ನವದೆಹಲಿ: ಬಿಜೆಪಿ ಸೇರಬಹುದು ಎಂಬ ವದಂತಿಗಳ ಮಧ್ಯೆ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ರೈತರ ವಿಚಾರವಾಗಿ ಕೇಂದ್ರ ಸರ್ಕಾರ ತಿವಿದಿದ್ದಾರೆ.
ರೈತರ ಪ್ರತಿಭಟನೆ ನಡುವೆ ಇಂದು ಭಾನುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಧು, ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎನ್ನುವುದು ಹಸಿ ಸುಳ್ಳು ‘ರೈತರಿಗೆ ಎಂಎಸ್ಪಿ ಮತ್ತು ಆದಾಯವನ್ನು ಎರಡು ಪಟ್ಟು ಹೆಚ್ಚಿಸುತ್ತೇವೆ ಎನ್ನುತ್ತಾರೆ. ಈ ಪ್ರಪಂಚದಲ್ಲಿ ಇದಕ್ಕಿಂತ ದೊಡ್ಡ ಸುಳ್ಳು ಇದೆಯೇ?’ ಎಂದು ಕಾಂಗ್ರೆಸ್ನ ಪಂಜಾಬ್ ಘಟಕದ ಮಾಜಿ ಅಧ್ಯಕ್ಷರೂ ಆಗಿರುವ ಸಿಧು ಲೇವಡಿ ಮಾಡಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಎನ್ಡಿಎ ಸರ್ಕಾರದ ವಿರುದ್ಧ ಸಿಧು ಈ ಮೂಲಕ ಟೀಕಾ ಪ್ರಹಾರ ಮಾಡಿದ್ದಾರೆ. ನರೇಂದ್ರ ಮೋದಿ ಹಿಂದೆ ರೈತರ ಆದಾಯ ದ್ವಿಗುಣಗೊಳಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಹಾಗೆಯೇ, ಕೆಲ ಬೆಳೆಗಳಿಗೆ ಯುಪಿಎ ಅವಧಿಯಲ್ಲಿ ಇದ್ದುದಕ್ಕಿಂತಲೂ ಎಂಎಸ್ಪಿ ಈಗ ಎರಡು ಪಟ್ಟು ಹೆಚ್ಚಾಗಿದೆ ಎಂದು ಕೆಲ ಬಿಜೆಪಿ ನಾಯಕರು ಹೇಳಿದ್ದುಂಟು ಎಂದು ಹೆಳಿದರು.
ನವಜ್ಯೋತ್ ಸಿಂಗ್ ಸಿಧು ಈ ಅಭಿಪ್ರಾಯಗಳನ್ನು ಹಸಿ ಸುಳ್ಳು ಎಂದು ಬಣ್ಣಿಸಿದ್ದು, ‘ಸರ್ಕಾರ ಎಂಎಸ್ಪಿ 40 ರೂ ಹೆಚ್ಚಿಸಿ, ರೈತರಿಂದ 400 ರೂ ಕಸಿದುಕೊಳ್ಳುತ್ತಿದೆ,’ ಎಂದು ಗಂಭೀರ ಆರೋಪ ಮಾಡಿದರು.