ಸಿಬ್ಬಂದಿ ನಿಯೋಜನೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದು ಬೆಳಿಗೆ ಬಂದಿದೆ.